ದಪ್ಪಗಿರೋರಿಗೆ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ : ಹಿಗ್ಗಾಮುಗ್ಗ ಝಾಡಿಸಿದ ಗಾಳಿಪಟ ನೀತು

Public TV
2 Min Read
Neetu shetty 5

ಬಾಡಿ ಶೇಮಿಂಗ್ ಬಗ್ಗೆ ಅನೇಕ ನಟಿಯರು ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಅವರಿಗಾದ ಕಹಿ ಘಟನೆಗಳನ್ನು ಮತ್ತು ಕಿರಿಕಿರಿಯ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಬಾಡಿ ಶೇಮಿಂಗ್ ಕಾರಣಕ್ಕಾಗಿಯೇ ಮಲಯಾಳಂ ಸುಪ್ರಸಿದ್ಧ ನಟರೊಬ್ಬರು ಮಹಿಳೆಯರಿಗೆ ಕ್ಷಮೆ ಕೇಳಿದ್ದರು. ಇದನ್ನೂ ಓದಿ : ಶ್ರುತಿ ಹಾಸನ್ ಜತೆ ನನ್ನ ಮದುವೆ ಆಗಿದೆ: ಸ್ಫೋಟಕ ಮಾಹಿತಿ ಹಂಚಿಕೊಂಡ ಬಾಯ್ ಫ್ರೆಂಡ್

Neetu shetty 6

ಇಂತಹ ಕೆಟ್ಟ ಅನುಭವ ಕನ್ನಡದ ಅನೇಕ ನಟಿಯರಿಗೂ ಆಗಿದೆ. ಹಾಗಾಗಿ ಗಾಳಿಪಟ ಖ್ಯಾತಿಯ ನೀತು ಶೆಟ್ಟಿ ತಮಗಾದ ನೋವಿನ ಸಂಗತಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ದಪ್ಪಗಿರುವ ನಟಿಯರನ್ನು ಈ ಸಮಾಜದ ಕೆಲ ಹುಳುಗಳು ಹೇಗೆಲ್ಲ ಕಾಡುತ್ತವೆ ಎನ್ನುವುದನ್ನು ಸಾಕ್ಷಿ ಸಮೇತ ಅವರು ತೆರೆದಿಟ್ಟಿದ್ದಾರೆ. ಇದನ್ನೂ ಓದಿ : ವರುಣ್ ದವನ್ ಜತೆ ‘ಸಿಟಾಡೆಲ್’ ನಲ್ಲಿ ಸಮಂತಾ: ಕ್ಯಾಮರಾ ಕಣ್ಣಿಗೆ ಹಬ್ಬ

Neetu shetty 4

ಓವರ್ ಟು ನೀತು ಶೆಟ್ಟಿ….

ಪ್ರತಿ ಸಲವೂ ಚಾನೆಲ್ ವೊಂದರ ನನ್ನ ವಿಡಿಯೋ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೆ ಕಾಮೆಂಟ್ ಸೆಕ್ಷನ್ ಅಲ್ಲಿ ಸಿಗುತ್ತಾರೆ. ಇವರ ಪ್ರಕಾರ ತೆಳ್ಳಗಿಲ್ದೆ ಇರೋರು ಲೂಸ್ ಫಿಟ್ಟಿಂಗ್ ಬಟ್ಟೆ ಮಾತ್ರ ಹಾಕೋಕ್ಕೆ ಯೋಗ್ಯರು. ಇವರ ಪ್ರಕಾರ ದುಂಡಗಿರುವವರು ತುಂಬಾ ‘ಮಜಾ/s**’ ಮಾಡುವುದರಿಂದ ಹಾಗೆ ಆಗಿದ್ದಾರೆ. ಹಾಗಾಗಿ ‘ಸೂ’ ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವುದು ಸರಿ. ಇವರ ಪ್ರಕಾರ ಪ್ಲಸ್ ಸೈಟ್ ಇರುವವರ ಮೇಲೆ ಯಾರಿಗೂ ಪ್ರೀತಿ, ರೋಮ್ಯಾನ್ಸ್, ಹುಟ್ಟಲ್ಲ. ಬ್ಯುಟಿಫುಲ್ ಅಂತ ಪರಿಗಣಿಸಬಾರದು. ಹಿಡಿಂಬಾ/ ರಾಕ್ಷಿಸಯಾಗೋಕೆ ಮಾತ್ರ ನಾವು ಲಾಯಕ್. ಪ್ಲಸ್ ಸೈಜ್ ನವರು ಜೀವನ ಪರ್ಯಂತ ದುಃಖದಲ್ಲಿ ಡಯಟ್ ಹಾಗೂ ವರ್ಕೌಟ್ ಬಗ್ಗೆನೇ ಚಿಂತಿಸಿ, ತಗ್ಗಿ ಬಗ್ಗಿ ಸಮಾಜದಿಂದ ವಿಮುಖರಾಗಿ ಬದುಕಬೇಕು. ಬೇರೆ ಯಾವ ವಿಷಯದ ಬಗ್ಗೆಯೂ ನಮಗೆ ಒಪಿನಿಯನ್ ಇರಲೇಬಾರದು. ಇದ್ರೆ, ಮೊದಲು ಸಣ್ಣ ಆಗು, ಆಮೇಲೆ ಮಾತಾಡು’ ಎನ್ನುತ್ತಾರೆ. ‘ಪ್ಲಸ್ ಸೈಜ್’ ಅವ್ರು ಧೈರ್ಯವಾಗಿ ಪಬ್ಲಿಕ್ನಲ್ಲಿ ಅಥವಾ ಟೀವಿಯಲ್ಲಿ ಬಿಂದಾಸ್ ಆಗಿ ಕಾಣಿಸ್ಕೊಂಡ್ರೆ , ಅವರ ‘ಗಟ್ಸ್’ ಬಗ್ಗೆ ಇವರಿಗೆ  ಸಿಟ್ಟು ಬರುತ್ತೆ. ದಪ್ಪ ಇರೋವ್ರು  ಆರೋಗ್ಯವಂತರಲ್ಲ ಅನ್ನೋದೇ ‘ ಫ್ಯಾಕ್ಟ್’  ಅಂತ ಇವರು ನಂಬಿದ್ದಾರೆ. ತೆಳ್ಳಗಿರುವವರೆಲ್ಲ ಫಿಟ್ ಅಂಡ್ ಫೈನ್ ಅಂತ ಅಂದುಕೊಂಡಿರ್ತಾರೆ. ತೆಳ್ಳಗಿಲ್ದೇ ಇರುವವರನ್ನು ಪ್ರಾಣಿಗಳಿಗೆ ಹೋಲಿಸುವುದು ಇವರ  ಹಕ್ಕು ಮಾಡಿಕೊಂಡಿರುತ್ತಾರೆ. ಪ್ಲಸ್ ಸೈಜ್ ಇರೋದ್ರಿಂದ ಅವಕಾಶ ವಂಚಿತರಾಗುವುದು  ಸರಿಯಾಗೇ ಇದೆ ಅಂತ ಇವರಿಗನಿಸುತ್ತೆ.ಇವರು  ಈ ಸಮಾಜದ ‘FatPhobic’ ಜನ. ಇವರ  ಯೋಚನೆಗಳು ತುಂಬಾನೇ ಹಳೆಯ ಕಾಲದ್ದು, ತುಕ್ಕು ಹಿಡಿದದ್ದು ಹಾಗೂ ತುಂಬಾ ವಿಷದಿಂದ ತುಂಬಿದ್ದು.ಇದು ‘ಫ್ಯಾಟ್ ಫೋಬಿಯಾ’ ದ ವಿಶ್ಲೇಷಣೆ..ಪ್ಲಸ್ ಸೈಜ್ ಜನರು ವಿಶ್ವದಾದ್ಯoತ ಈಗ ಅಡಗಿ ಕೂರ್ತಾ ಇಲ್ಲ. ತೆಗಳಿಕೆ, ಅವಮಾನ, ನೋವಿನಿಂದ ಎದ್ದು ಫೀನಿಕ್ಸ್ ನಂತೇ ಬದುಕ್ತಾ ಇದ್ದಾರೆ…  ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ಲಾಭವನ್ನು ದಾನಮಾಡಿ ಎಂದ ಐಎಎಸ್ ಆಫೀಸರ್: ನಿರ್ದೇಶಕರ ಉತ್ತರವೇನು?

Neetu shetty 1

We are Here

We are Real

We are not Victims

WE WILL SHOW UP

ಎಂದು ಬರೆದಿರುವ ನೀತು ಶೆಟ್ಟಿ, “ಹಾಂ…ಈ ಫೋಟೋದಲ್ಲಿ ನನ್ನ ಪ್ರಕಾರ ನಾನು ಮುದ್ದಾಗಿಯೇ ಕಾಣಿಸ್ತಾ ಇದ್ದೀನಿ” ಎಂದು ಫೋಟೋ ಶೇರ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *