ಮೆಗಾಸ್ಟಾರ್ ಚಿರಂಜೀವಿ ಮಗಳ ದಾಂಪತ್ಯದಲ್ಲಿ ಬಿರುಕು- ಡಿವೋರ್ಸ್ ಸುದ್ದಿಗೆ ಸಿಕ್ತು ಸಾಕ್ಷಿ

Public TV
1 Min Read
NIHARIKA

ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮಗಳ ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಚಿರಂಜೀವಿ ಸಹೋದರ ನಾಗೇಂದ್ರ ಬಾಬು (Nagendra Babu) ಮಗಳು ನಿಹಾರಿಕಾ (Niharika) ಡಿವೋರ್ಸ್ ಅಂತೆ ಕಂತೆ ಸುದ್ದಿಗೆ ಇದೀಗ ಸಾಕ್ಷಿ ಸಿಕ್ಕಿದೆ. ನಿಹಾರಿಕಾ ವೈವಾಹಿಕ ಬದುಕಿನಲ್ಲಿ ಏರುಪೇರಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ವಿಚಾರ ನಿಜ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.

niharika 1 1

ನಿಹಾರಿಕಾ ಕೊನಿಡೆಲಾ ಅವರು ಚೈತನ್ಯ ಅವರನ್ನ 2020ರಲ್ಲಿ ಪ್ರೀತಿಸಿ, ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಈಗ ಮದುವೆಯಾಗಿ ಎರಡೇ ವರ್ಷಕ್ಕೆ ದಾಂಪತ್ಯ ಬದುಕಿಗೆ ಅಂತ್ಯ ಹಾಡಲಿದ್ದಾರೆ. ಡಿವೋರ್ಸ್ ಬಗ್ಗೆ ಮೌನವಾಗಿರುವ ಈ ಜೋಡಿ, ದಾಂಪತ್ಯದಲ್ಲಿ ಬಿರುಕಾಗಿರುವ ಬಗ್ಗೆ ಸುಳಿವು ಸಿಕ್ಕಿದೆ. ಇದನ್ನೂ ಓದಿ:‘ರಾಮನ ಅವತಾರ’ ಟೀಸರ್ ರಿಲೀಸ್ : ರಿಷಿ ಸಖತ್ ಕಾಮಿಡಿ ಮಾಡ್ತಾರಪ್ಪ

NIHARIKA

ನಟಿ ನಿಹಾರಿಕಾ ಮತ್ತು ಚೈತನ್ಯ ನಡುವೆ ವೈಮನಸ್ಸು ಉಂಟಾಗಿದೆ ಎಂಬುದಕ್ಕೆ ಒಂದಷ್ಟು ದಿನಗಳ ಹಿಂದೆಯೇ ಸಾಕ್ಷಿ ಸಿಕ್ಕಿತ್ತು. ವೆಂಕಟ ಚೈತನ್ಯ ಅವರು ನಿಹಾರಿಕಾರನ್ನು ಅನ್‌ಫಾಲೋ ಮಾಡಿದ್ದರು. ಮದುವೆ – ಎಂಗೇಜ್‌ಮೆಂಟ್ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಆದರೂ ಕೂಡ ನಿಹಾರಿಕಾ ಅವರು ಸೈಲೆಂಟ್ ಆಗಿದ್ದರು. ಆದರೆ ಈಗ ಅವರು ಕೂಡ ಗಂಡನನ್ನು ಅನ್‌ಫಾಲೋ ಮಾಡಿ, ಫೋಟೋಸ್ ತೆಗೆದುಹಾಕಿರುವುದು ಡಿವೋರ್ಸ್ ಅನುಮಾನಕ್ಕೆ ಪುಷ್ಠಿ ನೀಡಿದೆ.

NIHARIKA

ಮೆಗಾ ಸ್ಟಾರ್ ಚಿರಂಜೀವಿ ಅವರದ್ದು ಪ್ರತಿಷ್ಠಿತ ಕುಟುಂಬ. ಈ ಫ್ಯಾಮಿಲಿಯ ಕೆಲವು ಹಿರಿಯರ ಸಮ್ಮುಖದಲ್ಲಿ ಸಂಧಾನ ಮಾತುಕಥೆ ಕೂಡ ನಡೆಯುತ್ತಿದ್ದು, ನಿಹಾರಿಕಾ- ಚೈತನ್ಯ ಮತ್ತೆ ಒಂದಾಗುವ ಸೂಚನೆ ಇದೆ ಎನ್ನಲಾಗಿತ್ತು. ಆದರೆ ಸಂಧಾನ ಸಫಲ ಆದಂತೆ ಕಾಣುತ್ತಿಲ್ಲ. ನಿಹಾರಿಕಾ ಕೊನಿಡೆಲಾ ಅವರು ಕೊನೆಗೂ ಗಟ್ಟಿ ನಿರ್ಧಾರ ತೆಗೆದುಕೊಂಡಂತೆ ಕಾಣುತ್ತಿದೆ. ಈ ಬಗ್ಗೆ ಅವರು ಅಧಿಕೃತವಾಗಿ ಘೋಷಿಸುವುದೊಂದೇ ಬಾಕಿ ಇದೆ.

ನಿಹಾರಿಕಾ ಕೂಡ ನಿರ್ಮಾಪಕಿಯಾಗಿ ಆಗಿ ಕಂಬ್ಯಾಕ್ ಆಗಿದ್ದಾರೆ. ನಿರ್ಮಾಣದ ಜೊತೆ ನಟನೆಯ ಕಡೆಗೂ ಒಲವು ತೋರಿಸ್ತಿದ್ದಾರೆ ಎನ್ನಲಾಗುತ್ತಿದೆ. ಹೊಸ ಆಫೀಸ್ ಕೂಡ ನಿಹಾರಕಾ ಓಪನ್ ಮಾಡಿದ್ದಾರೆ. ಸಿನಿಮಾ ಕಾರ್ಯಕ್ಕೆ ಸಂಬಂಧಿಸಿದ ಕೆಲಸಗಳಿಗಾಗಿ ನಟಿ ಹೊಸ ಹೆಜ್ಜೆ ಇಟ್ಟಿದ್ದಾರೆ.

Share This Article