2ನೇ ಮದುವೆಗೆ ನಿಹಾರಿಕಾ ಮಾಜಿ ಪತಿ ಸಿದ್ಧತೆ? ವಧು ಯಾರು?

Public TV
1 Min Read
niharika 1 1

ಮೆಗಾಸ್ಟಾರ್ ಮನೆ ಮಗಳು ನಿಹಾರಿಕಾ (Niharika Konidela) ಡಿವೋರ್ಸ್ ಆದ ಮೇಲೆ ಸಿನಿಮಾಗಿಂತ ವೈಯಕ್ತಿಕವಾಗಿಯೇ ಹೆಚ್ಚೆಚ್ಚು ಸುದ್ದಿಯಲ್ಲಿದ್ದಾರೆ. ಇದೀಗ ನಿಹಾರಿಕಾ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸುದ್ದಿಯೊಂದು ವೈರಲ್ ಆಗುತ್ತಿದೆ.

niharika konidela 1

ನಿಹಾರಿಕಾ ಜೊತೆ ಮದುವೆ ಮುರಿದು ಬಿದ್ದ ಮೇಲೆ ಚೈತನ್ಯ (Chaitanya) ಸಾಕಷ್ಟು ನೊಂದಿದ್ದರು. ಬಳಿಕ ವೈಯಕ್ತಿಕ ಜೀವನ ಏರುಪೇರಾದ ಕಾರಣ ಪ್ರವಾಸ ಕೈಗೊಂಡಿದ್ದರು. ಮತ್ತೆ ಮದುವೆ ಬೇಡ ಎಂದುಕೊಂಡಿದ್ದ ನಿಹಾರಿಕಾ ಮಾಜಿ ಪತಿ ಈಗ ಹೊಸ ಬಾಳಿಗೆ ಕಾಲಿಡಲು ಸಿದ್ಧರಾಗಿದ್ದಾರಂತೆ.

NIHARIKA 1

ಕುಟುಂಬದವರ ಒತ್ತಾಯದ ಮೇರೆಗೆ 2ನೇ ಮದುವೆಯಾಗಲು (Wedding) ಚೈತನ್ಯ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಟಾಲಿವುಡ್ ಗಲ್ಲಿಯಲ್ಲಿ ಗುಸು ಗುಸು ಶುರುವಾಗಿದೆ. ಫ್ಯಾಮಿಲಿಗೆ ಆಪ್ತರಾಗಿರುವ ಐಪಿಎಸ್ ಅಧಿಕಾರಿಯೊಬ್ಬರ ಪುತ್ರಿಯ ಜೊತೆ ಚೈತನ್ಯ ಮದುವೆ ಎಂದು ಹೇಳಲಾಗುತ್ತಿದೆ. ಅಧಿಕೃತ ಮಾಹಿತಿಗೆ ಕಾಯಬೇಕಿದೆ.

NIHARIKA

ಕೆಲದಿನಗಳ ಹಿಂದೆ ನಿಹಾರಿಕಾ 2ನೇ ಮದುವೆ ಬಗ್ಗೆ ಸಖತ್ ಟಾಕ್ ಆಗಿತ್ತು. ಮೆಗಾಸ್ಟಾರ್ ಮನೆ ಮಗಳು ಡಿವೋರ್ಸ್ ಬಳಿಕ ಮತ್ತೆ ಮರು ಮದುವೆ ಮಾಡಿಕೊಳ್ಳುತ್ತಾರೆ ಎಂದು ಸುದ್ದಿಯಾಗಿತ್ತು. ಇದನ್ನೂ ಓದಿ:ನಟಿ ಗಾಯತ್ರಿ ಜೋಶಿ ಕಾರು ಅಪಘಾತ: ವೃದ್ಧ ದಂಪತಿ ಸಾವು

2020ರಲ್ಲಿ ನಿಹಾರಿಕಾ-ಚೈತನ್ಯ ಗುರುಹಿರಿಯರ ಸಮ್ಮುಖದಲ್ಲಿ ರಾಜಸ್ತಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಇದಾದ ಬಳಿಕ ಈ ವರ್ಷ ಜೂನ್‌ನಲ್ಲಿ ಇಬ್ಬರು ತಮ್ಮ ಡಿವೋರ್ಸ್ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದರು. ಈಗ ನಿಹಾರಿಕಾ ಸಂಪೂರ್ಣವಾಗಿ ನಟನೆ, ನಿರ್ಮಾಣದತ್ತ ಮುಖ ಮಾಡಿದ್ದಾರೆ.

Share This Article