ಬಾಲಿವುಡ್ ಬೆಡಗಿ ನೇಹಾ ಧೂಪಿಯಾ (Neha Dhupia) ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ರೂ ತನಗೆ ಸರಿಯಾಗಿ ಸಿನಿಮಾವಕಾಶ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಸ್ವೀಟ್ ಹಾರ್ಟ್ ಎಂದ ವಿಕ್ಕಿ ಕೌಶಲ್
ಕಳೆದ 3-4 ತಿಂಗಳಿಂದ ನನಗೆ ದಕ್ಷಿಣದ ಚಿತ್ರರಂಗದಿಂದ ಸಿನಿಮಾ ಆಫರ್‌ಗಳು ಅರಸಿ ಬರುತ್ತಿವೆ. ಅಲ್ಲಿನವರ ಬಗ್ಗೆ ನನಗೆ ಗೊತ್ತಿಲ್ಲ. ಹಾಗಾಗಿ ಸಿನಿಮಾ ಅವಕಾಶ ಒಪ್ಪಿಕೊಳ್ತಿಲ್ಲ. ಆದರೆ ಬಾಲಿವುಡ್‌ನಲ್ಲಿ ನಮ್ಮವರು, ನನ್ನ ಸಾಮರ್ಥ್ಯದ ಬಗ್ಗೆ ಗೊತ್ತಿದ್ದರೂ ಆಫರ್ ಕೊಡುತ್ತಿಲ್ಲ ಎಂದಿದ್ದಾರೆ. ನಿಮ್ಮ ನಟನೆ ಚೆನ್ನಾಗಿದೆ ಅಂತಾರೆ, ಆದರೆ ಸಿನಿಮಾ ಅವಕಾಶ ಕೊಡಲ್ಲ ಎಂದು ಬೇಸರ ಹೊರಹಾಕಿದ್ದಾರೆ ನಟಿ ನೇಹಾ ಧೂಪಿಯಾ.
ಪಾತ್ರಕ್ಕಾಗಿ ಕಡೆಯ ಬಾರಿ ನನಗೆ ಯಾವಾಗ ಕರೆ ಬಂದಿತ್ತು ಎಂಬುದು ನೆನಪಿಲ್ಲ ಎಂದು ನೇಹಾ ಹೇಳಿದ್ದಾರೆ. ಸಿನಿಮಾದಲ್ಲಿ ಬೇಡ ಕೊನೆ ಪಕ್ಷ ವೆಬ್ ಸರಣಿಯಲ್ಲಿ ಆದರೂ ಅವಕಾಶ ಕೊಡಬಹುದು. ಆದರೆ ಅಲ್ಲಿಯೂ ಅವಕಾಶಕ್ಕೆ ಕಲ್ಲು ಹಾಕುವವರು ಜಾಸ್ತಿ. ಇಂದಿಗೂ ಸಿನಿಮಾ ಆಫರ್‌ಗಾಗಿ ಕಷ್ಟಪಡುತ್ತಿದ್ದೇನೆ ಎಂದು ನಟಿ ನೇಹಾ ಮಾತನಾಡಿದ್ದಾರೆ.
ಇದೀಗ 3 ವರ್ಷಗಳ ನಂತರ ನೇಹಾ ಅವರು ‘ಬ್ಯಾಡ್ ನ್ಯೂಸ್’ (Bad Newz) ಸಿನಿಮಾದಲ್ಲಿ ನಟಿಸಿದ್ದಾರೆ. ವಿಕ್ಕಿ ಕೌಶಲ್ (Vicky Kaushal) ಮತ್ತು ತೃಪ್ತಿ ದಿಮ್ರಿ ನಟನೆಯ ಸಿನಿಮಾ ಇದಾಗಿದೆ.