ಕೆಲವು ಬಾರಿ ಹೀರೋಯಿನ್‌ಗಳ(Actress) ಜೊತೆ ಅಭಿಮಾನಿಗಳು ಅನುಚಿತ ವರ್ತನೆ ಮಾಡುವುದುಂಟು. ಆದರೆ ನಿರ್ದೇಶಕರು ಕೂಡ ಅದೇ ರೀತಿ ವರ್ತಿಸಿದರೆ ಹೇಗೆ? ಅಂಥದೊಂದು ಘಟನೆ ಇದೀಗ ನಡೆದಿದೆ. ಸಿನಿಮಾ ಪ್ರಚಾರ ಕಾರ್ಯದಲ್ಲಿ ಫೋಟೋ ಕ್ಲಿಕ್ಕಿಸುವ ನೆಪದಲ್ಲಿ ಮನ್ನಾರಾ ಚೋಪ್ರಾಗೆ (Mannara Chopra) ನಿರ್ದೇಶಕ ರವಿ ಕುಮಾರ್ (Ravikumar) ಕಿಸ್ ಮಾಡಿದ್ದಾರೆ. ನಿರ್ದೇಶಕನ ನಡೆಗೆ ನೆಟ್ಟಿಗರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ.
ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ತಮ್ಮ ಮುಂಬರುವ ಸಿನಿಮಾ ‘ತಿರಗಬಡರ ಸಾಮಿ’ ಚಿತ್ರದ ಪ್ರಚಾರಕ್ಕೆ ನಟಿ ಮನ್ನಾರ ಅವರ ಜೊತೆಗೆ ಬಂದಿದ್ದರು. ಈ ವೇಳೆ ಕ್ಯಾಮೆರಾಗಳ ಎದುರು ಪ್ರಿಯಾಂಕಾ ಚೋಪ್ರಾ (Priyanka Chopra) ಅವರ ಸಹೋದರ ಸಂಬಂಧಿ ನಟಿ ಮನ್ನಾರಾ ಅವರನ್ನು ನಿರ್ದೇಶಕ ಚುಂಬಿಸಿದ್ದಾರೆ. ಇದಕ್ಕೆ ಹಲವರು ನಿರ್ದೇಶಕನಿಗೆ ಸರಿಯಾಗಿ ಉಗಿದಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ನಟಿ ಮನ್ನಾರ ಅವರು ನಿರ್ದೇಶಕ ಎಎಸ್ ರವಿಕುಮಾರ್ ಚೌಧರಿ ಅವರ ಜೊತೆಗೆ ಕ್ಯಾಮೆರಾಗಳಿಗೆ ಪೋಸ್ ನೀಡುತ್ತಿದ್ದಾರೆ. ಈ ವೇಳೆ ನಿರ್ದೇಶಕ ಆಕೆಯ ಭುಜದ ಸುತ್ತ ಕೈ ಹಾಕಿದ್ದರು. ಇದೇ ವೇಳೆ ಆಕೆಯನ್ನು ಎಳೆದು ಚುಂಬಿಸಿದ್ದಾರೆ. ಇದನ್ನೂ ಓದಿ:ಕುಡಿತದ ಚಟದಿಂದ ಮದುವೆ ಮುರಿದೋಯ್ತು, ಮಗಳು ಕೈ ತಪ್ಪಿ ಹೋದಳು- ನಟಿ ಊರ್ವಶಿ
Director kisses an actress earlier today!pic.twitter.com/JzyBbau45d
— Manobala Vijayabalan (@ManobalaV) August 28, 2023
ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೆ ನಟಿ ಮನ್ನಾರ ಆಶ್ಚರ್ಯದಿಂದ ನಿಂತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಲವರು ಹಂಚಿಕೊಂಡಿದ್ದು, ವೈರಲ್ ಆಗಿತ್ತು. ನಿರ್ದೇಶಕನ ನಡವಳಿಕೆಗೆ ಅನೇಕರು ದೂಷಿಸಿದ್ದಾರೆ.
ನಟಿ ಮನ್ನಾರಾ ಚೋಪ್ರಾ ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು 9 ವರ್ಷಗಳಾಗಿದೆ. ನಟಿಯ ಕೆರಿಯರ್‌ಗೆ ಬಿಗ್ ಬ್ರೇಕ್ ಸಿಕ್ಕಿಲ್ಲ. ‘ತಿರಗಬಡರ ಸಾಮಿ’ ಚಿತ್ರದಿಂದ ನಟಿಗೆ ಯಶಸ್ಸು ಸಿಗುತ್ತಾ ಕಾಯಬೇಕಿದೆ.