ಬಣ್ಣದ ಲೋಕದಲ್ಲಿ ನಟ-ನಟಿಯರಿಗೆ ಮದುವೆ ಆಮೇಲೆ ಡಿವೋರ್ಸ್ ಎಲ್ಲವೂ ಕಾಮನ್ ಆಗಿಬಿಟ್ಟಿದೆ. ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಡಿವೋರ್ಸ್ ಸುದ್ದಿ ಕೇಳಿ ಬರುತ್ತಿದೆ. ಚಿರಂಜೀವಿ ಸಹೋದರ ನಟ ನಾಗಬಾಬು (Actor Nagababu) ಅವರ ಪುತ್ರಿ ನಿಹಾರಿಕಾ ಬದುಕಿನಲ್ಲಿ ಬಿರುಕಾಗಿದೆ ಎಂಬ ಸುದ್ದಿ ಟಾಲಿವುಡ್ (Tollywood) ಗಲ್ಲಿಯಲ್ಲಿ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ: 65 ಲಕ್ಷ ರೂಪಾಯಿಗೆ ವ್ಯಾನಿಟಿ ವ್ಯಾನ್ ಖರೀದಿಸಿದ ಕಂಗನಾ ರಣಾವತ್
Advertisement
ಮೆಗಾಸ್ಟಾರ್ ಫ್ಯಾಮಿಲಿಯಲ್ಲಿ (Megastar Family) ಮತ್ತೊಂದು ಡಿವೋರ್ಸ್ (Divorce) ಸಮಾಚಾರ ಕೇಳಿ ಬರುತ್ತಿದೆ. ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ (Sreeja) ಎರಡನೇ ಮದುವೆಯಲ್ಲಿ ಬಿರುಕು ಉಂಟಾಗಿ ತವರಿಗೆ ಬಂದಿದ್ದಾರೆ. ಈ ಬೆನ್ನಲ್ಲೇ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ.
Advertisement
Advertisement
2020ರಲ್ಲಿ ನಾಗಬಾಬು ಪುತ್ರಿ ನಿಹಾರಿಕಾ (Niharika Konidela) ಮತ್ತು ಚೈತನ್ಯ (Chaitanya) ಗುರುಹಿರಿಯರ ಸಮ್ಮುಖದಲ್ಲಿ ಪ್ರೇಮ ವಿವಾಹವಾಗಿದ್ದರು. ಮೆಗಾಸ್ಟಾರ್ ಫ್ಯಾಮಿಲಿ, ಅದ್ದೂರಿಯಾಗಿ ಮಗಳ ಮದುವೆಯನ್ನ ರಾಜಸ್ಥಾನದಲ್ಲಿ ಮಾಡಿದ್ದರು. ಎರಡು ವರ್ಷಗಳಿಂದ ಖುಷಿಯಿಂದ ಜೀವನ ಸಾಗಿಸುತ್ತಿದ್ದ ಜೋಡಿಯ ನಡುವೆ ಬಿರುಕಾಗಿದೆ ಎನ್ನಲಾಗುತ್ತಿದೆ.
Advertisement
ಡಿವೋರ್ಸ್ ಸುದ್ದಿಗೆ ಪೂರಕವೆಂಬಂತೆ, ಇಬ್ಬರು ಇನ್ಸ್ಟಾಗ್ರಾಂ ಖಾತೆಯಲ್ಲಿ ಒಬ್ಬರನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವರ್ಷದಿಂದ ಆಕ್ಟೀವ್ ಇಲ್ಲದೇ ಇರೋದು ಅನುಮಾನ ಮೂಡಿಸಿದೆ. ಕಳೆದ 3-4 ತಿಂಗಳಿಂದ ಇಬ್ಬರು ಒಟ್ಟಿಗೆ ಇಲ್ಲ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಮೆಗಾಸ್ಟಾರ್ ಕುಟುಂಬ ಪ್ರತಿಕ್ರಿಯೆ ನೀಡುವವರೆಗೂ ಕಾದುನೋಡಬೇಕಿದೆ.