ತಾಯ್ತನದ ಫೋಟೋಶೂಟ್ ಹಂಚಿಕೊಂಡ ‘ರಾಧಾ ಕಲ್ಯಾಣ’ ನಟಿ ರಾಧಿಕಾ ರಾವ್

Public TV
1 Min Read
radhika rao

‘ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ’ ಮತ್ತು ‘ರಾಧಾ ಕಲ್ಯಾಣ’ (Radha Kalyana) ಖ್ಯಾತಿಯ ರಾಧಿಕಾ ರಾವ್ (Radhika Rao) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಬೇಬಿ ಬಂಪ್ (Baby Bump) ಫೋಟೋಶೂಟ್ ಮೂಲಕ ನಟಿ ಸದ್ದು ಮಾಡ್ತಿದ್ದಾರೆ.

radhika rao

ತುಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ರಾಧಿಕಾ ರಾವ್ (Radhika Rao) ಅವರು 2020ರಲ್ಲಿ ಆಕರ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಸ್ನೇಹಿತರಾಗಿದ್ದ ರಾಧಿಕಾ ಮತ್ತು ಆಕರ್ಷ್ ಭಟ್, ಪ್ರೀತಿಸಲು ಆರಂಭಿಸಿದ್ದರು. ಇಬ್ಬರ ಮನೆಯಲ್ಲೂ ಲವ್ ವಿಚಾರ ತಿಳಿಸಿ ಒಪ್ಪಿಸಿ ಮದುವೆ ಆದರು. ಸದ್ಯ ತಾಯಿಯಾಗಿ ಸಂತಸವನ್ನ ವಿಶ್ವ ತಾಯಿಂದಿರ ದಿನದಂದು (ಮೇ.14) ಫೋಟೋಶೂಟ್ ಮೂಲಕ ತಿಳಿಸಿದ್ದಾರೆ. ದೇಸಿ ಲುಕ್‌ನಲ್ಲಿ ನಟಿ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ ಸಿನಿಮಾ ಸೋಲು- ಐಟಂ ಡ್ಯಾನ್ಸ್ ಮಾಡಲು ಸಜ್ಜಾದ ಪೂಜಾ ಹೆಗ್ಡೆ

radhikarao 1 1

ಚಿನ್ನದ ಝರಿ ಬಾರ್ಡರ್‌ನ ಸಾಂಪ್ರದಾಯಿಕ ಸೀರೆಯಲ್ಲಿ ಮಿಂಚಿದ್ದಾರೆ. ರಾಯಲ್ ಥೀಮ್ ಫೋಟೋಶೂಟ್‌ನಲ್ಲಿ ನಟಿ ಯಾವ ರಾಣಿಗಿಂತಲೂ ಕಡಿಮೆಯಾಗಿ ಕಾಣುತ್ತಿಲ್ಲ. ಈ ಕ್ಲಾಸಿ ಬ್ಯಾಕ್‌ಡ್ರಾಪ್ ಒಟ್ಟಾರೆಯಾಗಿ ಫೋಟೋಶೂಟ್‌ನ ನೋಟಕ್ಕೆ ಹೆಚ್ಚು ಅಂದವನ್ನು ನೀಡುತ್ತಿದೆ. ಅಲ್ಲದೆ, ಇದರೊಂದಿಗೆ ಎಥ್ನಿಕ್ ಆಕ್ಸೆಸರಿ, ಚಿನ್ನಾಭರಣಗಳನ್ನು ಧರಿಸುವುದರೊಂದಿಗೆ ಇನ್ನಷ್ಟು ಸುಂದರವಾಗಿ ಕಾಣುತ್ತಿದ್ದಾರೆ.

 

View this post on Instagram

 

A post shared by Radhika Rao (@radhikarao_official)

ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಮಂಗಳೂರು ಹುಡ್ಗಿ, ಹುಬ್ಬಳ್ಳಿ ಹುಡ್ಗ’ ಮೂಲಕ ಟಿವಿಗೆ ಪಾದಾರ್ಪಣೆ ಮಾಡಿದರು ರಾಧಿಕಾ ರಾವ್. ನವಿರಾದ ಪ್ರೇಮಕಥೆಯನ್ನು ಹಾಸ್ಯವಾಗಿ ಪ್ರದರ್ಶಿಸಿದ್ದ ಈ ಧಾರಾವಾಹಿಯು ಬಹುಬೇಗನೆ ಹಿಟ್ ಆಗಿತ್ತು. ಸೃಜನ್ ಲೋಕೇಶ್ ನಿರ್ಮಾಣದಲ್ಲಿ ಈ ಸೀರಿಯಲ್ ಮೂಡಿ ಬಂದಿತ್ತು.

Share This Article