ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿದ್ದ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆಗೆ (Pooja Hegde) ಈಗ ಮಾರ್ಕೆಟ್ ಡೌನ್ ಆಗಿದೆ. ಕೈಯಲ್ಲಿ ಒಂದೇ ಒಂದು ಸಿನಿಮಾ ಇಲ್ಲದೇ ಪರದಾಡುತ್ತಿದ್ದಾರೆ. ಚಿತ್ರರಂಗ ಅವರನ್ನ ಐರೆನ್ ಲೆಗ್ ಎಂದು ಕರೆಯುತ್ತಿದೆ. ಶ್ರೀಲೀಲಾ (Sreeleela), ರಶ್ಮಿಕಾ (Rashmika Mandanna) ಎಂಟ್ರಿಯಿಂದ ನಟಿ ಸೈಡ್ ಲೈನ್ ಆಗ್ತಿದ್ದಾರಾ?
ಸೌತ್- ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದ ನಟಿ ಪೂಜಾ ಹೆಗ್ಡೆ ಇತ್ತೀಚಿಗೆ ಬೀಸ್ಟ್, ರಾಧೆ ಶ್ಯಾಮ್ (Radhe Shyam) ಸೇರಿದಂತೆ ಸಾಲು ಸಾಲು ಫ್ಲಾಪ್ ಸಿನಿಮಾಗಳನ್ನ ಕೊಟ್ಟಿದ್ದಾರೆ. ಚಿತ್ರತಂಡದಲ್ಲಿ ಕಿರಿಕ್ ಮಾಡಿಕೊಂಡು ಕೆಲ ಪ್ರಾಜೆಕ್ಟ್‌ಗಳಿಂದ ಹೊರಬಂದಿದ್ದಾರೆ. ಪ್ರಸ್ತುತ ಅವರ ಕೈಯಲ್ಲಿ ಒಂದೇ ಒಂದು ಸಿನಿಮಾ ಕೂಡ ಇಲ್ಲ. ಇದನ್ನೂ ಓದಿ:‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್
ಶ್ರೀಲೀಲಾ, ರಶ್ಮಿಕಾ ಮಂದಣ್ಣಗೆ ಹೆಚ್ಚಿದ ಬೇಡಿಕೆಯಿಂದ ಕೊಂಚ ಪೂಜಾ ಮಾರ್ಕೆಟ್ ಡಲ್ ಆಗಿರೋದು ನಿಜ. ಸಿನಿಮಾ ಚಾನ್ಸ್ ಇಲ್ಲದೇ ಇರುವ ಕಾರಣ ನಟಿ ಜಾಹೀರಾತು ಪ್ರಮೋಟ್ ಮಾಡ್ತಿದ್ದಾರೆ.
ಪ್ರತಿಭೆ ಇದ್ದರೂ ಪೂಜಾ ಎಡವಿದ್ದು ಎಲ್ಲಿ? ಸಿನಿಮಾ ಆಯ್ಕೆಯಲ್ಲಿ ಎಡವಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ. ಒಟ್ನಲ್ಲಿ ಎಲ್ಲಾ ಅಡೆತಡೆಗಳನ್ನ ಮೀರಿ ಲೈಮ್ ಲೈಟ್‌ಗೆ ಬರುತ್ತಾರಾ ಪೂಜಾ ಹೆಗ್ಡೆ ಕಾಯಬೇಕಿದೆ.