ಬೆಂಗಳೂರು: ಸ್ಯಾಂಡಲ್ವುಡ್ ಸ್ಟಾರ್ ಕಪಲ್ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರದ್ದು ಲವ್ ಮ್ಯಾರೇಜ್ ಎಂಬುದು ತಿಳಿದಿರುವ ವಿಚಾರ. ಇದೀಗ ತಾವು ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದ ಸಂದರ್ಭದಲ್ಲಿ ಯಶ್ಗೆ ತಾನು ಇಟ್ಟ ಹೆಸರನ್ನು ನಟಿ ರಾಧಿಕಾ ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ.
ಹೌದು. ಕೆಲ ದಿನಗಳ ಹಿಂದೆ ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಸಿಂಡ್ರೆಲ್ಲಾ ಈ ವಿಚಾರವನ್ನು ಬಾಯಿಬಿಟ್ಟಿದ್ದಾರೆ. ಆರ್ಜೆ ಜೊತೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಯಶ್ಗೆ ತಾನು ಪ್ರೀತಿಯಿಂದ ಇಟ್ಟ ಹೆಸರನ್ನು ನಟಿ ಬಹಿರಂಗಪಡಿಸಿದ್ದಾರೆ.
ಯಶ್ ಪರಿಚಯವಾದಾಗಿಂದ ಅವರ ಹೆಸರನ್ನು ನನ್ನ ವಾಟ್ಸಾಪ್ ನಲ್ಲಿ ಬೇರೆ ರೀತಿಯಲ್ಲಿ ಸೇವ್ ಮಾಡಿಕೊಂಡಿದ್ದೆ. ಅಂದಿನಿಂದ ಇಂದಿನವರೆಗೂ ಅದೇ ಹೆಸರು ಸೇವ್ ಆಗಿದೆ. ನಾವಿಬ್ಬರೂ ಡೇಟ್ ಮಾಡುತ್ತಿದ್ದ ಸಂದರ್ಭದಲ್ಲಿ ಯಾರಿಗೂ ಗೊತ್ತಾಗಬಾರದೆಂದು ಅವರಿಗೆ ಪೆಟ್ ನೇಮ್ ಒಂದನ್ನು ಇಟ್ಟಿದ್ದೆ. ಈವಾಗಲೂ ಅದೇ ಹೆಸರು ನನ್ನ ಮೊಬೈಲ್ ನಲ್ಲಿ ಇದೆ ಎಂದರು. ಇದನ್ನೂ ಓದಿ: ಸಖತ್ ಸದ್ದು ಮಾಡುತ್ತಿದೆ ಜಡ್ಡುವಿನ ಪುಷ್ಟ ಲುಕ್
ಹೀಗೆ ಮಾತನಾಡುತ್ತಾ ಆ ಹೆಸರನ್ನು ರಾಧಿಕಾ ರಿವೀಲ್ ಮಾಡಿದ್ದಾರೆ. ಮೊದಲ ಬಾರಿಗೆ ಇದನ್ನು ರಿವೀಲ್ ಮಾಡುತ್ತಿದ್ದೇನೆ ಎಂದು ಹೇಳುತ್ತಾ ‘ಡೊಲ್ಲಾ’ ಎಂದು ಹೆಸರಿಟ್ಟಿರುವುದಾಗಿ ಹೇಳಿ ನಕ್ಕರು. ಅಲ್ಲದೆ ಆ ಹೆಸರಿನ ಅರ್ಥವನ್ನು ಕೂಡ ತಿಳಿಸಿದ್ದಾರೆ. ಕೊಂಕಣಿಯಲ್ಲಿ ಡೊಲ್ಲ ಅಂದರೆ ಫ್ಯಾಟ್ ಎಂದರ್ಥ. ಹೀಗಾಗಿ ನಾನು ಆ ಹೆಸರಿಟ್ಟಿರುವುದಾಗಿ ಹೇಳುತ್ತಾ ರಾಧಿಕಾ ನಾಚಿಕೊಂಡಿದ್ದಾರೆ. ಸದ್ಯ ರಾಧಿಕಾ ಪತಿಗಿಟ್ಟ ಪೆಟ್ ನೇಮ್ ರಿವೀಲ್ ಮಾಡಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ರಾಧಿಕಾ ಪಂಡಿತ್ ಹಾಗೂ ಯಶ್ 2016ರ ಡಿಸೆಂಬರ್ 9 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2018 ಡಿಸೆಂಬರ್ ನಲ್ಲಿ ಐರಾ ಜನಿಸಿದರೆ, 2019 ರ ಅಕ್ಟೋಬರ್ ನಲ್ಲಿ ಯಥರ್ವ್ ಹುಟ್ಟಿದ್ದಾನೆ. ಈ ಸ್ಟಾರ್ ಜೋಡಿಗಳಂತೆ ಇವರ ಮಕ್ಕಳು ಸ್ಟಾರ್ ಆಗಿದ್ದು, ಇವರಿಬ್ಬರಿಗೂ ಅಭಿಮಾನಿ ಬಳಗವಿದೆ. ಸೋಷಿಯಲ್ ಮೀಡಿಯಾದಲ್ಲಿ ಯಶ್ ಮಕ್ಕಳು ಈಗಾಗಲೇ ಸೆಲೆಬ್ರಿಟಿ ಆಗಿದ್ದಾರೆ. ಐರಾ ಅಭಿಮಾನಿಗಳ ಪೇಜಿನಿಂದ ಇದೀಗ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದನ್ನೂ ಓದಿ: ಬ್ರೇಕಪ್ ವಿಚಾರವಾಗಿ ಕೊನೆಗೂ ಮೌನ ಮುರಿದ ಅರ್ಜುನ್ ಕಪೂರ್!
View this post on Instagram