ಕಾಲಿವುಡ್ (Kollywood) ಸ್ಟಾರ್ ನಟಿ ನಯನತಾರಾ (Nayanthara) ಅವರು ಇದೀಗ ಪತಿ ಜೊತೆ ರೊಮ್ಯಾಂಟಿಕ್ ಮೂಡ್ಗೆ ಜಾರಿದ್ದಾರೆ. ಪತಿ ವಿಘ್ನೇಶ್ ಶಿವನ್ (Vignesh Shivan) ಜೊತೆಗಿನ ಲವ್ಲಿ ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ನಯನತಾರಾ ರೊಮ್ಯಾಂಟಿಕ್ ಫೋಟೋ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
ಸದ್ಯ ನಯನತಾರಾ ದಂಪತಿ ಸೌದಿ ಅರೇಬಿಯಾದಲ್ಲಿ ಎಂಜಾಯ್ ಮಾಡ್ತಿದ್ದಾರೆ. ನಯನತಾರಾಗೆ ಪತಿ ಸಿಹಿ ಮುತ್ತು ಕೊಟ್ಟಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನಟಿಯ ಕೆನ್ನೆಗೆ ಪತಿ ಮುತ್ತು ಕೊಟ್ಟಿರುವ ಪೋಸ್ ನೋಡಿ ಫ್ಯಾನ್ಸ್ ಸೂಪರ್ ಜೋಡಿ ಎಂದು ಕೊಂಡಾಡಿದ್ದಾರೆ. ಈ ಜೋಡಿ ಮೇಲೆ ಯಾರ ಕೆಟ್ಟ ದೃಷ್ಟಿ ಕೂಡ ಬೀಳದೇ ಇರಲಿ ಎಂದು ಹಾರೈಸುತ್ತಿದ್ದಾರೆ.
ಡಿವೋರ್ಸ್ (Divorce) ವದಂತಿ ಬೆನ್ನಲ್ಲೇ ನಯನತಾರಾ ಜೋಡಿಯ ಫೋಟೋ ನೋಡಿ ಅಬ್ಬಾ ಬೇರೇ ಆಗುವ ಸುದ್ದಿಯೇ ಸುಳ್ಳು ಎಂದು ಖುಷಿಪಡ್ತಿದ್ದಾರೆ. ಇದನ್ನೂ ಓದಿ:ಶಸ್ತ್ರಚಿಕಿತ್ಸೆಯ ಬಳಿಕ ಪತ್ನಿ, ಮಗನ ಜೊತೆ ಕಾಣಿಸಿಕೊಂಡ ಅಜಿತ್ ಕುಮಾರ್
View this post on Instagram
‘ಜವಾನ್’ ಸಕ್ಸಸ್ ನಂತರ ನಯನತಾರಾಗೆ ಭಾರೀ ಬೇಡಿಕೆ ಇದೆ. ಸ್ಟಾರ್ ನಟರ ಸಿನಿಮಾಗಳಿಗೆ ಬಿಗ್ ಆಫರ್ಗಳು ಲೇಡಿ ಸೂಪರ್ ಸ್ಟಾರ್ಗೆ ಅರಸಿ ಬರುತ್ತಿದೆ. ಬಾಲಿವುಡ್ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯೊಂದು ನಯನತಾರಾ ಜೊತೆ ಸಿನಿಮಾ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇತ್ತ ಪತಿ ವಿಘ್ನೇಶ್ ಶಿವನ್ ಹೊಸ ಸಿನಿಮಾದ ನಿರ್ದೇಶನಕ್ಕೆ ರೆಡಿಯಾಗಿದ್ದಾರೆ. ಹೀರೋ-ಹೀರೋಯಿನ್ ಸೆಲೆಕ್ಷನ್ ಕಡೆ ಬ್ಯುಸಿಯಿದ್ದಾರೆ. ವಿಭಿನ್ನ ಕಥೆ ಹೊತ್ತು ಆ್ಯಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ.