ಮಾದಕ ವಸ್ತು ಪ್ರಕರಣದಲ್ಲಿ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ (Rakul Preet Singh) ಸಹೋದರ ಅಮನ್ ಪ್ರೀತ್ ಸಿಂಗ್ (Aman Preet Singh) ಅವರನ್ನ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮಗನ ಮದುವೆ ಬೆನ್ನಲ್ಲೇ ಕ್ಷಮೆಯಾಚಿಸಿದ ನೀತಾ ಅಂಬಾನಿ
ಸೈಬರಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾರ್ಕೋಟಿಕ್ಸ್ ಬ್ಯೂರೋ ಮತ್ತು ರಾಜೇಂದ್ರ ನಗರ ಎಸ್‌ಒಟಿ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ನಂತರ ಮಾದಕವಸ್ತು ಪ್ರಕರಣದಲ್ಲಿ ಸಂಬಂಧಪಟ್ಟಿರುವುದಾಗಿ ಅವರನ್ನ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಅಮನ್ ಪ್ರೀತ್ ನಾಲ್ವರು ನೈಜೀರಿಯನ್ನರಿಂದ ಕೊಕೇನ್ ಖರೀದಿಸುತ್ತಿದ್ದರು. ಈ ವೇಳೆ ಅವರನ್ನ ಬಂಧಿಸಲಾಗಿದೆ. ಇದೇ ವೇಳೆ ಸುಮಾರು 2 ಕೋಟಿ ರೂ. ಮೌಲ್ಯದ 200 ಗ್ರಾಮ್ ಕೊಕೇನ್ ಸಹ ವಶಪಡಿಸಿಕೊಂಡಿದ್ದಾರೆ. ಇದನ್ನು ಅನ್ನು ಅಮತ್ ಪ್ರೀತ್ ಖರೀದಿಸಿದ್ದರು ಎಂದು ಹೇಳಲಾಗಿದೆ.
ಈ ಹಿಂದೆ ಮಾದಕ ವಸ್ತು ಸೇವನೆ ಪ್ರಕರಣ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಕುಲ್ ಪ್ರೀತ್ ಸಿಂಗ್ ಸಹ ವಿಚಾರಣೆ ಎದುರಿಸಿದ್ದರು. ಹಲವು ಬಾರಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿತ್ತು. ಸದ್ಯ ಅಮನ್‌ಪ್ರೀತ್ ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.