ಬಾಲಿವುಡ್ ಕಿರಿಕ್ ಬೆಡಗಿ ರಾಖಿ ಸಾವಂತ್ (Rakhi Sawant) ಸಿನಿಮಾ ಮಾಡಿ ಸುದ್ದಿಯಾಗಿದ್ದಕ್ಕಿಂತ ಕಾಂಟ್ರವರ್ಸಿಯಿಂದ ಹೆಚ್ಚೆಚ್ಚು ಸೌಂಡ್ ಮಾಡಿರೋದು ಜಾಸ್ತಿ. ಅದರಲ್ಲೂ ಪತಿ ಆದಿಲ್ ಖಾನ್ ಜೊತೆಗಿನ ಕಿತ್ತಾಟ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು. ಇದೀಗ ತಮ್ಮ ಬಯೋಪಿಕ್ (Biopic) ಬಗ್ಗೆ ಆಸೆಯನ್ನ ನಟಿ ವ್ಯಕ್ತಪಡಿಸಿದ್ದಾರೆ. ತನ್ನ ಜೀವನ ಚರಿತ್ರೆಯನ್ನ ಕಾಂತಾರ ನಟ ಕಮ್ ಡೈರೆಕ್ಟರ್ ರಿಷಬ್ ಶೆಟ್ಟಿ (Rishab Shetty) ನಿರ್ದೇಶನ ಮಾಡಬೇಕು ಎಂದಿದ್ದಾರೆ.
ರಾಖಿ ಸಾವಂತ್ ಅವರ ಜೀವನದ ಕಥೆ ಇಟ್ಟುಕೊಂಡು ಸಿನಿಮಾ ಮಾಡಲು ತೆರೆಮರೆಯಲ್ಲಿ ಪ್ಲ್ಯಾನ್ ನಡೆಯುತ್ತಿದೆ. ಅದಕ್ಕೆ ನಿರ್ಮಾಪಕರು ಕೂಡ ಮುಂದೆ ಬಂದಿದ್ದಾರೆ. ತಮ್ಮ ಪಾತ್ರವನ್ನು ವಿದ್ಯಾ ಬಾಲನ್ (Vidya Balan) ಮಾಡಿದರೆ ಉತ್ತಮ ಎಂದು ರಾಖಿ ಸಾವಂತ್ ಹೇಳಿದ್ದಾರೆ. ನಿಮ್ಮ ಪಾತ್ರವನ್ನು ನೀವೇ ಮಾಡಬಹುದಲ್ಲ ಎಂದು ನಿರ್ಮಾಪಕರು ರಾಖಿಗೆ ಹೇಳಿದ್ದಾರಂತೆ. ಆ ಬಗ್ಗೆ ನಾನು ಯೋಚಿಸಿಲ್ಲ ಎಂದು ರಾಖಿ ಸಾವಂತ್ ಎಂದಿದ್ದಾರೆ. ಯಾರು ನಿರ್ದೇಶನ ಮಾಡಬೇಕು ಎಂದು ಕೇಳಿದ್ದಕ್ಕೆ ರಿಷಬ್ ಶೆಟ್ಟಿಯ ಹೆಸರನ್ನು ರಾಖಿ ಸಾವಂತ್ ಸೂಚಿಸಿದ್ದಾರೆ. ರಿಷಬ್, ತನ್ನ ಬಯೋಪಿಕ್ ನಿರ್ದೇಶಿಸಿದರೆ ಚೆನ್ನಾಗಿರುತ್ತೆ ಎಂದು ಆಸೆ ವ್ಯಕ್ತಪಡಿಸಿದ್ದಾರೆ.
ಕಥೆ, ಚಿತ್ರಕಥೆ, ಸಂಗೀತ, ನಿರ್ದೇಶನ ಎಲ್ಲ ವಿಭಾಗದಲ್ಲೂ ದೊಡ್ಡ ತಂತ್ರಜ್ಞರನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂದು ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ:ಕರ್ನಾಟಕ ಬಂದ್ ಗೆ ಸ್ಯಾಂಡಲ್ ವುಡ್ ಬೆಂಬಲ: ನಟ-ನಟಿಯರು ಭಾಗಿ
ಸದ್ಯ ರಿಷಬ್ ಶೆಟ್ಟಿ ‘ಕಾಂತಾರ 2’ (Kantara 2) ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಾಂತಾರ ಸಕ್ಸಸ್ ನಂತರ ಪಾರ್ಟ್ 2 ಕೂಡ ಗೆಲುವು ಕಾಣಲೇಬೇಕು ಎಂದು ಪಣ ತೊಟ್ಟಿದ್ದಾರೆ.