ಕರಾವಳಿ ಬೆಡಗಿ ಪೂಜಾ ಹೆಗ್ಡೆ (Pooja Hegde) ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಿನಿಮಾಗೆ ಕೆಲಸಕ್ಕೆ ಬ್ರೇಕ್ ಕೊಟ್ಟು ವಿದೇಶದ ಜಂಗಲ್‌ನಲ್ಲಿ ನಟಿ ಸುತ್ತಾಟ ನಡೆಸಿದ್ದಾರೆ. ಟ್ರೇಕ್ಕಿಂಗ್‌ನ ಸುಂದರ ಫೋಟೋಗಳನ್ನು ಪೂಜಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ ಸಿನಿಮಾಗೆ ಕೊಂಚ ಬ್ರೇಕ್ ಕೊಟ್ಟು ನಟಿ ವಿದೇಶಕ್ಕೆ ಹಾರಿದ್ದಾರೆ. ಕಾಡಿನ ಗ್ರೀನರಿ ಮಧ್ಯೆ ನಿಂತು ಪ್ರಕೃತಿಯನ್ನು ನೋಡಿ ಖುಷಿಪಟ್ಟಿರುವ ಚೆಂದದ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಈ ವೇಳೆ, ಶರ್ಟ್ ಮತ್ತು ಶಾರ್ಟ್ ಜೀನ್ಸ್ ಧರಿಸಿ ಮಿಂಚಿದ್ದಾರೆ. ಇದನ್ನೂ ಓದಿ:‘ಮುಫಾಸಾ: ದಿ ಲಯನ್ ಕಿಂಗ್’ ಸಿನಿಮಾಗೆ ಸಾಥ್ ನೀಡಿದ ಮಹೇಶ್ ಬಾಬು
View this post on Instagram
ಅಂದಹಾಗೆ, ನಟಿಯ ಖಾಸಗಿ ವಿಚಾರಕ್ಕೆ ಬರೋದಾದ್ರೆ ಬಾಲಿವುಡ್ ಹೀರೋ ರೋಹನ್ ಮೆಹ್ರಾ ಜೊತೆ ಪೂಜಾ ಹೆಸರು ಕೇಳಿ ಬರುತ್ತಿದೆ. ಕೆಲ ತಿಂಗಳುಗಳ ಹಿಂದೆ ನಟಿಯ ಕುಟುಂಬದ ಜೊತೆ ರೋಹನ್ ಕಾಣಿಸಿಕೊಂಡಿದ್ದರು. ಇದು ಇಬ್ಬರ ಡೇಟಿಂಗ್ ಸುದ್ದಿ ಮತ್ತಷ್ಟು ಪುಷ್ಠಿ ನೀಡಿತ್ತು.
ಇನ್ನೂ ಶಾಹಿದ್ ಕಪೂರ್ ಜೊತೆ `ದೇವ’ (Deva) ಸಿನಿಮಾದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದಾರೆ. ಸುನೀಲ್ ಶೆಟ್ಟಿ ಪುತ್ರನ ಜೊತೆ ಸಿನಿಮಾ, ತಮಿಳು ನಟ ಸೂರ್ಯ ನಟನೆಯ 44ನೇ (Suriya 44) ಚಿತ್ರಕ್ಕೂ ಇವರೇ ನಾಯಕಿಯಾಗಿದ್ದಾರೆ.