ಡಿವೋರ್ಸ್ ಆದ್ರು ಡೋಂಟ್ ಕೇರ್- ಮಸ್ತ್ ಲುಕ್‌ನಲ್ಲಿ ಮೆಗಾಸ್ಟಾರ್ ಮನೆಮಗಳು

Public TV
2 Min Read
niharika konidela 1

ಮೆಗಾಸ್ಟಾರ್ (Megastar) ಮನೆಮಗಳು ನಿಹಾರಿಕಾ (Niharika) ದಾಂಪತ್ಯ ಜೀವನಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕ್ಯಾರೆ ಎನ್ನದೇ ಮಸ್ತ್ ಫೋಟೋಶೂಟ್‌ನಲ್ಲಿ ನಟಿ ಮಿಂಚಿದ್ದಾರೆ.  ಕ್ಯಾಮೆರಾ ಕಣ್ಣಿಗೆ ನಟಿ ಬೋಲ್ಡ್‌ ಆಗಿ ಪೋಸ್‌ ಕೊಟ್ಟಿದ್ದಾರೆ. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

niharika konidela

ಚೈತನ್ಯ (Chaitanya) ಜೊತೆಗಿನ ಡಿವೋರ್ಸ್ ನಂತರ ನಟಿ ಫ್ರಿ ಬರ್ಡ್ ಆಗಿದ್ದಾರೆ. ಸಖತ್ ಟ್ರಾವೆಲ್ ಮಾಡ್ತಿದ್ದಾರೆ. ಜೊತೆಗೆ ಬಗೆ ಬಗೆಯ ಫೋಟೋಶೂಟ್‌ನಲ್ಲಿ ನಟಿ ಕಾಣಿಸಿಕೊಳ್ತಿದ್ದಾರೆ. ಈಗ ಹಳದಿ ಬಣ್ಣದ ಉಡುಗೆಯಲ್ಲಿ ನಿಹಾರಿಕಾ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಸ್ಲೀವ್‌ಲೆಸ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಹೊಸ ಫೋಟೋಸ್ ನೋಡ್ತಿದ್ದಂತೆ ನೆಟ್ಟಿಗರು, ನಿಮ್ಮ ಜೀವನದ ಬಗ್ಗೆ ನಿಮಗೆ ಚಿಂತೆನೇ ಇಲ್ವಾ ಅಂತಾ ನಿಹಾರಿಕಾಗೆ ಪ್ರಶ್ನೆ ಮಾಡಿದ್ದಾರೆ.

niharika konidela 2

ದಾಂಪತ್ಯಕ್ಕೆ (Wedding) ಅಂತ್ಯ ಹಾಡಿದ ಮೇಲೆ ಸಮಂತಾರಂತೆ ನಿಹಾರಿಕಾ ಕೂಡ ಮತ್ತೆ ಸಿನಿಮಾ, ನಟನೆ, ನಿರ್ಮಾಣ ಅಂತಾ ಕೆರಿಯರ್ ಕಡೆ ಗಮನ ಕೊಡಲು ನಿರ್ಧರಿಸಿದ್ದಾರೆ. ಮದುವೆಗೂ ಮುನ್ನ ‘ಒಕ ಮನಸ್ಸು’ ಎಂಬ ಸಿನಿಮಾ ಮೂಲಕ ನಾಯಕಿಯಾಗಿ ನಿಹಾರಿಕಾ ಎಂಟ್ರಿ ಕೊಟ್ಟಿದ್ದರು. ಇದನ್ನೂ ಓದಿ:ಗ್ಲ್ಯಾಮರ್ ಡಾಲ್‌ನಂತೆ ಕಂಗೊಳಿಸಿದ ಮೇಘಾ ಶೆಟ್ಟಿ

NIHARIKA

‘ಸೂರ್ಯಕಾಂತಂ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದರೂ ಕೂಡ ಅವರಿಗೆ ಹೇಳಿಕೊಳ್ಳುವಂತಹ ಬ್ರೇಕ್ ಸಿಗಲಿಲ್ಲ. ಈಗ ಮತ್ತೆ ನಾಯಕಿಯಾಗಿ ಲೈಮ್‌ಲೈಟ್‌ನಲ್ಲಿ ಮಿಂಚಲು ನಿಹಾರಿಕಾ ಮನಸ್ಸು ಮಾಡಿದ್ದಾರಂತೆ. ನಿರ್ಮಾಪಕಿಯಾಗಿ ಗುರುತಿಸಿಕೊಳ್ತಿರೋ ನಿಹಾರಿಕಾ ಈಗ ಮತ್ತೆ ಸಿನಿಮಾದಲ್ಲಿ ಹೀರೋಯಿನ್ ಆಗಿ ಮಿಂಚಲು ರೆಡಿಯಾಗಿದ್ದಾರೆ.

ಈ ನಿಟ್ಟಿನಲ್ಲಿ ಅವರು ಯುವ ನಿರ್ದೇಶಕರೊಬ್ಬರ ಜೊತೆ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೆ ಕಥೆ ಸಿದ್ಧಗೊಂಡಿದ್ದರೂ ನಿಹಾರಿಕಾ ನಾಯಕಿಯಾಗಿ ಎಂಟ್ರಿ ಕೊಡಲು ಮೆಗಾ ಫ್ಯಾಮಿಲಿ ಒಪ್ಪುತ್ತಿಲ್ಲ ಎಂಬುದು ಒಳಗಿನ ಮಾತು. ಸಿನಿಮಾ ವಿಚಾರದಲ್ಲಿ ನಿಹಾರಿಕಾ ನಿರ್ಧಾರಕ್ಕೆ ಮೆಗಾ ಫ್ಯಾಮಿಲಿ ನೋ ಹೇಳುತ್ತಿದೆ. ಆದರೆ ನಿಹಾರಿಕಾ ಮತ್ತೆ ನಾಯಕಿಯಾಗಿ ಸಿನಿಮಾಗೆ ಬರುವುದು ಮೆಗಾ ಫ್ಯಾಮಿಲಿಗೆ ಇಷ್ಟವಿಲ್ಲ ಎಂಬ ಪ್ರಚಾರ ನಡೆಯುತ್ತಿದೆ. ನಟಿಯ ಕುಟುಂಬ ನೋ ಅಂದ್ರು ಕೂಡ ನಿಹಾರಿಕಾ ಈ ವಿಚಾರದಲ್ಲಿ ಸಖತ್ ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರ ಮಾತಿಗೆ ಸೊಪ್ಪು ಹಾಕದೇ ತನ್ನದೇ ನಿರ್ಧಾರ ಅಂತಿಮ ಅಂತಾ ನಟಿ ಹಠ ಮಾಡ್ತಿದ್ದಾರೆ ಎಂದು ಗುಸು ಗುಸು ಸುದ್ದಿ ಕೆಲದಿನಗಳಿಂದ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ.

Share This Article