ಇಸ್ರೇಲ್‌ನಲ್ಲಿ ಲಾಕ್ ಆಗಿದ್ದ ನಟಿ ನುಶ್ರತ್ ಭಾರತದತ್ತ?- ಆಗಿದ್ದೇನು?

Public TV
1 Min Read
Nushrratt Bharuccha

ಸ್ರೇಲ್-ಪ್ಯಾಲೆಸ್ಟೈನ್‌ ಮಧ್ಯೆ ಯುದ್ಧದ ಬಿಕ್ಕಟ್ಟು ಹೆಚ್ಚಾಗಿದೆ. ಇಸ್ರೇಲ್‌ನಲ್ಲಿ ಲಾಕ್ ಆಗಿರುವ ನುಶ್ರತ್ ಬರುಚಾ (Nushrratt Bharuccha) ಭಾರತಕ್ಕೆ ಸುರಕ್ಷಿತವಾಗಿ ಕರೆತರಲು ಪ್ರಯತ್ನ ಶುರುವಾಗಿದ್ದು, ಇದೀಗ ಹೊಸ ಅಪ್‌ಡೇಟ್‌ವೊಂದು ಸಿಕ್ಕಿದೆ.

Nushrratt Bharuccha 2

ಇಸ್ರೇಲ್- ಪ್ಯಾಲೆಸ್ಟೈನ್‌ ನಡುವಿನ ಬಿಕ್ಕಟ್ಟು ಮತ್ತಷ್ಟು ಜಟಿಲಗೊಂಡಿದ್ದು, ಪ್ಯಾಲೆಸ್ಟೈನ್‌ ಬೆಂಬಲಿತ ಉಗ್ರರು ನಡೆಸಿರುವ ರಾಕೆಟ್ ದಾಳಿಗೆ ಇಸ್ರೇಲ್ ತತ್ತರಿಸಿದೆ. ಇಸ್ರೇಲ್- ಪ್ಯಾಲೆಸ್ಟೈನ್‌ ಮಧ್ಯೆ ಯುದ್ಧ ದಾಳಿ-ಪ್ರತಿದಾಳಿ ನಡೆಯುತ್ತಿದೆ. ಈ ಸಂಘರ್ಷದ ಮಧ್ಯೆ ಬಾಲಿವುಡ್ ನಟಿ ನುಶ್ರತ್ ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದರು.

Nushrratt Bharuccha 1

ನುಶ್ರತ್ ಇಸ್ರೇಲ್‌ನಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಅವರ ತಂಡದ ಸದಸ್ಯರು ತಿಳಿಸಿದ್ದಾರೆ. ದುರಾದೃಷ್ಟವಶಾತ್ ನುಸ್ರತ್ ಇಸ್ರೇಲ್‌ನಲ್ಲಿ ಲಾಕ್‌ ಆಗಿದ್ದರು. ಅವರು ಹೈಫಾ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಭಾಗಿಯಾಗಲು ಅಲ್ಲಿಗೆ ಹೋಗಿದ್ದರು ಎಂದು ಅವರು ಮಾಹಿತಿ ನೀಡಿದ್ದರು. ಇದನ್ನೂ ಓದಿ:ವಿಜಯ್ ದೇವರಕೊಂಡ ಜೊತೆ ಟರ್ಕಿಯಲ್ಲಿ ಸುತ್ತಾಡಿದ್ರಾ ರಶ್ಮಿಕಾ ಮಂದಣ್ಣ?

ನಿನ್ನೆ ಮಧ್ಯಾಹ್ನ 12.30ರವರೆಗೆ ನಾವು ಅವರೊಂದಿಗೆ ಸಂಪರ್ಕದಲ್ಲಿದ್ದೇವು. ಅವರು ಬೇಸ್ ಮೆಂಟ್ ಒಂದರಲ್ಲಿ ಸೇಫ್ ಆಗಿದ್ದಾರೆ. ಅವರ ಸುರಕ್ಷತೆ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ನಾವು ಏನನ್ನೂ ಬಹಿರಂಗಪಡಿಸಲು ಆಗುವುದಿಲ್ಲ. ನಿನ್ನೆ ಮಧ್ಯಾಹ್ನದಿಂದ ಅವರ ಸಂಪರ್ಕ ಮಾಡಲು ನಮಗೆ ಸಾಧ್ಯವಾಗಿಲ್ಲ. ಅವರು ವಾಪಸ್ ಭಾರತಕ್ಕೆ ಮರಳಲು ಮಾಡಬೇಕಾಗಿರುವ ವ್ಯವಸ್ಥೆಗೆ ಪ್ರಯತ್ನ ಪಡುತ್ತಿದ್ದೇವೆ ಎಂದು ಅವರ ತಂಡದದ ಸದಸ್ಯರೊಬ್ಬರು ತಿಳಿಸಿದ್ದರು. ಇದೀಗ ಹೊಸ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ನುಶ್ರತ್ ಭರುಚ್ಚಾ ಸುರಕ್ಷಿತವಾಗಿ ಇಸ್ರೇಲ್‌ನ ವಿಮಾನ ನಿಲ್ದಾಣವನ್ನು ಸೇಫ್‌ ಆಗಿ ತಲುಪಿದ್ದಾರೆ.

Share This Article