ಡಿಂಪಲ್ ಬೆಡಗಿಗೆ 27ನೇ ಹುಟ್ಟುಹಬ್ಬದ ಸಂಭ್ರಮ- ಇತ್ತ ಬರ್ತ್ ಡೇ ಆಚರಿಸಲ್ಲ ಎಂದ ಅಭಿ

Public TV
2 Min Read
rachitha ram abhishek ambareesh

ಬೆಂಗಳೂರು: ಸ್ಯಾಂಡಲ್‍ವುಡ್ ಡಿಂಪಲ್ ಬೆಡಗಿ ರಚಿತಾ ರಾಮ್ ಅವರು ಇಂದು ತಮ್ಮ 27ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಹುಟ್ಟುಹಬ್ಬ ಕೂಡ ಇದ್ದು, ಅವರು ಆಚರಿಸಿಕೊಳ್ಳುವುದಿಲ್ಲ ಎಂದು ಮೊದಲೇ ಹೇಳಿದ್ದರು.

ಇಂದು ರಚಿತಾ ಅವರ ಹುಟ್ಟುಹಬ್ಬವಿದ್ದು, ಅಭಿಮಾನಿಗಳು ಬುಧವಾರದಿಂದಲೇ ಅವರಿಗೆ ಶುಭಾಶಯ ತಿಳಿಸಲು ಶುರು ಮಾಡಿದ್ದರು. ಈ ವೇಳೆ ರಚಿತಾ ಇನ್‍ಸ್ಟಾಗ್ರಾಂನಲ್ಲಿ ತಮ್ಮ ಫೋಟೋವೊಂದನ್ನು ಹಾಕಿ ಅದಕ್ಕೆ, “ಹುಟ್ಟುಹಬ್ಬದ ಮೊದಲೇ ಶುಭಾಶಯ ತಿಳಿಸಿದ ಅಭಿಮಾನಿಗಳಿಗೆ ಧನ್ಯವಾದಗಳು. ನನ್ನ ಹುಟ್ಟುಹಬ್ಬ ಅಕ್ಟೋಬರ್ 3ರಂದು ಇರುವುದು” ಎಂದು ಪೋಸ್ಟ್ ಮಾಡುವ ಮೂಲಕ ಸ್ಪಷ್ಟಪಡಿಸಿದ್ದಾರೆ.

 

View this post on Instagram

 

Thank you all for wishing me in advance.. My birthday is tomorrow not today..???? (3rd October)

A post shared by Rachita Ram (@rachita_instaofficial) on

‘ಸೀತಾರಾಮ ಕಲ್ಯಾಣ’ ಚಿತ್ರದಲ್ಲಿ ನಾಯಕನಾಗಿ ನಟಿಸಿದ ನಿಖಿಲ್ ಕುಮಾರಸ್ವಾಮಿ ಅವರು ರಚಿತಾ ಜೊತೆ ಕುಳಿತಿರುವ ಫೋಟೋ ಶೇರ್ ಮಾಡಿ ಅದಕ್ಕೆ, “ನನ್ನ ಪ್ರೀತಿಯ ಸ್ನೇಹಿತೆಗೆ ಹುಟ್ಟುಹಬ್ಬದ ಶುಭಾಶಯಗಳು, ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ” ಎಂದು ಬರೆಯುವ ಮೂಲಕ ಶುಭಾಶಯ ತಿಳಿಸಿದ್ದಾರೆ.

 

View this post on Instagram

 

Happy birthday my dear friend,god bless u!!????

A post shared by Nikhil Kumar (@nikhilgowda_jaguar) on

ಇತ್ತ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರ ಹುಟ್ಟುಹಬ್ಬ ಕೂಡ ಇದೆ. ಹೀಗಾಗಿ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರುತ್ತಿದ್ದಾರೆ. ಆದರೆ ಈ ಮೊದಲೇ ಅಭಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲ್ಲ ಎಂದು ತಿಳಿಸಿದ್ದರು.

ಅಭಿ ಪೋಸ್ಟ್ನಲ್ಲಿ ಏನಿದೆ?
ಸುವರ್ಣ ಕರ್ನಾಟಕದ ಎಲ್ಲಾ ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳಿಗೆ ಮತ್ತು ಸ್ವಾಭಿಮಾನಿ ಮಂಡ್ಯದ ಮಹಾ ಜನತೆಗೆ ನನ್ನ ಪ್ರೀತಿಯ ನಮಸ್ಕಾರ, ಇದು ನನ್ನ ಒಂದು ಸಣ್ಣ ಮನವಿ. ನನ್ನ ತಂದೆಗೆ ಎಷ್ಟು ಪ್ರೀತಿ ಕೊಟ್ಟಿದ್ದೀರೋ ನನಗೂ ಅಷ್ಟೇ ಪ್ರೀತಿ ಕೊಟ್ಟು ಇಲ್ಲಿಯವರೆಗೆ ಬೆಳೆಸುತ್ತಾ ಬಂದಿದ್ದೀರಿ. ಚಿಕ್ಕಂದಿನಿಂದ ಇಲ್ಲಿಯವರೆಗೆ ಪ್ರತಿ ವರ್ಷ ತಮ್ಮ ತಮ್ಮ ಊರುಗಳಿಂದ ನನ್ನ ಹುಟ್ಟುಹಬ್ಬಕ್ಕೆ ಬಂದು ನನಗೆ ಆಶೀರ್ವಾದ ಮಾಡಿ ಹಾರೈಸಿದ್ದೀರಿ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಮ್ಮ ಕುಟುಂಬ ಸದಾ ಚಿರಋಣಿ ಎಂದು ಬರೆದುಕೊಂಡಿದ್ದರು.

ಅಷ್ಟೇ ಅಲ್ಲದೇ, ಈ ವರ್ಷ ನನ್ನ ತಂದೆ ದಿವಂಗತರಾಗಿರುವುದರಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸುವ ಬದಲು, ನಾವೆಲ್ಲರೂ ನಮ್ಮ ನಮ್ಮ ಊರುಗಳಲ್ಲಿ, ನಿವಾಸಗಳ ಹತ್ತಿರ ರೆಬೆಲ್ ಸ್ಟಾರ್ ಅಂಬರೀಶ್ ಹೆಸರಲ್ಲಿ ಗಿಡ ನೆಟ್ಟು, ಗೌರವ ಸಲ್ಲಿಸೋಣ. ಆ ಮೂಲಕ ಅವರ ನೆನಪು ನಮ್ಮೊಂದಿಗೆ ಸದಾ ಇರಲಿ ಎಂದು ಅಭಿಷೇಕ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *