ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಮದುವೆ (Marriage) ಡೇಟ್ ಕೊನೆಗೂ ಫಿಕ್ಸ್ ಆಗಿದೆ. ನಿಶ್ಚಿತಾರ್ಥ ನಂತರ ಈ ಜೋಡಿ ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದರು. ಕೊನೆಗೂ ಮದುವೆ ದಿನವನ್ನು ಈ ಜೋಡಿ ಫಿಕ್ಸ್ ಮಾಡಿದೆ. ಸೆಪ್ಟೆಂಬರ್ 25 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ಥಾನದಲ್ಲಿ (Rajasthan) ಅದ್ದೂರಿಯಾಗಿಯೇ ಮದುವೆ ಸಮಾರಂಭ ನಡೆಯಲಿದೆ.
Advertisement
ಮೇ 13ರಂದು ನವದೆಹಲಿಯಲ್ಲಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಡಲು ಮುಂದಾಗಿದ್ದರು. ಎಂಗೇಜ್ ಮೆಂಟ್ ದಿನ ಪರಿಣಿತಿ ಹಾಗೂ ರಾಘವ್ ಲಿಪ್ ಲಾಕ್ (Lip Lock) ಮಾಡಿಕೊಂಡ ವಿಡಿಯೋ ಸಖತ್ ವೈರಲ್ ಆಗಿತ್ತು. ಇಬ್ಬರೂ ಹಲವು ದಿನಗಳಿಂದ ಡೇಟಿಂಗ್ ನಡೆಸುತ್ತಿದ್ದರು ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಹಲವರು ವಿಡಿಯೋಗೆ ಕಾಮೆಂಟ್ ಮಾಡಿದ್ದರು.
Advertisement
Advertisement
ಪರಿಣಿತಿ ಚೋಪ್ರಾ (Parineeti Chopra) ಹಾಗೂ ಸಂಸದ ರಾಘವ್ ಚಡ್ಡಾ (Raghav Chadha) ಎಂಗೇಜ್ ಮೆಂಟ್ (Engagement) ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇಬ್ಬರೂ ಒಟ್ಟೊಟ್ಟಿಗೆ ಓಡಾಡುತ್ತಿರುವ ವಿಷಯ ಈ ಸುದ್ದಿಗೆ ಪುಷ್ಠಿ ಕೊಟ್ಟಿತ್ತು. ಆದರೆ, ಅವರು ಈ ವಿಷಯವನ್ನು ನಿರಾಕರಿಸುತ್ತಲೇ ಬಂದಿದ್ದರು. ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಗಾಸಿಪ್ ಗೆ ತೆರೆ ಎಳೆದಿದ್ದರು. ಇದೀಗ ಹಸೆಮಣೆ ಏರಲೂ ಸಿದ್ಧವಾಗಿದ್ದಾರೆ. ಇದನ್ನೂ ಓದಿ:ಚಿಕಿತ್ಸೆಗಾಗಿ ಮತ್ತೆ ಅಮೆರಿಕಾಗೆ ಹಾರಿದ್ರಾ ನಟಿ- ಏನಾಯ್ತು ಸಮಂತಾಗೆ?
Advertisement
ಈ ಜೋಡಿಯ ನಿಶ್ಚಿತಾರ್ಥ ಸಮಾರಂಭಕ್ಕೆ ರಾಜಕೀಯ ಗಣ್ಯರು, ಸಿನಿ ತಾರೆಯರು ಹಾಗೂ ಕ್ರೀಡಾಪಟುಗಳ ಆಗಮಿಸಿದ್ದರು. ಪರಿಣಿತಿ ಸಹೋದರಿ ಪ್ರಿಯಾಂಕಾ ಚೋಪ್ರಾ, ಮನೀಶ್ ಮಲ್ಹೋತ್ರಾ ಸೇರಿದಂತೆ ಹಲವರು ಇಡೀ ಸಮಾರಂಭದಲ್ಲಿ ಮಿಂಚಿದ್ದರು. ದೆಹಲಿಯ (Delhi) ಇಂಡಿಯಾ ಗೇಟ್ ಬಳಿಯ ಕಪುರ್ತಲ ಹೌಸ್ ನಲ್ಲಿ ಪರಿಣಿತಿ ಚೋಪ್ರಾ ಹಾಗೂ ರಾಘವ್ ಉಂಗುರ ಬದಲಾಯಿಸಿಕೊಂಡಿದ್ದರು. ಇದೀಗ ಮದುವೆಗೂ ಹಲವರನ್ನು ಆಹ್ವಾನಿಸಿದ್ದಾರಂತೆ ಜೋಡಿ.
ಹರಿಯಾಣದಲ್ಲಿ ನಡೆದ ಶೂಟಿಂಗ್ ವೇಳೆ ಇಬ್ಬರೂ ಪರಿಚಯವಾಗಿ ಆನಂತರ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಪೋಷಕರ ಒಪ್ಪಿಗೆ ಪಡೆದುಕೊಂಡೇ ಇಬ್ಬರೂ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಘವ್ ಚಡ್ಡಾ ಆಪ್ ಪಕ್ಷದಿಂದ ಎಂಪಿ ಆಗಿದ್ದರೆ, ಪರಿಣಿತಿ ಲೇಡಿಸ್ ವರ್ಸಸ್ ರಿಕ್ಕಿ ಬೇಲ್ ಮೂಲಕ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಈಗಲೂ ಸಿನಿಮಾ ರಂಗದಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ
Web Stories