ತೆಲುಗಿನ ಮಾಸ್ ಮಹಾ ರಾಜ ರವಿ ತೇಜ (Ravi Teja) ಅವರು ಹೊಸ ಸಿನಿಮಾ ಅನೌನ್ಸ್ ಮಾಡಿದ್ದಾರೆ. ‘ಕ್ರ್ಯಾಕ್ʼ ಸಿನಿಮಾದ ಸಕ್ಸಸ್ ನಂತರ ಮತ್ತೆ ಗೋಪಿಚಂದ್ ಮಲಿನೇನಿ ಜೊತೆ ಕೈಜೋಡಿಸಿದ್ದಾರೆ. ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ಜೊತೆ ರವಿತೇಜ ರೊಮ್ಯಾನ್ಸ್ ಮಾಡಲಿದ್ದಾರೆ. ಇದನ್ನೂ ಓದಿ:ಡೈರೆಕ್ಟರ್ ಕ್ಯಾಪ್ ತೊಟ್ಟ ‘ಚುಟು ಚುಟು’ ಕೊರಿಯೋಗ್ರಾಫರ್ ಭೂಷಣ್ ಮಾಸ್ಟರ್
ಇತ್ತೀಚಿಗೆ ನಟಿಸಿದ ರವಿತೇಜ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ಹಿಟ್ ಆಗುತ್ತಿದೆ. ಧಮಾಕ, ‘ಕ್ರ್ಯಾಕ್ʼ ಸಿನಿಮಾದ ಸಕ್ಸಸ್ ನಂತರ ಹೊಸ ಬಗೆಯ ಕಥೆಯನ್ನ ರವಿತೇಜ ಆಯ್ಕೆ ಮಾಡಿಕೊಂಡಿದ್ದಾರೆ. ಮಾಸ್ ಜೊತೆ ಕ್ಲಾಸ್ ಆಗಿ ರವಿ ತೇಜ ಮಿಂಚಲಿದ್ದಾರೆ.
ಗಲ್ಲಾಪೆಟ್ಟಿಗೆಯಲ್ಲಿ ಸಾಲು ಸಾಲು ಸಿನಿಮಾಗಳ ಸೋಲನ್ನೇ ಕಂಡಿರುವ ಪೂಜಾ ಹೆಗ್ಡೆ ಅವರು ರವಿ ತೇಜ ಅವರಿಗೆ ನಾಯಕಿಯಾಗಿ ಜೊತೆಯಾಗುತ್ತಿದ್ದಾರೆ. ಇತ್ತೀಚಿಗೆ ಮಹೇಶ್ ಬಾಬು, ಪವನ್ ಕಲ್ಯಾಣ್ ನಟನೆಯ ಸಿನಿಮಾದಿಂದ ಕಿಕ್ ಔಟ್ ಆದ ಮೇಲೆ ಈ ಬಂಪರ್ ಆಫರ್ ಗಿಟ್ಟಿಸಿಕೊಂಡಿದ್ದಾರೆ. ನಿರ್ದೇಶಕ ಗೋಪಿ ಚಂದ್ ಮಲಿನೇನಿ ಅವರೇ ಪೂಜಾಗೆ ಆಫರ್ ನೀಡಿದ್ದಾರೆ.
ಮಹೇಶ್ ಬಾಬು, ಪವನ್ ಕಲ್ಯಾಣ್ ಜೊತೆಗಿನ 2 ಪ್ರಾಜೆಕ್ಟ್‌ಗಳು ಶ್ರೀಲೀಲಾ (Sreeleela) ಪಾಲಾಗಿದೆ. ಸದ್ಯ ಹೊಸ ಕಥೆ, ಆಫರ್‌ಗಾಗಿ ಕಾಯುತ್ತಿದ್ದ ಪೂಜಾ ಹೆಗ್ಡೆಗೆ ಬಂಪರ್ ಆಫರ್ ಸಿಕ್ಕಿದೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಸೋಲನ್ನೇ ಕಂಡಿರುವ ಪೂಜಾಗೆ ಈ ಸಿನಿಮಾ ಸಕ್ಸಸ್ ನೀಡುತ್ತಾ ಎಂಬುದನ್ನ ಕಾದುನೋಡಬೇಕಿದೆ. ಮತ್ತೆ ರವಿ ತೇಜ- ಪೂಜಾ ಹೆಗ್ಡೆ ಕೆಮಿಸ್ಟ್ರಿ ತೆರೆಯ ಮೇಲೆ ಯಾವ ರೀತಿ ಮೂಡಿ ಬರಲಿದೆ ಎಂಬುದರ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ.