ಅಪ್ಪಂದಿರ ದಿನಾಚರಣೆಗೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್

Public TV
1 Min Read
radhika pandit 3

ಸ್ಯಾಂಡಲ್‌ವುಡ್ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದಾರೆ. ಸದ್ಯ ವಿಶ್ವ ಅಪ್ಪಂದಿರ ದಿನಾಚರಣೆಯಂದು ಅಪ್ಪನ ಜೊತೆಗಿನ ಬಾಂಧವ್ಯವನ್ನ ವಿವರಿಸಿ ಚೆಂದದ ಪೋಸ್ಟ್‌ವೊಂದನ್ನ ನಟಿ ಹಂಚಿಕೊಂಡಿದ್ದಾರೆ. ಈ ಕುರಿತ ಪೋಸ್ಟ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಯೋಗರಾಜ್ ಭಟ್ಟರು ಮೀಸೆ ತೆಗೆದಿದ್ದಕ್ಕೆ ಅಜ್ಜಯ್ಯ ಕಾರಣ

RADHIKA PANDIT

ಕಿರಿತೆರೆಯ ‘ನಂದಗೋಕುಲ’ (Nandagokula) ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ನಟಿಸಿದ್ದ ನಾಯಕಿ ರಾಧಿಕಾ, ಬಳಿಕ ಮೊಗ್ಗಿನ ಮನಸ್ಸು ಸಿನಿಮಾ ನಾಯಕಿಯಾಗಿ ಮಿಂಚಿದ್ದರು. ಸ್ಟಾರ್ ಪಟ್ಟ ಇರುವಾಗಲೇ ಯಶ್ (Yash) ಜೊತೆ ರಾಧಿಕಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ರಾಧಿಕಾ ಅವರ ಸಕ್ಸಸ್‌ಗೆ ತಂದೆ ಕೃಷ್ಣ ಪ್ರಸಾದ್ ಪಂಡಿತ್ ಅವರ ಬೆಂಬಲ ಅಪಾರ. ಹೀಗಿರುವಾಗ ನಟಿ ಕೂಡ ತಂದೆಯ ಮುದ್ದಿನ ಮಗಳು ನಾನು ಎಂದು ಮಾತನಾಡಿದ್ದಾರೆ. ತಂದೆಯ ಜೊತೆಗಿನ ಪ್ರೀತಿ, ಬಾಂದವ್ಯದ ಬಗ್ಗೆ ಬಣ್ಣಿಸಿದ್ದಾರೆ.

ನಾನು ಯಾವಾಗಲೂ ಅಪ್ಪನ ಹುಡುಗಿ ಅವನ ಬಳಿಗೆ ಓಡುತ್ತೇನೆ. ನನ್ನಪ್ಪ ನನ್ನ ಮಾರ್ಗದರ್ಶಕ, ನನ್ನ ಹೀರೋ ಎಂದು ರಾಧಿಕಾ ಬರೆದುಕೊಂಡಿದ್ದಾರೆ. ನನ್ನ ತಂದೆ ಜೊತೆಗಿನ ಬಾಂಧವ್ಯ ಇರುವ ಹಾಗೆಯೇ, ಐರಾ ಮತ್ತು ಯಥರ್ವ್‌ ಅವರ ತಂದೆ ಯಶ್ ಜೊತೆಯಿದೆ. ಇದನ್ನೂ ನೋಡಲು ಖುಷಿಯಾಗುತ್ತದೆ ಎಂದಿದ್ದಾರೆ. ಈ ಮೂಲಕ ಅಪ್ಪಂದಿರ ದಿನಾಚರಣೆಗೆ (Fathers Day) ವಿಶೇಷ ಸಂದೇಶ ಹಂಚಿಕೊಂಡಿದ್ದಾರೆ.

ಇನ್ನೂ ‘ಯಶ್ 19’ ಸಿನಿಮಾ ಬಗ್ಗೆ ಅಭಿಮಾನಿಗಳು ಎಂದು ನೋಡ್ತಿದ್ದಾರೆ. ಕೆಜಿಎಫ್ 2 ಸಕ್ಸಸ್ ನಂತರ ಯಶ್ ಮುಂದಿನ ಸಿನಿಮಾ ಬಗ್ಗೆ ಅಪ್‌ಡೇಟ್ ಸಿಗದೇ ನಿರಾಶರಾಗಿದ್ದಾರೆ. ರಾಧಿಕಾ ಪಂಡಿತ್ ಕೂಡ ಚಿತ್ರರಂಗಕ್ಕೆ ಅದ್ಯಾವಾಗ ರೀ ಎಂಟ್ರಿ ಕೊಡುತ್ತಾರೆ ಅಂತಾ ಫ್ಯಾನ್ಸ್ ಎದುರು ನೋಡ್ತಿದ್ದಾರೆ.

Share This Article