ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ರಾಧಿಕಾ ಪಂಡಿತ್ ಅವರು ನಟ ಕಿಚ್ಚ ಸುದೀಪ್ ಮತ್ತು ಅವರು ಪತ್ನಿ ಪ್ರಿಯಾ ಸುದೀಪ್ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಧನ್ಯವಾದವನ್ನು ತಿಳಿಸಿದ್ದಾರೆ.
`ಕರ್ನಾಟಕ ಚಲನಚಿತ್ರ ಕಪ್'(ಕೆಸಿಸಿ) ಕಾರ್ಯಕ್ರಮ ಆಯೋಜನೆ ಮಾಡಿದ್ದ ಸುದೀಪ್ ಅವರಿಗೆ ರಾಧಿಕಾ ಅವರು ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ರಾಧಿಕಾ ಅವರು ತನ್ನ ಇನ್ ಸ್ಟಾಗ್ರಾಂ ಮತ್ತು ಫೇಸ್‍ಬುಕ್ ನಲ್ಲಿ ಪ್ರಿಯಾ ಹಾಗೂ ಅವರ ಫೋಟೋವನ್ನು ಪೋಸ್ಟ್ ಮಾಡಿದ್ದು, “ಪ್ರಿಯಾ ಅವರು ಅದ್ಭುತವಾದ ವ್ಯಕ್ತಿ. ಕೆಸಿಸಿಯಂತಹ ಸಮಾರಂಭವನ್ನು ಆಯೋಜನೆ ಮಾಡಿದಕ್ಕಾಗಿ ಪ್ರಿಯಾ ಹಾಗೂ ಸುದೀಪ್ ಸರ್ ಗೆ ತುಂಬಾ ಧನ್ಯವಾದಗಳು. `ಕೆಸಿಸಿ’ ಯಲ್ಲಿ ನಾನು ಒಳ್ಳೆಯ ಸಮಯಗಳನ್ನು ಕಳೆದಿದ್ದೇನೆ” ಎಂದು ರಾಧಿಕಾ ಬರೆದು ಕೊಂಡಿದ್ದಾರೆ.
ಇತ್ತೀಚೆಗೆ ಸ್ಯಾಂಡಲ್‍ವುಡ್ ಸ್ಟಾರ್ ಕೊಡಗಿನ ಮಳೆ ಪ್ರವಾಹಕ್ಕೆ ತುತ್ತಾಗಿದ್ದ ಸಂತ್ರಸ್ತರಿಗೆ ಸಹಾಯ ಮಾಡುವ ಸಲುವಾಗಿ `ಕರ್ನಾಟಕ ಚಲನಚಿತ್ರ ಕಪ್'(ಕೆಸಿಸಿ) ಕ್ರಿಕೆಟ್ ಆಡಿ ಯಶಸ್ವಿಯಾಗಿ ಮುಗಿಸಿದ್ದಾರೆ. ಕೆಸಿಸಿ ಆಟ ಎರಡು ದಿನಗಳು ಚಿನ್ನಾಸ್ವಾಮಿ ಕ್ರೀಡಾಂಗಣ ಸ್ಟೇಡಿಯಂನಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಸ್ಯಾಂಡಲ್‍ವುಡ್ ನ ಬಹುತೇಕ ಕಲಾವಿದರು ಭಾಗಿ ಆಗಿದ್ದರು. ನಟರು ಮಾತ್ರವಲ್ಲದೇ ಅವರ ಪತ್ನಿಯರು ಕೂಡ ಪಂದ್ಯವನ್ನು ವೀಕ್ಷಿಸಿ ಎಂಜಾಯ್ ಮಾಡಿದ್ದಾರೆ.
ಈ ವೇಳೆ ರಾಧಿಕಾ ಮತ್ತು ಪ್ರಿಯಾ ಸುದೀಪ್ ಅವರು ಒಟ್ಟಿಗೆ ಸ್ಟೇಡಿಯಂನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸ್ಟಾರ್ ನಟರ ಪತ್ನಿಯರು ಸ್ನೇಹಿತರಾಗಿರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ರಾಧಿಕಾ ಪಂಡಿತ್ ಹಾಗೂ ಪ್ರಿಯಾ ಸುದೀಪ್ ಒಟ್ಟಿಗೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ಅವರು ಫೋಟೋವನ್ನು ಹಾಕಿದ ಬಳಿಕ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.instagram.com/p/BnkxA3MghsP/?hl=en&taken-by=iamradhikapandit