ಬೆಂಗಳೂರು: ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಜನರ ಸಹಾಯಕ್ಕೆ ಧಾವಿಸಿದ್ದು, ಜನರಿಗೆ ಉಚಿತ ಗ್ಲೌಸ್‍ಗಳನ್ನು ವಿತರಿಸುತ್ತಿದ್ದಾರೆ.
ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ರಾಗಿಣಿ ರಸ್ತೆಗೆ ಇಳಿದಿದ್ದಾರೆ. ಅಲ್ಲದೆ ಕೊರೊನಾಯಿಂದ ತಪ್ಪಿಸಿಕೊಳ್ಳಲು ಮಾಸ್ಕ್ ಅಲ್ಲ ಗ್ಲೌಸ್‍ಗಳನ್ನು ಧರಿಸಿ ಎಂದು ಹೇಳುವ ಮೂಲಕ ಜನರಿಗೆ ಉಚಿತವಾಗಿ ಕೈ ಗ್ಲೌಸ್‍ಗಳನ್ನು ವಿತರಿಸುತ್ತಿದ್ದಾರೆ. ಯಾವುದಾದರೂ ವಸ್ತುಗಳನ್ನು ಮುಟ್ಟಿದ್ದರೆ ಅದರಿಂದ ಕೊರೊನಾ ಬರುತ್ತೆ. ಹಾಗಾಗಿ ಮಾಸ್ಕ್ ಬದಲು ಕೈ ಗ್ಲೌಸ್‍ಗಳನ್ನು ಕಡ್ಡಾಯವಾಗಿ ಧರಿಸಿ ಎಂದು ರಾಗಿಣಿ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
Advertisement
I want to inform everyone to please use gloves instead of masks …. you need them more …. masks are only if you are ill or if absolute need be …. keeping hands safe and clean is more important WE TOUCH EVERYTHING #Useglovesnotmasks #CoronaAlert pic.twitter.com/Us2ltSoLs9
— ???? Ragini Dwivedi ???? (@raginidwivedi24) March 13, 2020
Advertisement
ರಾಗಿಣಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ, ಮಾಸ್ಕ್ ಬದಲು ಗ್ಲೌಸ್‍ಗಳನ್ನು ಧರಿಸಿ. ಕಾಯಿಲೆ ಬಂದವರು ಮಾಸ್ಕ್ ಗಳನ್ನು ಧರಿಸುತ್ತಾರೆ. ಆದರೆ ನಾವು ನಮ್ಮ ಕೈಗಳಿಂದ ಎಲ್ಲವನ್ನು ಮುಟ್ಟುತ್ತೇವೆ. ಹಾಗಾಗಿ ನಾವು ನಮ್ಮ ಕೈಗಳನ್ನು ಕ್ಲೀನ್ ಆಗಿ ಇಟ್ಟುಕೊಳ್ಳಬೇಕು. ಕೊರೊನಾ ವೈರಸ್‍ನಿಂದ ದೂರವಿರಲು ಎಲ್ಲರೂ ಮಾಸ್ಕ್ ಬದಲು ಗ್ಲೌಸ್‍ಗಳನ್ನು ಧರಿಸಿ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.
Advertisement
Advertisement
ಈ ಹಿಂದೆ ಆರೋಗ್ಯ ಇಲಾಖೆ ಜನರಿಗೆ ಕೊರೊನಾ ಬಗ್ಗೆ ಎಚ್ಚರಿಕೆ ನೀಡಿತ್ತು. ಜನರು ತಮ್ಮ ಕೈಗಳನ್ನು ಶುಚಿಯಾಗಿಟ್ಟುಕೊಳ್ಳಿ. ತಮ್ಮ ಕೈಯಿಂದ ಕಣ್ಣು, ಬಾಯಿ ಹಾಗೂ ಮೂಗನ್ನು ಪದೇ ಪದೇ ಮುಟ್ಟುವುದನ್ನು ಕಡಿಮೆ ಮಾಡಿಕೊಳ್ಳಿ. ಈ ರೀತಿ ಮಾಡುವ ಮೊದಲು ನಿಮ್ಮ ಕೈಗಳನ್ನು ಸೋಪ್ ಅಥವಾ ಸ್ಯಾನಿಟೈಸರ್ ಯಿಂದ ತೊಳೆಯಬೇಕು. ಜೊತೆಗೆ ಮಾಸ್ಕ್ ಧರಿಸಲೇಬೇಕು ಎಂದು ಆರೋಗ್ಯ ಇಲಾಖೆ ಹೇಳಿತ್ತು.