ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಮನೆ ಮಗಳು ನಿಹಾರಿಕಾ ಕೊನಿಡೆಲಾ (Niharika Konidela) ಅವರ ವೈಯಕ್ತಿಕ ಜೀವನ ಸುದ್ದಿಯಲ್ಲಿದೆ. ನಟ ಚಿರಂಜೀವಿ ಮಗಳು ಶ್ರೀಜಾ ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದ ಬಳಿಕ ನಿಹಾರಿಕಾ ವೈವಾಹಿಕ ಬದುಕು ಕೂಡ ಏರುಪೇರಾಗಿದೆ. ಡಿವೋರ್ಸ್ (Divorce) ವಿಚಾರಕ್ಕೆ ಸಂಬಂಧಿಸಿದಂತೆ ನಟಿ ನಿಹಾರಿಕಾ ‘ಬದುಕಲು ಬಿಡಿ’ ಎಂದು ಇದೀಗ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಇದೀಗ ಹಲವರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗ್ಬೇಕು – ದುನಿಯಾ ವಿಜಯ್
ನಟಿ ನಿಹಾರಿಕಾ- ಉದ್ಯಮಿ ಚೈತನ್ಯ (Chaitanya) ಇಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಹಲವು ವರ್ಷಗಳ ಪ್ರೀತಿಗೆ ಗುರುಹಿರಿಯರ ಸಮ್ಮತಿ ಪಡೆದು 2020ರಲ್ಲಿ ರಾಜಸ್ಥಾನದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಆದರೆ ಇದೀಗ ಕೆಲ ತಿಂಗಳಿಂದ ಡಿವೋರ್ಸ್ ವದಂತಿ ಕೇಳಿ ಬರುತ್ತಿದೆ. ಈ ಬಗ್ಗೆ ಯಾವುದೇ ಸ್ಪಷ್ಟನೆ ನೀಡದೇ ಇದ್ದರೂ ಈಗ ಹೊಸ ಪೋಸ್ಟ್ನಿಂದ ನಟಿ ಸದ್ದು ಮಾಡ್ತಿದ್ದಾರೆ.
ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವ ವೀಡಿಯೋ ನಿಹಾರಿಕಾ ಶೇರ್ ಮಾಡಿ ವೀಡಿಯೋದಲ್ಲಿ ಒಂದಷ್ಟು ಅಡಿಬರಹ ನೀಡಿದ್ದಾರೆ. ನಿಮ್ಮ ಎನರ್ಜಿ ಸೇವ್ ಮಾಡಿ, ನೀವು ಸಮರ್ಥರು, ನಿಮ್ಮ ಬಗ್ಗೆ ನೀವು ದಯೆ ತೋರಿ, ಯೋಚಿಸುವುದಕ್ಕಿಂತ ನೀವು ಬಲಶಾಲಿ, ನಿಮ್ಮ ನಿದ್ರೆಗೆ ಆದ್ಯತೆ ನೀಡಿ, ಹೆಚ್ಚು ನೀರನ್ನು ಕುಡಿಯಿರಿ, ಬದುಕಿ ಮತ್ತು ಇತರರನ್ನು ಬದುಕಲು ಬಿಡಿ ಎನ್ನುವ ವಿಚಾರವನ್ನ ಪೋಸ್ಟ್ ಮಾಡಿದ್ದಾರೆ.
View this post on Instagram
ನಿಹಾರಿಕಾ- ಚೈತನ್ಯ ಇನ್ಸ್ಟಾಗ್ರಾಂನಲ್ಲಿ ಪರಸ್ಪರ ಅನ್ಫಾಲೋ ಮಾಡಿಕೊಂಡಿದ್ದಾರೆ. ಮೆಗಾ ಫ್ಯಾಮಿಲಿಯ (Mega Family) ಎಲ್ಲರನ್ನೂ ಫಾಲೋ ಮಾಡುತ್ತಿರುವ ಚೈತನ್ಯ, ನಿಹಾರಿಕಾ ಅವರನ್ನು ಮಾತ್ರ ಅನ್ಫಾಲೋ ಮಾಡಿದ್ದರು. ಮದುವೆಯ ಫೋಟೋಸ್ನ ಇಬ್ಬರೂ ಡಿಲೀಟ್ ಮಾಡಿದ್ದಾರೆ. ಡಿವೋರ್ಸ್ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ.