ಬಿಗ್ ಬಾಸ್ (Bigg Boss Kannada) ಬೆಡಗಿ ನಿವೇದಿತಾ ಗೌಡ (Niveditha Gowda) ಸದ್ಯ ರಿಯಾಲಿಟಿ ಶೋಗಳಲ್ಲಿ ಆಕ್ಟೀವ್ ಆಗಿದ್ದಾರೆ. ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ತಮ್ಮ ಯುಟ್ಯೂಬ್ ಚಾನೆಲ್ನಲ್ಲಿ ವಿಶೇಷ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ಅಭಿಮಾನಿಗಳ ಹಲವು ಪ್ರಶ್ನೆಗಳಿಗೆ ಚಂದನ್ ಶೆಟ್ಟಿ (Chandan Shetty) ಪತ್ನಿ ನಿವೇದಿತಾ ಉತ್ತರಿಸಿದ್ದಾರೆ.
ಸದ್ಯ ಮದುವೆ, ಸಂಸಾರ, ಕೆರಿಯರ್ ಅಂತಾ ಬ್ಯುಸಿಯಿರುವ ನಟಿ ನಿವಿ ಎಲ್ಲಿ ಸಿಕ್ಕರೂ ನಿಮ್ಮ ವಯಸ್ಸು ಎಷ್ಟು? ನಿಮ್ಮ ಗಂಡ ಹೆಸರು ಏನು? ಯಾವಾಗ ಮದುವೆ ಆಗಿದ್ದು? ಪ್ರಗ್ನೆಂಟ್ ಆಗಿದ್ದೀರಾ? ಎಂದು ಪದೇ ಪದೇ ಪ್ರಶ್ನೆ ಕೇಳುತ್ತಾರೆ. ಹೀಗಾಗಿ ಗೂಗಲ್ನಲ್ಲಿ ಅತಿ ಹೆಚ್ಚು ಗೂಗಲ್ ಮಾಡಿರುವ ಪ್ರಶ್ನೆಗಳಿಗೆ ಇದೀಗ ಉತ್ತರ ಕೊಟ್ಟಿದ್ದಾರೆ. ಅದಷ್ಟೇ ಅಲ್ಲ, ಪತಿ ಹಣವನ್ನ ಖರ್ಚು ಮಾಡ್ತೀರಾ ಎಂದವರಿಗೆ ಖಡಕ್ ಉತ್ತರ ಕೊಟ್ಟಿದ್ದಾರೆ.
ಪ್ರತಿ ಸಲ ಪ್ರೆಗೆನ್ಸಿ ವಿಚಾರವೇ ಚರ್ಚೆ ಆಗುತ್ತಿರುತ್ತದೆ. ಈ ಬಗ್ಗೆ ನಟಿ ಮಾತನಾಡಿದ್ದಾರೆ. ನಾನು ಪ್ರಗ್ನೆಂಟ್ ಆಗಿಲ್ಲ. ವರ್ಷದಲ್ಲಿ ಕನಿಷ್ಠ 2-3 ಸಲ ಈ ಬಗ್ಗೆ ಮಾತುಗಳು ಕೇಳಿ ಬರುತ್ತದೆ. ಮುಂದೊಂದು ದಿನ ನಾನು ನಿಜವಾಗಲೂ ಪ್ರೆಗ್ನೆಂಟ್ ಆದಾಗ, ಹೇಳಿದ್ರು ಯಾರು ಕೂಡ ನಂಬಲ್ಲ. ಆ ಸಂದರ್ಭ ಬಂದಾಗ ನಾನೇ ಅನೌನ್ಸ್ ಮಾಡ್ತೀನಿ ಎಂದಿದ್ದಾರೆ ನಿವೇದಿತಾ.
ಮುಂದುವರೆದು ಪತಿ ಹಣ ವೇಸ್ಟ್ ಮಾಡ್ತೀನಿ ಎಂದವರಿಗೆ ನಟಿ ಉತ್ತರ ನೀಡಿದ್ದಾರೆ. ಪ್ರತಿಯೊಬ್ಬರ ಕಾಮೆಂಟ್ಗಳಿಗೆ ನಾನು ಪ್ರತಿಕ್ರಿಯೆ ಕೊಡಬೇಕು ಅಂತೇನು ಇಲ್ಲ. ಜನರಿಗೆ ಬೇಸಿಕ್ ಕಾಮನ್ಸೆನ್ಸ್ ಕೂಡ ಇಲ್ಲ ನಾವು ಪ್ರವಾಸದಲ್ಲಿದ್ದಾಗ ನಮ್ಮ ಫೋಟೋ ತೆಗೆಯಲು ಜನರಿರುತ್ತಾರೆ. ಅವರಿಗೆ ಹಣ ಕೊಟ್ಟರೆ ಕ್ಲಿಕ್ ಮಾಡುತ್ತಾರೆ. ಬೆಡ್ರೂಮ್ನಲ್ಲಿ ಕುಳಿತುಕೊಂಡು ನೆಗೆಟಿವ್ ಆಗಿ ಕಾಮೆಂಟ್ ಮಾಡುವ ಬದಲು ನೀವು ಪ್ರಪಂಚ ನೋಡಿ ಪ್ರಯಾಣ ಮಾಡಿ ಆಗ ಹೇಗೆ ಏನು ಎಂದು ತಿಳಿಯುತ್ತದೆ. ಇದನ್ನೂ ಓದಿ: ದುಬೈನಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಬೇಬಿ ಶವರ್ ಸಂಭ್ರಮ
ನನಗೆ ಒಂದು ವಿಚಾರ ಅರ್ಥವಾಗುತ್ತಿಲ್ಲ ಹುಡುಗರು ಒಂಟಿಯಾಗಿ ಪ್ರವಾಸ ಮಾಡುವುದು ತಪ್ಪಲ್ಲ. ಆದರೆ ಹುಡುಗಿ ಪ್ರವಾಸ ಮಾಡಿದರೆ ಮಾತ್ರ ತಪ್ಪಾ? ಯಾಕೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತೀರಾ. ನಾನು ಸ್ಟ್ರಾಂಗ್ ಇಂಡಿಪೆಂಡೆಂಟ್ ಮಹಿಳೆ ನನ್ನ ಕೈಯಲ್ಲಿ ಕೆಲಸ ಇದೆ. ನನ್ನ ಅಗತ್ಯಗಳನ್ನು ನಾನೇ ನೋಡಿಕೊಳ್ಳುವ ಶಕ್ತಿ ನನಗಿದೆ. ಪತಿ ದುಡ್ಡು ವೇಸ್ಟ್ ಮಾಡುತ್ತಿರುವೆ ಎಂದು ಕಾಮೆಂಟ್ ಮಾಡುತ್ತಿರುವವರಿಗೆ ಒಂದು ಪ್ರಶ್ನೆ. ನಾನು ಹಾಗೆ ಮಾಡುತ್ತಿರುವುದು ನೀವು ನೋಡಿದ್ದೀರಾ? ಹೆಣ್ಣು ಮಕ್ಕಳು ದುಡಿದು ಸ್ವಂತ ಕಾಲಿನ ಮೇಲೆ ನಿಂತುಕೊಳ್ಳಬಹುದು ಅನ್ನೋ ಮೈಂಡ್ ಸೆಟ್ ಜನರಿಗೆ ಇನ್ನೂ ಬಂದಿಲ್ಲ. ಒಂದು ವೇಳೆ ಪತಿ ಹಣ ಖರ್ಚು ಮಾಡಿದರು ನಿಮಗೆ ಏನು ಸಮಸ್ಯೆ? ಅದು ನಿಮಗೆ ಸಂಬಂಧಿಸಿದ ವಿಚಾರವಲ್ಲ ಎಂದು ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ.