ಸೌತ್ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಅಣ್ಣನ ಮದುವೆ ಅದ್ದೂರಿಯಾಗಿ ನಡೆದಿದ್ದು, ನಟಿ ಕೂಡ ಮಸ್ತ್ ಆಗಿ ಮಿಂಚಿದ್ದಾರೆ. ಈ ಕುರಿತ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾವುಕ ಬರಹ ಮೂಲಕ ಅತ್ತಿಗೆಗೆ ಸ್ವಾಗತ ಕೋರಿದ್ದಾರೆ.
ತಮಿಳು, ತೆಲುಗು, ಹಿಂದಿ ಚಿತ್ರರಂಗದಲ್ಲಿ ಬ್ಯುಸಿಯಿರುವ ನಟಿ ಪೂಜಾ ಹೆಗ್ಡೆ ಅವರ ಮನೆಯಲ್ಲಿ ಅಣ್ಣನ ಮದುವೆ (Wedding) ಸಂಭ್ರಮ ಕಳೆಗಟ್ಟಿದೆ. ಅಣ್ಣ ರಿಷಬ್ ಹೆಗ್ಡೆ ಮದುವೆಯಲ್ಲಿ ಚೆಂದುಳ್ಳಿ ಚೆಲುವೆ ಪೂಜಾ ಗೊಂಬೆಯಂತೆ ಮಿಂಚಿದ್ದಾರೆ. ಕೇಸರಿ ಬಣ್ಣದ ಸೀರೆಯುಟ್ಟು ಮದುವೆಯಲ್ಲಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: `ಸಾಕ್ಷಾತ್ಕಾರ’ ನಟಿ ಜಮುನಾ ಬಯೋಪಿಕ್ನಲ್ಲಿ ತಮನ್ನಾ ಭಾಟಿಯಾ
ನನ್ನ ಸಹೋದರ ಆತನ ಜೀವನದ ಪ್ರೀತಿಯನ್ನು ಮದುವೆಯಾಗಿದ್ದಾನೆ. ಎಂತಹ ಏರಿಳಿತದ ವಾರ ಅದಾಗಿತ್ತು. ನಾ ಸಂತೋಷದಿಂದ ಕಣ್ಣೀರಿಟ್ಟೆ, ಜೊತೆ ಜೊತೆಗೆ ಮಗುವಿನಂತೆ ನಕ್ಕೆ, ಅಣ್ಣ ನೀನು ನಿನ್ನ ಜೀವನದ ಮತ್ತೊಂದು ಹಂತಕ್ಕೆ ಕಾಲಿರಿಸಿದ್ದು, ನಿನ್ನ ಜೀವನದಲ್ಲಿ ಪ್ರೀತಿ ಶಾಂತಿ ಎಲ್ಲವೂ ತುಂಬಿರಲಿ.
View this post on Instagram
ವೈದ್ಯರಾಗಿರುವ ರಿಷಬ್ ಹೆಗ್ಡೆ, ಶಿವಾನಿ ಸಾಕಷ್ಟು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದೀಗ ಬಹುಕಾಲದ ಗೆಳತಿಯ ಜೊತೆ ಪೂಜಾ ಸಹೋದರ ಸಪ್ತಪದಿ ತುಳಿದಿದ್ದಾರೆ. ನಟಿಯ ಅಣ್ಣನ ಮದುವೆ ಪೋಸ್ಟ್ ನೋಡ್ತಿದ್ದಂತೆ ನಿಮ್ಮ ಮದುವೆ ಯಾವಾಗ ಅಂತಾ ಪೂಜಾಗೆ ನೆಟ್ಟಿಗರು ಪ್ರಶ್ನೆ ಮಾಡ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k