ಸ್ಯಾಂಡಲ್‌ವುಡ್‌ನ(Sandalwood) ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivdi) ಮತ್ತೆ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.ಸದ್ಯ ಶೂಟಿಂಗ್ ವೇಳೆ ರಾಗಿಣಿಗೆ ಅವಗಢವೊಂದು ಸಂಭವಿಸಿದೆ. ಚಿತ್ರೀಕರಣದ ಸಂದರ್ಭದಲ್ಲಿ ರಾಗಿಣಿ ಕೈಗೆ ಪೆಟ್ಟಾಗಿದೆ.
ಕನ್ನಡದ ವೀರ ಮದಕರಿ, ಕೆಂಪೇಗೌಡ, ಸಿನಿಮಾಗಳ ನಾಯಕಿ ರಾಗಿಣಿ ದ್ವಿವೇದಿಗೆ ಕೈಗೆ ಪೆಟ್ಟಾಗಿದೆ. ಚೆನ್ನೈನಲ್ಲಿ ರಾಗಿಣಿ ನಟನೆಯ ಸಿನಿಮಾವೊಂದರಲ್ಲಿ ಚಿತ್ರೀಕರಣದ ವೇಳೆಯಲ್ಲಿ ಕೈಗೆ ಬಲವಾಗಿ ಪೆಟ್ಟು ಬಿದ್ದಿದೆ. ತಕ್ಷಣ ಸೂಕ್ತ ಚಿಕಿತ್ಸೆ ಕೂಡ ನೀಡಲಾಗಿದೆ. ನಾಲ್ಕು ದಿನಗಳ ಕಾಲ ವೈದ್ಯರು ಬೆಡ್ ರೆಸ್ಟ್ ಹೇಳಿದ್ದಾರೆ. ʻಕಮಾಂಡೋʼ ಸಿನಿಮಾ ಚಿತ್ರೀಕರಣದ ವೇಳೆ ಈ ಅವಗಢ ನಡೆದಿದೆ. ಇದನ್ನೂ ಓದಿ:`ಸಿಂಧೂರ ಲಕ್ಷ್ಮಣ’ ಸಿನಿಮಾ ಬಗ್ಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯೆ
ಸದ್ಯ ಆರೋಗ್ಯದಲ್ಲಿ ಚೇತರಿಕೆಯಿದೆ. ಆದಷ್ಟು ಬೇಗ ಹುಷಾರಾಗಿ, ಚಿತ್ರತಂಡ ಸೇರುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ರಾಗಿಣಿ ತಿಳಿಸಿದ್ದಾರೆ. ನೆಚ್ಚಿನ ನಟಿ ಫಿಟ್ ಆಗಿ ಮತ್ತೆ ಕಮ್‌ಬ್ಯಾಕ್ ಆಗಿ ಎಂದು ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.