ಕಾಲಿವುಡ್ ನಟಿ ನಯನತಾರಾ (Nayanthara) ಅವರು ಚಿತ್ರೀಕರಣಕ್ಕೆ ಬ್ರೇಕ್ ಸಿಕ್ಕಿ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋಶೂಟ್ವೊಂದನ್ನು ಶೇರ್ ಮಾಡಿದ್ದಾರೆ.
Advertisement
ಪತಿ ವಿಘ್ನೇಶ್ ಶಿವನ್ ಜೊತೆ ಕುಳಿತು ವಿವಿಧ ಭಂಗಿಯಲ್ಲಿ ನಟಿ ರೊಮ್ಯಾಂಟಿಕ್ ಆಗಿ ಪೋಸ್ ನೀಡಿದ್ದಾರೆ. ಕೆಂಪು ಬಣ್ಣದ ಸೀರೆಯುಟ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಮಾಲ್ಡೀವ್ಸ್ನಲ್ಲಿ ತರುಣ್ ದಂಪತಿ- ಹನಿಮೂನ್ನಲ್ಲಿ ಜಾಲಿ ಮೂಡ್ಗೆ ಜಾರಿದ ಜೋಡಿ
Advertisement
View this post on Instagram
ಇನ್ನೂ ಇತ್ತೀಚೆಗೆ ಪತಿ ವಿಘ್ನೇಶ್ ಬರ್ತ್ಡೇ ವಿಶೇಷವಾಗಿ ನಟಿ ಶುಭಕೋರಿದ್ದರು. ಜನ್ಮದ ದಿನದ ಶುಭಾಶಯಗಳು. ಪದಗಳಲ್ಲಿ ವಿವರಿಸಲು ಸಾಧ್ಯವಾಗದಷ್ಟು ನಾನು ನಿಮ್ಮನ್ನು ಪ್ರೀತಿಸುತ್ತಿದ್ದೇನೆ ಎಂದು ಪತಿಗೆ ನಯನತಾರಾ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದರು.
Advertisement
View this post on Instagram
ಇನ್ನೂ ಹಲವು ವರ್ಷಗಳ ಪ್ರೀತಿಗೆ 2022ರಲ್ಲಿ ಮದುವೆಯ ಮುದ್ರೆ ಒತ್ತಿದ್ದರು. ಬಾಡಿಗೆ ತಾಯ್ತನ ಮೂಲಕ ಇಬ್ಬರು ಮಕ್ಕಳನ್ನು ನಟಿ ಬರಮಾಡಿಕೊಂಡರು.
Advertisement
ಅಂದಹಾಗೆ, ಶಾರುಖ್ ಖಾನ್ ಜೊತೆ ‘ಜವಾನ್’ (Jawan) ಸಿನಿಮಾದಲ್ಲಿ ನಯನತಾರಾ ನಟಿಸಿದ ಮೇಲೆ ಅವರ ಬೇಡಿಕೆ ಹೆಚ್ಚಾಗಿದೆ. ಬಹುಭಾಷೆಗಳಲ್ಲಿ ನಟಿಸುತ್ತಾ ನಟಿ ಸಕ್ರಿಯರಾಗಿದ್ದಾರೆ. ಸದ್ಯ ಅವರು ‘ಮೂಕುತಿ ಅಮ್ಮನ್ 2’ ಸಿನಿಮಾದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ಕುರಿತು ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.