ಬಾಲಿವುಡ್ ಬೆಡಗಿ ಕಂಗನಾ ರಣಾವತ್, ಪೂಜಾ ಭಟ್, ಕೊಂಕಣ್ ಸೇನ್, ನಂದಿತಾ ದಾಸ್ ಹಾದಿಯನ್ನೇ ನಟಿ ರಾಧಿಕಾ ಆಪ್ಟೆ (Radhika Apte) ಅನುಸರಿಸುತ್ತಿದ್ದಾರೆ. ನಟಿಯಾಗಿ ಗೆದ್ದಿದ್ದ ರಾಧಿಕಾ ಈಗ ನಿರ್ದೇಶನದತ್ತ (Direction) ಒಲವು ತೋರಿಸಿದ್ದಾರೆ. ಆ್ಯಕ್ಷನ್ ಕಮ್ ಫ್ಯಾಂಟಸಿ ಚಿತ್ರಕ್ಕೆ ಡೈರೆಕ್ಷನ್ ಮಾಡಲು ಹೊರಟಿದ್ದಾರೆ.
ನಟನೆಯ ಜೊತೆ ನಿರ್ದೇಶನ ಮಾಡಲು ರಾಧಿಕಾ ದಿಟ್ಟ ನಿರ್ಧಾರ ಮಾಡಿದ್ದಾರೆ. ತಮ್ಮ ನಿರ್ದೇಶನದ ಪ್ರಾಜೆಕ್ಟ್‌ಗೆ ‘ಕೋಟ್ಯ’ ಎಂದು ಹೆಸರಿಡಲಾಗಿದೆ. ಹಿಂದಿ ಹಾಗೂ ಮರಾಠಿ ಭಾಷೆಯಲ್ಲಿ ಸಿನಿಮಾ ಮೂಡಿ ಬರಲಿದೆ. ನಿರ್ದೇಶನದ ಮೊದಲ ಸಿನಿಮಾದಲ್ಲೇ ಆ್ಯಕ್ಷನ್ ಕಮ್ ಫ್ಯಾಂಟಸಿ ಕಥೆ ಹೇಳೋಕೆ ಹೊರಟಿದ್ದಾರೆ. ಇದನ್ನೂ ಓದಿ:‘ಜೊತೆಯಲಿ ಇರುವೆನು ಹೀಗೆ ಎಂದು’ ಪತ್ನಿಗಾಗಿ ಹಾಡು ಹಾಡಿದ ಯಶ್
ಕಬ್ಬು ಕಡಿಯುವ ವಲಸೆ ಕಾರ್ಮಿಕಳೊಬ್ಬಳು ವೈದ್ಯಕೀಯ ಚಿಕಿತ್ಸೆಯಿಂದ ಅಸಾಧಾರಣ ಶಕ್ತಿ ಪಡೆಯುತ್ತಾಳೆ. ಇದರಿಂದ ತನ್ನ ಕುಟುಂಬವನ್ನು ಸಾಲದಿಂದ ಹೇಗೆ ಮುಕ್ತಗೊಳಿಸುತ್ತಾಳೆ ಎಂಬುದು ಚಿತ್ರದ ಆನ್‌ಲೈನ್ ಕಥೆಯಾಗಿದೆ. ಈ ಮಹಿಳಾ ಪ್ರಧಾನ ಚಿತ್ರವನ್ನು ನಿರ್ದೇಶನ ವಿಕ್ರಮಾದಿತ್ಯ ಮೋಟ್ವಾನೆ ನಿರ್ಮಾಣ ಮಾಡಲಿದ್ದಾರೆ.
ಹಿಂದಿಯ ಪ್ಯಾಡ್‌ಮ್ಯಾನ್, ಅಂಧಾದುನ್, ಸೇರಿದಂತೆ ಹಲವು ಸಿನಿಮಾಗಳಲ್ಲಿ ರಾಧಿಕಾ ನಟಿಸಿದ್ದಾರೆ. ತೆಲುಗು, ತಮಿಳಿನಲ್ಲಿ ಅವರು ನಟಿಸಿ ಸೈ ಎನಿಸಿಕೊಂಡಿದ್ದಾರೆ.