ಮಂಡ್ಯ: ಮಾಜಿ ಸಂಸದೆ ರಮ್ಯಾ ಮತ್ತೆ ಮಂಡ್ಯ ಜಿಲ್ಲೆಗೆ ಎಂಟ್ರಿ ಕೊಡಲು ಸಿದ್ಧತೆ ನಡೆಸಿದ್ದಾರೆ ಎಂಬ ವಿಚಾರವೊಂದು ಮೂಲಗಳಿಂದ ತಿಳಿದುಬಂದಿದೆ.
ಈ ಮೂಲಕ ಮಂಡ್ಯ ಬಿಟ್ಟು ಹೋಗಲ್ಲ ಎಂದ ರಮ್ಯಾ ಮತ್ತೆ ಶೀಘ್ರದಲ್ಲೇ ವಾಪಸ್ಸಾಗಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ರಮ್ಯಾ ವಾಸವಿದ್ದ ಮನೆ ಕ್ಲೀನಿಂಗ್ ಕೆಲಸ ಶುರುವಾಗಿದೆ. ನವೆಂಬರ್ 29 ಹುಟ್ಟುಹಬ್ಬದಂದೇ ಮಂಡ್ಯದಲ್ಲಿ ಮತ್ತೆ ಪದ್ಮಾವತಿ ಪರ್ವ ಆರಂಭವಾಗಲಿದೆಸ. ರಮ್ಯಾಗೆ ಮಂಡ್ಯದಲ್ಲೇ ಟಿಕೆಟ್ ನೀಡಿ ಜಿಲ್ಲೆಯ ನಾಯಕತ್ವ ನೀಡಲು ನಡೆದಿದೆ ಸಿದ್ಧತೆ ನಡೆಸಲಾಗುತ್ತಿದೆ ಎಂಬುದಾಗಿ ತಿಳಿದುಬಂದಿದೆ.
Advertisement
ಇನ್ನು ಚುನಾವಣೆ ಹತ್ತಿರ ಬರುತ್ತಿದ್ದಂತೆ ಮಂಡ್ಯದಲ್ಲಿ ರಾಜಕಾರಣ ಗರಿಗೆದರಿದ್ದು, ಇಂದು ಶಾಸಕ ಅಂಬರಿಶ್ ಕಾಂಗ್ರೆಸ್ ಹಿರಿಯ ನಾಯಕ ಜಿ.ಮಾದೇಗೌಡ ಜೊತೆ ಒಂದು ಗಂಟೆಗಳ ಕಾಲ ಗೌಪ್ಯ ಮಾತುಕತೆ ನಡೆಸಿದ್ದಾರೆ.
Advertisement
Advertisement
ಮಂಡ್ಯದಲ್ಲಿ ನಡೆದ ಟಿಪ್ಪು ಜಯಂತಿಗೆ ಗೈರಾಗಿದ್ದ ಅಂಬಿ ರಾತ್ರಿ ಮಂಡ್ಯದ ಹೊರವಲಯದಲ್ಲಿರುವ ತಮ್ಮ ಆಪ್ತ ಅಮರಾವತಿ ಚಂದ್ರಶೇಖರ್ ನಿವಾಸಕ್ಕೆ ಜಿ.ಮಾದೇಗೌಡರನ್ನು ಕರೆಸಿಕೊಂಡು ಗೌಪ್ಯ ಮಾತುಕತೆ ನಡೆಸಿದ್ದರು. ಮಾಜಿ ಸಂಸದೆ ರಮ್ಯಾ ಮಂಡ್ಯದಲ್ಲಿ ಸ್ವಂತ ಮನೆ ಮಾಡಿ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ರಮ್ಯಾ ಸ್ಪರ್ಧಿಸುತ್ತಾರೆ ಅನ್ನೋ ಮಾತು ಕಿವಿಗೆ ಬೀಳುತ್ತಲೇ ಕ್ಷೇತ್ರಕ್ಕೆ ಆಗಮಿಸಿದ ಅಂಬಿ ಮಾದೇಗೌಡರೊಂದಿಗೆ ಗೌಪ್ಯ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಂಬರೀಶ್, ಮಾದೇಗೌಡರು ನನ್ನ ತುಂಬಾ ಇಷ್ಟಪಡ್ತಾರೆ. ಅವರೊಂದಿಗೆ ಮಾತನಾಡಬೇಕೆನಿಸಿತು ಮಾತನಾಡಿದ್ದೇನೆ. ರಾಜಕೀಯ ಚರ್ಚೆ ನಡೆದಿಲ್ಲ ಎಂದ ಅವರು ನನಗೆ ಟಿಕೆಟ್ ಕೊಡೋದು ಬಿಡೋದು ಹೈಕಮಾಂಡ್ ಗೆ ಬಿಟ್ಟ ವಿಚಾರ ಅಂತ ಹೇಳಿದ್ರು.
Advertisement
ಇದನ್ನೂ ಓದಿ: ರಾಹುಲ್ ಗಾಂಧಿಯನ್ನ ಧೋನಿಗೆ ಹೋಲಿಸಿದ ರಮ್ಯಾ
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರೇ ಇತ್ತೀಚೆಗೆ ನನಗೆ ಟಿಕೆಟ್ ಕೊಡುವುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದಿದ್ದಾರೆ. ಅಧ್ಯಕ್ಷರೇ ಹಾಗೆ ಹೇಳಿದ ಮೇಲೆ ನಮಗೆ ಟಿಕೆಟ್ ಕೊಡುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ರಮ್ಯಾ ರಾಜ್ಯ ರಾಜಕಾರಣಕ್ಕೆ ಬರುವ ವಿಚಾರ ಗೊತ್ತಿಲ್ಲ. ಬಂದರೆ ಸಂತೋಷ. ನಾನು ಎಲ್ಲಿಯೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಅವರು ಹೇಳಿಲ್ಲ ಅಂತ ಅಂಬರಿಶ್ ತಿಳಿಸಿದ್ರು.
ಇದನ್ನೂ ಓದಿ: ಪ್ರಧಾನಿ ಮೋದಿಯನ್ನು ಕೆಣಕಲು ಹೋಗಿ ಪೇಚಿಗೆ ಸಿಲುಕಿದ ರಮ್ಯಾ
ಮತ್ತೆ ರಾಜ್ಯ ರಾಜಕೀಯಕ್ಕೆ ರಮ್ಯಾ: ಸಿಎಂ ಆಗ್ತಾರಾ ಮೋಹಕ ತಾರೆ? https://t.co/puSPE7Rpf4#Ramya #Congress #Karnataka #KPCC #Elections #Mandya #AICC pic.twitter.com/pbzsGUuKzw
— PublicTV (@publictvnews) October 16, 2017
'ವಾಟ್ಸಪ್’ನಲ್ಲಿ ಆರ್‍ಎಸ್‍ಎಸ್, ಮೋದಿ ವಿರುದ್ಧ ರಮ್ಯಾ ವಾಗ್ದಾಳಿ https://t.co/G5EyrWVKPO#Ramya #Modi #RSS #Congress #BJP pic.twitter.com/D1bD9WyfpK
— PublicTV (@publictvnews) October 26, 2017