ಬಹುಭಾಷಾ ನಟಿ ಪ್ರಿಯಾಮಣಿ (Actress Priyamani) ಸಿನಿಮಾ ಮತ್ತು ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ತಮ್ಮ ಮೊದಲ ಪ್ರೀತಿಯ ಬಗ್ಗೆ ಸಂದರ್ಶನವೊಂದರಲ್ಲಿ ಅಚ್ಚರಿಯ ಮಾಹಿತಿಯೊಂದನ್ನ ಪ್ರಿಯಾಮಣಿ ನೀಡಿದ್ದಾರೆ.
ಕನ್ನಡ,ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಮಿಂಚ್ತಿರುವ ನಟಿ ಪ್ರಿಯಾಮಣಿ ಸದ್ಯ ಮುಸ್ತಫಾ ರಾಜ್ ಜೊತೆ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. 2017ರಲ್ಲಿ ಉದ್ಯಮಿ ಮುಸ್ತಫಾ ರಾಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಿರುವಾಗ ಸಂದರ್ಶನವೊಂದರಲ್ಲಿ ಇದೀಗ ತಮ್ಮ ಮೊದಲ ಲವ್ ಲೈಫ್ ಬಗ್ಗೆ ನಟಿ ಮಾತನಾಡಿದ್ದಾರೆ.
View this post on Instagram
ಟಾಲಿವುಡ್ (Tollywood) `ಆಟಗಾಡು’ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟ ಪ್ರಿಯಾಮಣಿ ಬಳಿಕ ಬಹುಭಾಷೆಗಳಲ್ಲಿ ಮಿಂಚಿದ್ದರು. 2005ರಲ್ಲಿ `ನವ ವಸಂತಂ’ (Navavasantham)ಎಂಬ ಚಿತ್ರದಲ್ಲಿ ತರುಣ್ ಕುಮಾರ್ಗೆ (Tarun Kumar) ಪ್ರಿಯಾಮಣಿ ನಾಯಕಿಯಾಗಿ ಮಿಂಚಿದ್ದರು. ಬಳಿಕ ಸಾಕಷ್ಟು ಸಿನಿಮಾದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಆ ಸಮಯದಲ್ಲಿ ಇಬ್ಬರ ಬಗ್ಗೆ ಡೇಟಿಂಗ್ ಸುದ್ದಿ ಹಬ್ಬಿತ್ತು. ತರುಣ್-ಪ್ರಿಯಾಮಣಿ ಮದುವೆಯಾಗಲಿದ್ದಾರೆ ಎಂದೇ ಸುದ್ದಿಯಾಗಿತ್ತು. ಇದನ್ನೂ ಓದಿ:`ಬಿಗ್ ಬಾಸ್’ ಖ್ಯಾತಿಯ ಅಕ್ಷತಾ ಕುಕ್ಕಿ ಮದುವೆ ಡೇಟ್ ಫಿಕ್ಸ್
ಆದರೆ ಇದೀಗ ಪ್ರೇಮಿಗಳ ದಿನದ ಈ ಸಂದರ್ಭದಲ್ಲಿ ತಮ್ಮ ಮೊದಲ ಲವ್ ಎಂದೇ ಬಿಂಬಿತವಾಗಿದ್ದ ಸಹನಟ ತರುಣ್ ಕುಮಾರ್ ಕುರಿತು ಪ್ರಿಯಾಮಣಿ ಮಾತನಾಡಿದ್ದಾರೆ. `ನವ ವಸಂತಂ’ ಸಿನಿಮಾದ ಚಿತ್ರೀಕರಣದ ವೇಳೆ ನಾನು ಮತ್ತು ತರುಣ್ ಪ್ರೀತಿಸುತ್ತಿದ್ದೇವೆ. ಮದುವೆಯಾಗುತ್ತಿದ್ದೇವೆ ಎಂಬ ಮಾತುಗಳು ಕೇಳಿ ಬಂದಿದ್ದವು. ತರುಣ್ ಅವರ ತಾಯಿ ರೋಜಾ ರಮಣಿ ಶೂಟಿಂಗ್ ಸ್ಥಳಕ್ಕೆ ಬಂದು ಭೇಟಿಯಾದರು. ನೀವಿಬ್ಬರೂ ಒಬ್ಬರನ್ನೊಬ್ಬರು ನಿಜವಾಗಿಯೂ ಪ್ರೀತಿಸುತ್ತೀರಾ ಎಂದು ಅವರು ಹೇಳಿದರು. ಇದು ನಿಜವಾಗಿದ್ದರೆ ನಿಮ್ಮ ಮದುವೆಗೆ ನನ್ನ ಅಭ್ಯಂತರವಿಲ್ಲ. ಏನಾದರೂ ಇದ್ದರೆ, ನನಗೆ ಧೈರ್ಯದಿಂದ ಹೇಳಿ ಎಂದಿದ್ದರು. ಆದರೆ ಇವೆಲ್ಲವೂ ಗಾಳಿ ಸುದ್ದಿ. ಪ್ರೀತಿ ಮಾಡುತ್ತಿದ್ದುದು ನಿಜವೇ ಆಗಿದ್ದರೆ ಹೌದು ಎಂದಿದ್ದರೆ ಸಾಕಿತ್ತು. ಮದುವೆ ಆಗುತ್ತಿತ್ತು. ಒಂದೇ ನಾಯಕನ ಜೊತೆ ಸತತ ಕೆಲ ಚಿತ್ರಗಳನ್ನು ಮಾಡಿದರೆ ಹೀಗೆ ಸುದ್ದಿಯಾಗುತ್ತದೆ. ಇವೆಲ್ಲವೂ ಸುಳ್ಳು. ನಾನು ಈಗ ಪತಿ ಮುಸ್ತಾಫ್ ರಾಜ್ ಜೊತೆ ನೆಮ್ಮದಿಯಿಂದ ಇದ್ದೇನೆ ಎಂದು ನಟಿ ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k