104 ದಿನಗಳಲ್ಲಿ ರೆಡಿಯಾಯ್ತು ಪರಿಣಿತಿ ಮದುವೆಗೆ ಧರಿಸಿದ ದುಬಾರಿ ಲೆಹೆಂಗಾ

Public TV
2 Min Read
parineeti chopra 5

ಬಾಲಿವುಡ್ ನಟಿ ಪರಿಣಿತಿ ಚೋಪ್ರಾ (Parineeti Chopra) ಮತ್ತು ರಾಘವ್ ಚಡ್ಡಾ (Raghav Chadha) ಸೆ.24ರಂದು ಅದ್ದೂರಿಯಾಗಿ ವಿವಾಹವಾಗಿದ್ದಾರೆ. ನಟಿಯ ಮದುವೆಯ ಫೋಟೋ ವೈರಲ್ ಆಗ್ತಿದ್ದು, ಪರಿಣಿತಿ ಧರಿಸಿದ ಲೆಹೆಂಗಾ ಕೂಡ ನೋಡುಗರ ಗಮನ ಸೆಳೆಯುತ್ತಿದೆ.‌ ನಟಿಯ ಗ್ರ್ಯಾಂಡ್ ಲೆಹೆಂಗಾ ತಯಾರಿಸಲು 104 ದಿನಗಳು ತೆಗೆದುಕೊಂಡಿರುವ ವಿಚಾರದ ಜೊತೆ ಲೆಹೆಂಗಾ ವಿಶೇಷತೆಯ ಬಗ್ಗೆ ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರಾ (Manish Malhotra) ಬಿಚ್ಚಿಟ್ಟಿದ್ದಾರೆ.

parineeti chopra 2 1

ಪರಿಣಿತಿ ಚೋಪ್ರಾ (Parineeti Chopra) ಮದುವೆಗೆ ಲೆಹೆಂಗಾವನ್ನು ತಯಾರಿ ಮಾಡಲು ಸುಮಾರು 2,500 ಗಂಟೆಗಳನ್ನು ತೆಗೆದುಕೊಂಡಿತು ಎಂದು ಮನೀಶ್ ಮಲ್ಹೋತ್ರಾ ಬಹಿರಂಗಪಡಿಸಿದ್ದಾರೆ. ಅಂದರೆ ಬರೋಬ್ಬರೀ 104 ದಿನಗಳು. ಲೆಹೆಂಗಾದ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಂಡಿರುವ ಫ್ಯಾಶನ್ ಡಿಸೈನರ್ ಮನೀಶ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ- ಧ್ರುವ ಸರ್ಜಾ

parineeti chopra 4

ವಧು ಪರಿಣಿತಿ ಚೋಪ್ರಾ ಧರಿಸಿರುವ ಪೀಚ್ ಕಲರ್ ಲೆಹೆಂಗಾ ಸೆಟ್ ಅನ್ನು ಕೈಯಿಂದ ಚಿನ್ನದ ದಾರಗಳನ್ನು ಬಳಸಿ ಕಸೂತಿಯನ್ನು ಮಾಡಲಾಗಿದೆ. ಪರಿಣಿತಿ ಧರಿಸಿದ ಲೆಹೆಂಗಾದಲ್ಲಿ ಕನ್ನಡಿ, ಮೆಟಲ್ ಮತ್ತು ಸುಂದರವಾದ ಮುತ್ತುಗಳನ್ನು ಜೋಡಿಸಲಾಗಿದೆ.

parineeti chopra 1 2

ಡಿಸೈನರ್ ಮನೀಶ್, ಪರಿಣಿತಿಗಾಗಿ ವಿಶೇಷವಾಗಿ ದುಪ್ಪಟ್ಟಾಗಳನ್ನು ಡಿಸೈನ್ ಮಾಡಿದ್ದರು. ಎರಡು ದುಪ್ಪಟ್ಟಾಗಳನ್ನು ಪರಿಣಿತಿ ಚೋಪ್ರಾ ಧರಿಸಿದ್ದರು. ಒಂದನ್ನು ಕುತ್ತಿಗೆ ಮತ್ತು ಎದೆಯ ಮೇಲೆ ಸಾಮಾನ್ಯ ದುಪಟ್ಟಾದಂತೆ ಧರಿಸಿದ್ದರು ಮತ್ತು ಇನ್ನೊಂದನ್ನು ಅವರು ತಲೆಯ ಮೇಲಿನಿಂದ ಇಳಿ ಬಿಟ್ಟಿದ್ದರು. ಇದನ್ನೂ ಓದಿ:ಪರಿಣಿತಿ ಚೋಪ್ರಾ – ರಾಘವ್ ಚಡ್ಡಾ ಅದ್ದೂರಿ ಮದುವೆ ಫೋಟೋಸ್

parineeti chopra 1 3

ಇದರಲ್ಲಿ ಗಮನಿಸಬೇಕಾಗಿರುವುದು ಆ ದುಪ್ಪಟ್ಟಾದ ಹಿಂಭಾಗದಲ್ಲಿ ‘ರಾಘವ್’ (Raghav) ಎಂದು ಚಿನ್ನದ ಜರಿಯಲ್ಲಿ ಕಸೂತಿ ಮಾಡಲಾಗಿತ್ತು. ಬ್ಲೌಸ್ ಕುರಿತು ಹೇಳುವುದಾದರೆ, ಲೆಹೆಂಗಾದಂತೆ ಚಿನ್ನದ ಜರಿಗಳನ್ನು ಹೊಂದಿದ್ದ ಬ್ಲೌಸ್‌ನಲ್ಲಿ ಸ್ವಲ್ಪ ದೊಡ್ಡದಾದ ಮುತ್ತುಗಳನ್ನು ಪೋಣಿಸಲಾಗಿತ್ತು. ನಟಿ ಧರಿಸಿದ ಜ್ಯುವೆಲ್ಲರಿ ಕೂಡ ಮನೀಷ್ ಮಲ್ಹೋತ್ರಾ ಮಳಿಗೆಯಲ್ಲಿ ಖರೀದಿಸಿದ್ದಾರೆ.

parineeti chopra 1 1

ಮದುವೆಯಲ್ಲಿ (Wedding) ಪರಿಣಿತಿ ಸಿಂಪಲ್‌ ಮೇಕಪ್‌ & ಹೇರ್‌ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೂದಲನ್ನೂ ಕಟ್ಟದೇ ಫ್ರಿ ಹೇರ್‌ ಬಿಟ್ಟಿದ್ದರು. ತುಟಿಗೆ ನ್ಯೂಡ್‌ ಲಿಪ್‌ಸ್ಟಿಕ್‌, ಕಣ್ಣುಗಳಿಗೆ ತಿಳಿಯಾದ ಮೇಕಪ್‌ ಮಾಡಿದ್ದರು. ರಾಘವ್‌ ಲೈಟ್‌ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ದರು.

ಸದ್ಯ ಮದುವೆ ಮುಗಿಸಿ ತಮ್ಮ ನಿವಾಸ ದೆಹಲಿಗೆ ಪರಿಣಿತಿ ದಂಪತಿ ಹಿಂದಿರುಗಿದ್ದಾರೆ. ನವಜೋಡಿಗೆ ಅಭಿಮಾನಿಗಳು, ಆಪ್ತರು ಶುಭಕೋರಿದ್ದಾರೆ.

Share This Article