ಕನ್ನಡದ ನಟಿ ನಿರೂಷಾ ಅವರ ಮುದ್ದಿನ ನಾಯಿಯನ್ನು ಎರಡು ದಿನಗಳ ಹಿಂದೆ ಕಳ್ಳರು ಕದ್ದೊಯ್ದಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ ಎಂದು ತಿಳಿಯುತ್ತಿದ್ದಂತೆಯೇ ನಿರೂಷಾ ಅಕ್ಷರಶಃ ಕಣ್ಣೀರು ಹಾಕಿದ್ದರು. ತಮ್ಮ ನಾಯಿ ಕಳ್ಳತನವಾಗಿದೆ, ಕಳ್ಳರನ್ನು ಹುಡುಕಿ ಕೊಡಿ ಎಂದು ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದರು.
ನೆಚ್ಚಿನ ನಾಯಿಗಾಗಿ ನಿರೂಷಾ ಹಾಕಿದ ಕಣ್ಣೀರು, ಎಲ್ಲರ ಮನಸ್ಸು ಕಲುಕಿತ್ತು. ಯಾರಾದರೂ, ಅವರ ನಾಯಿಯನ್ನು ಕಂಡರೆ ಅವರಿಗೆ ಮಾಹಿತಿ ಕೊಡಿ ಎಂದು ಅದೆಷ್ಟೋ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಆ ವಿಡಿಯೋವನ್ನು ಹಂಚಿಕೊಂಡಿದ್ದರು. ಕೊನೆಗೂ ಅವರ ಕಣ್ಣೀರು ಫಲಕೊಟ್ಟಿದೆ. ಇದೀಗ ತಮ್ಮ ನಾಯಿ ಸಿಕ್ಕಿರುವುದಾಗಿ ನಿರೂಷಾ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದು ಹೇಗೆ ಸಿಕ್ಕಿತು ಎನ್ನುವ ಕುರಿತು ಅವರು ಹೇಳಿದ್ದಾರೆ. ಇದನ್ನೂ ಓದಿ:ಕಿಚ್ಚ ಸುದೀಪ್ ಅವರನ್ನು ವಿಶ್ವದ ಬಾಕ್ಸ್ ಆಫೀಸಿಗೆ ಹೋಲಿಸಿದ ಉಪೇಂದ್ರ
ನಿರೂಷಾ ನಾಯಿ ಸುಂಕದಕಟ್ಟೆ ಟೆಲಿಕಾಂ ಲೇಔಟ್ ನಿಂದ ಕಳ್ಳತನವಾಗಿತ್ತು. ಕಳ್ಳರು ಅವರ ಮನೆಯ ಸಮೀಪದಲ್ಲೇ ಇರುವ ಗಣೇಶ್ ದೇವಸ್ಥಾನ ಬಳಿ ನಾಯಿಯನ್ನು ತಂದುಬಿಟ್ಟು, ಅವರ ತಾಯಿಗೆ ಕಾಲ್ ಮಾಡಿ ಹೇಳಿದ್ದಾರಂತೆ. ಆ ಅಪರಿಚಿತ ಕರೆಯಿಂದ ಬಂದ ಸಿಹಿ ಸುದ್ದಿಯು ನಿರೂಷಾಗೂ ತಲುಪಿ, ನೆಮ್ಮದಿಯ ನಿಟ್ಟುಸಿರು ಇಟ್ಟಿದ್ದಾರೆ. ತಮ್ಮ ನಾಯಿ ಕೊನೆಗೂ ಸಿಕ್ಕಿರುವ ಖುಷಿಯನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.