ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಅವರು ‘ಗಾಳಿಪಟ’ ಚಿತ್ರದ ಖ್ಯಾತ ನಟಿ ಭಾವನಾ ರಾವ್ ಅವರಿಗೆ ಮದುವೆ ಮಾಡಿಸಿದ್ದಾರೆ.
‘ಪುಟ್ಟಗೌರಿ ಮದುವೆ’ ಧಾರಾವಾಹಿ ಖ್ಯಾತಿಯ ನಟ ರಕ್ಷಿತ್ ಅವರ ಜೊತೆ ಭಾವನಾ ರಾವ್ ದಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ‘ಗಾಂಧಿಗಿರಿ’ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಶನಿವಾರ ಈ ಚಿತ್ರದ ಮದುವೆಯ ಸನ್ನಿವೇಶದ ಚಿತ್ರೀಕರಣ ನಡೆದಿದೆ.
Its shooting time for @directorprems @raginidwivedi24 #RanyanaRaghu @Bhavanaaraao on the sets of #Gandhigiri Film is directed by #Raghuhaasan pic.twitter.com/JECEP0Q7MH
— A Sharadhaa (@sharadasrinidhi) November 24, 2018
ಈ ಚಿತ್ರದ ಚಿತ್ರೀಕರಣ ನಡೆಯುವಾಗ ನಟಿ ರಾಗಿಣಿ ದ್ವಿವೇದಿ ಚಿತ್ರತಂಡದ ಜೊತೆ ತೆಗೆದುಕೊಂಡ ಸೆಲ್ಫಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿ ಕೆಲವರು ರಾಗಿಣಿ ಅವರು ಭಾವನಾ ರಾವ್ ಅವರ ಮದುವೆ ಮಾಡಿಸಿದ್ದಾರೆ ಎಂದು ತಿಳಿದುಕೊಂಡಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಅವರು ನಿರ್ದೇಶಕ ಪ್ರೇಮ್, ರಂಗಾಯಣ ರಘು, ಕುರಿ ಪ್ರತಾಪ್, ಆರುಂಧತಿ ನಾಗ್, ಭಾವನಾ ರಾವ್, ರಕ್ಷಿತ್ ಅವರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ರಘು ಹಾಸನ್ ನಿರ್ದೇಶನ ಮಾಡುತ್ತಿರುವ ಗಾಂಧಿಗಿರಿ ಚಿತ್ರದಲ್ಲಿ ನಿರ್ದೇಶಕ ಪ್ರೇಮ್ ಅಭಿನಯಿಸುತ್ತಿದ್ದಾರೆ.
❤️❤️❤️ https://t.co/xzztjc6fui
— ???? Ragini Dwivedi ???? (@raginidwivedi24) November 24, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv