ಸೈಲೆಂಟ್ ಆಗಿ ಎಂಗೇಜ್ ಆದ ‘ಬಿಗ್‌ ಬಾಸ್ʼ ರಕ್ಷಾ ಸೋಮಶೇಖರ್

Public TV
1 Min Read
raksha som

ಮೇ 1, ಡಿಯರ್ ವಿಕ್ರಮ್, ಮಿಸ್ಟರ್ ಜೈ, ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ‘ಬಿಗ್ ಬಾಸ್'(Bigg Boss Kannada) ಖ್ಯಾತಿಯ ರಕ್ಷಾ ಸೋಮಶೇಖರ್ (Raksha Somashekar) ಅವರು ಸೈಲೆಂಟ್ ಆಗಿ ಗೆಳೆಯ ನತನ್ ಜಾನಿ (Nathan Johny) ಜೊತೆ ಎಂಗೇಜ್ ಆಗಿದ್ದಾರೆ. ಸದ್ಯ ಎಂಗೇಜ್‌ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

raksha som 1

ಕಿರುತೆರೆಯ ಬಿಗ್ ಶೋ ಬಿಗ್ ಬಾಸ್ ಕಾರ್ಯಕ್ರಮ ಮೋಡಿ ಮಾಡಿದ್ದ ರಕ್ಷಾ ಅವರು ಸಿನಿಮಾ ಮತ್ತು ಉದ್ಯಮ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. ದೀಪಿಕಾ ದಾಸ್, ಶೈನ್ ಶೆಟ್ಟಿ, ಭೂಮಿ ಶೆಟ್ಟಿ ಸೀಸನ್‌ನಲ್ಲಿ ರಕ್ಷಾ ಕೂಡ ಸ್ಪರ್ಧಿಯಾಗಿ ಗಮನ ಸೆಳೆದರು.

RAKSHA SOM 2

ಮೇ 20ರಂದು ನಟಿ ರಕ್ಷಾ ಅವರು ಸೈಲೆಂಟ್ ಆಗಿ ನತನ್ ಜಾನಿ ಜೊತೆ ಎಂಗೇಜ್ ಮಾಡಿಕೊಂಡಿದ್ದಾರೆ. ಉದ್ಯಮಿ ನತನ್ ಜೊತೆ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ (Engagement) ನಡೆದಿದೆ. ಅಷ್ಟಕ್ಕೂ ಇದು ಲವ್- ಅರೆಂಜ್ ಎಂಬ ಬಗ್ಗೆ ಮಾಹಿತಿ ಇಲ್ಲ. ಹುಡುಗನ ಬಗ್ಗೆ ರಕ್ಷಾ ಮಾಹಿತಿ ಹೇಳವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ:ಆಟೋ ಚಾಲಕರ ಜೀವನ ಪರಿಚಯಿಸಲಿದೆ ‘ಮೀಟರ್ ಹಾಕಿ ಪ್ಲೀಸ್’ ಸಿರೀಸ್

 

View this post on Instagram

 

A post shared by Raksha (@rakshasom)

ನವಜೋಡಿಗೆ ಬಿಗ್ ಬಾಸ್ ಚೈತ್ರಾ ಕೋಟೂರ್, ಭರತ್ ಭೋಪಣ್ಣ ಸೇರಿದಂತೆ ಹಲವು ನಟ-ನಟಿಯರು ರಕ್ಷಾಗೆ ಶುಭಾಹಾರೈಸಿದ್ದಾರೆ.

Share This Article