‘ಲಕ್ಷ್ಮಿ ಬಾರಮ್ಮ’, ‘ಬಿಗ್ ಬಾಸ್’ (Bigg Boss Kannada) ಖ್ಯಾತಿಯ ನೇಹಾ ಗೌಡ (Neha Gowda) ಅವರು ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದರ ನಡುವೆ ಪ್ರೆಗ್ನೆನ್ಸಿ ಫೋಟೋಶೂಟ್‌ನಲ್ಲಿ ಶಾಕುಂತಲೆಯಂತೆ ನಟಿ ಮಿಂಚಿದ್ದಾರೆ. ನಟಿಯ ಸುಂದರ ಬೇಬಿ ಬಂಪ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೊಳದ ಬಳಿ ಬಿಳಿ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಕೈಯಲ್ಲಿ ಕಮಲದ ಹೂ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ಸೀರೆಯುಟ್ಟು ವಿವಿಧ ಭಂಗಿಯಲ್ಲಿ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ.
View this post on Instagram
ಇತ್ತೀಚೆಗೆ ನೇಹಾ ಅವರಿಗೆ ಸೀಮಂತ ಶಾಸ್ತ್ರ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಅದಷ್ಟೇ ಅಲ್ಲ, ವೆಸ್ಟರ್ನ್ ಸ್ಟೈಲಿನಲ್ಲಿ ಬೇಬಿ ಶವರ್ ಕಾರ್ಯಕ್ರಮ ಕೂಡ ಮಾಡಲಾಯಿತು. ಇದನ್ನೂ ಓದಿ:ಫೆ.10ರಂದು ‘ಗರುಡ’ ಚಿತ್ರದ ನಟ ಸಿದ್ಧಾರ್ಥ್ ಮಹೇಶ್ ಮದುವೆ
ಇನ್ನೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನೇಹಾ ಮತ್ತು ಚಂದನ್ (Chandan) ಜೋಡಿ 2018ರಲ್ಲಿ ಗುರುಹಿರಿಯರ ಸಮ್ಮುಖದಲ್ಲಿ ಮದುವೆಯಾದರು.