CinemaKarnatakaLatestMain PostSandalwoodSouth cinema

ನಟಿ ಪವಿತ್ರಾ ಲೋಕೇಶ್ ನನ್ನ ಬೆಸ್ಟ್ ಫ್ರೆಂಡ್ : ಪತ್ನಿ ರಮ್ಯಾ ಆರೋಪಕ್ಕೆ ನಟ ನರೇಶ್ ತಿರುಗೇಟು

Advertisements

ನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದಾರೆ. ಆ ಕಾರಣಕ್ಕಾಗಿಯೇ ನನಗೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದಾರೆ. ನರೇಶ್ ಅವರಿಗೆ ಡಿವೋರ್ಸ್ ಸಿಕ್ಕ ನಂತರ ಅವರಿಬ್ಬರೂ ಮದುವೆಯಾಗಲಿದ್ದಾರೆ ಎಂದು ನರೇಶ್ ಅವರ ಪತ್ನಿ ರಮ್ಯಾ ಅವರು ಆರೋಪ ಮಾಡಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ನರೇಶ್, ‘ಪವಿತ್ರಾ ಲೋಕೇಶ್ ಮತ್ತು ನನ್ನ ನಡುವಿನ ಸಂಬಂಧಕ್ಕೆ ಬೇರೆ ಅರ್ಥ ಕಲ್ಪಿಸಲಾಗುತ್ತಿದೆ. ನನ್ನ ವೆಲ್ ವಿಶರ್, ನನ್ನ ಬೆಸ್ಟ್ ಫ್ರೆಂಡ್’ ಎಂದು ಹೇಳಿದ್ದಾರೆ.

ನನ್ನ ಹೆಸರನ್ನು ಹಾಳು ಮಾಡುವುದಕ್ಕಾಗಿ ಪವಿತ್ರಾ ಲೋಕೇಶ್ ಅವರ ಹೆಸರನ್ನು ರಮ್ಯಾ ಬಳಸಿಕೊಳ್ಳುತ್ತಿದ್ದಾರೆ ಎಂದು ನರೇಶ್ ಆರೋಪ ಮಾಡಿದ್ದಾರೆ. ಪವಿತ್ರಾ ಲೋಕೇಶ್ ತುಂಬಾ ಒಳ್ಳೆಯವರು. ನಮ್ಮಿಬ್ಬರ ಮಧ್ಯೆ ರಮ್ಯಾ ಹೇಳುವಂತಹ ಯಾವುದೇ ಸಂಬಂಧವಿಲ್ಲ. ಹೀಗೆ ನನ್ನ ಹೆಸರು ಹಾಳು ಮಾಡಿದರೆ, ಅವರಿಗೆ ಲಾಭ ಇರಬಹುದು. ಹಾಗಾಗಿ ಈ ರೀತಿ ಬೆಂಗಳೂರಿನಲ್ಲಿ ಕುಳಿತುಕೊಂಡು ನನ್ನ ಕುಟುಂಬದ ಹೆಸರನ್ನು ಹಾಳು ಮಾಡುತ್ತಿದ್ದಾರೆ’ ಎಂದಿದ್ದಾರೆ ನರೇಶ್. ಇದನ್ನೂ ಓದಿ : ಎಪ್ರಿಲ್ 2ನೇ ವಾರದಲ್ಲಿ ನಟಿ ಕಾವ್ಯ ಶಾ ಮದ್ವೆ : ಮಾಧ್ಯಮ ಲೋಕದ ಹುಡುಗನ ಜತೆ ಸಪ್ತಪದಿ

ಪವಿತ್ರಾ ಲೋಕೇಶ್ ಮತ್ತು ನರೇಶ್ ಸಂಬಂಧದ ವಿಚಾರವಾಗಿ ಅವಹೇಳನಕಾರಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿರುವವರು ಕುರಿತು ಪವಿತ್ರಾ ಲೋಕೇಶ್ ಕೂಡ ಗರಂ ಆಗಿದ್ದು. ಅವರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಎರಡು ದಿನದ ಹಿಂದೆ ಮೈಸೂರಿಗೆ ಬಂದಿದ್ದ ಪವಿತ್ರಾ, ಮೈಸೂರು ಸೈಬರ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಇಂದಿನಿಂದ ತನಿಖೆ ನಡೆಸಿದ್ದಾರೆ.

Live Tv

Leave a Reply

Your email address will not be published.

Back to top button