ಲಾಸ್ ಏಂಜಲೀಸ್‌ನ ಡಾಲ್ಬಿ ಚಿತ್ರಮಂದಿರದಲ್ಲಿ ಚಿತ್ರಮಂದಿರದಲ್ಲಿ ನಡೆದ ಆಸ್ಕರ್ ಪ್ರಶಸ್ತಿ ಪ್ರದಾನ (Oscars Award 2025) ಸಮಾರಂಭದಲ್ಲಿ ಹಲವಾರು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡ ಕಲಾವಿದರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇನ್ನೂ ಭಾರತದ ಯಾವುದೇ ಸಿನಿಮಾಗಳು ಈ ಬಾರಿ ಆಸ್ಕರ್ ಅವಾರ್ಡ್ ಗೆದ್ದಿಲ್ಲ. ಪ್ರಿಯಾಂಕಾ ಚೋಪ್ರಾ (Priyanka Chopra) ನಿರ್ಮಾಣದ ‘ಅನುಜಾ’ (Anuja) ಚಿತ್ರಕ್ಕೆ ಪ್ರಶಸ್ತಿ ಸಿಕ್ಕಿಲ್ಲ ಅನ್ನೋದು ಬೇಸರದ ಸಂಗತಿ.
ಪ್ರಿಯಾಂಕಾ ಚೋಪ್ರಾ ನಿರ್ಮಾಣದ ‘ಅನುಜಾ’ ಶಾರ್ಟ್ ಫಿಲ್ಮ್ ಬೆಸ್ಟ್ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ‘ಅನುಜಾ’ ವಿಶೇಷವಾದ ಚಿತ್ರವೇ ಆಗಿದೆ. ಈ ಚಿತ್ರದಲ್ಲಿ ಅನುಜಾ ಅನ್ನೋ 9 ವರ್ಷದ ಹುಡುಗಿಯ ಕಥೆ ಇದೆ. ಈ ಕಥೆಯಲ್ಲಿ ದೆಹಲಿ ಗಾರ್ಮೆಂಟ್ ಫ್ಯಾಕ್ಟರಿಯ ಚಿತ್ರವೂ ಇದೆ. ಅನುಜಾಳ ಬದುಕಿನ ಸತ್ಯವೂ ಇದೆ. ಕುಟುಂಬದ ಜವಾಬ್ದಾರಿ ಹೊತ್ತ ಒಬ್ಬ ಹೆಣ್ಣುಮಗಳ ಜೀವನ ಎಷ್ಟು ಕಠಿಣ, ಸವಾಲಿನ ಹಾದಿ ಆಗಿರುತ್ತದೆ ಎಂಬುದನ್ನು ಅನುಜಾ ಮೂಲಕ ಪ್ರೇಕ್ಷಕರಿಗೆ ಕಟ್ಟಿಕೊಡಲಾಗಿದೆ. ಆದರೆ ‘ಅನುಜಾ’ ಆಸ್ಕರ್ ಗೆಲ್ಲೋ ಕನಸು ಭಗ್ನವಾಗಿದೆ. ಇದನ್ನೂ ಓದಿ:ಡಿಕೆಶಿ ಪರ ಬ್ಯಾಟ್ ಬೀಸಿದ ರಮ್ಯಾ
‘ಅನುಜಾ’ (Anuja) ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ಂ ಆಗಿದೆ. ಇದನ್ನು ಆಡಮ್ ಜೆ. ಗ್ರೇವ್ಸ್ ಡೈರೆಕ್ಷನ್ ಮಾಡಿದ್ದಾರೆ. ಈ ಕಿರುಚಿತ್ರವನ್ನು ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ನಿರ್ಮಿಸಿದ್ದಾರೆ.