Connect with us

Bengaluru City

ರಾಹುಲ್ ಗಾಂಧಿಯನ್ನ ಧೋನಿಗೆ ಹೋಲಿಸಿದ ರಮ್ಯಾ

Published

on

Share this

ಬೆಂಗಳೂರು: ಮಾಜಿ ಸಂಸದೆ ಹಾಗೂ ಎಐಸಿಸಿಯ ಸಾಮಾಜಿಕ ಜಾಲತಾಣ ಮೇಲ್ವಿಚಾರಕಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿರ್ತಾರೆ. ಕಾಂಗ್ರೆಸ್‍ನ ಸಾಮಾಜಿಕ ಜಾಲತಾಣ ಮೇಲ್ವಿಚಾರಕಿಯಾದ ಮೇಲಂತೂ ಪ್ರಧಾನಿ ಮೋದಿ ವಿರುದ್ಧ ಟ್ರೋಲ್‍ಗಳು ಹಾಗೂ ಪೋಸ್ಟ್ ಗಳನ್ನ ಹಾಕೋದು ಜೊತೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯನ್ನ ಹೊಗಳುವಂತಹ ಪೋಸ್ಟ್ ಗಳನ್ನ ಹಾಕ್ತಿರ್ತಾರೆ. ಇದೀಗ ರಾಹುಲ್ ಗಾಂಧಿಯನ್ನ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ಧೋನಿಗೆ ಹೋಲಿಸಿರೋ ಪೋಸ್ಟ್ ವೊಂದನ್ನ ರಮ್ಯಾ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.

ರಾಹುಲ್ ಗಾಂಧಿ ಹಾಗೂ ಧೋನಿಗೆ ಇರೋ ಸಾಮ್ಯತೆ ಏನು? ಇಬ್ಬರೂ ದ್ವೇಷಿಗಳಿಂದ ಕಡೆಗಣಿಸಲ್ಪಟ್ಟಿದ್ರು. ಆದ್ರೆ ಇಬ್ಬರೂ ಭಯಂಕರ ಕಮ್ ಬ್ಯಾಕ್ ಮಾಡಿದ್ದಾರೆ. ಇದೇ ರೀತಿ ಇರಲಿದ್ದಾರೆ ಎಂಬ ಪೋಸ್ಟ್ ವೊಂದನ್ನ ಹಂಚಿಕೊಂಡಿದ್ದಾರೆ. ಇದು ವಾಟ್ಸಪ್‍ನಲ್ಲಿ ಬಂದಿದ್ದು ಅಂತ ಹೇಳಿಕೊಂಡಿದ್ದಾರೆ.

ಪ್ರಧಾನಿ ಮೋದಿ ಹುಟ್ಟುಹಬ್ಬದಂದು “ಪ್ರಧಾನಿ ಮೋದಿ ಹಾಗೂ ಆರ್. ಅಶ್ವಿನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಭಾರತದ ಅತ್ಯುತ್ತಮ ಸ್ಪಿನ್ನರ್‍ಗಳು”ಅಂತ ವ್ಯಂಗ್ಯವಾಗಿ ರಮ್ಯಾ ಟ್ವೀಟ್ ಮಾಡಿದ್ದರು.

https://twitter.com/divyaspandana/status/909420816923799554

Click to comment

Leave a Reply

Your email address will not be published. Required fields are marked *

Advertisement