ಪುಟ್ಟ ಗೌರಿ ಮದುವೆ, ನಾಗಿಣಿ 2 (Nagini 2) ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ನಮ್ರತಾ ಗೌಡ (Namratha Gowda) ತಮ್ಮ ಫ್ಯಾನ್ಸ್‌ಗೆ ಸಿಹಿಸುದ್ದಿ ನೀಡಿದ್ದಾರೆ. ನೂತನ ಮನೆಗೆ ನಟಿ ಕಾಲಿಟ್ಟಿದ್ದಾರೆ. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.ಇದನ್ನೂ ಓದಿ:ದರ್ಶನ್ ಜೊತೆ ಆಕ್ಟ್ ಮಾಡಿದ್ದಕ್ಕೆ ತುಂಬಾ ಖುಷಿಯಿದೆ- ‘ಕಾಟೇರ’ ನಟಿ
Advertisement
ನಮ್ರತಾ ಅವರ ಹೊಸ ಮನೆ ಗೃಹಪ್ರವೇಶ (House Warming) ಸಮಾರಂಭ ಗ್ರ್ಯಾಂಡ್ ಆಗಿ ನಡೆದಿದೆ. ಕಿರುತೆರೆಯ ಹಲವು ಕಲಾವಿದರು ಭಾಗಿಯಾಗಿದ್ದಾರೆ.
Advertisement
Advertisement
ಬಿಗ್ ಬಾಸ್ ಕಿಶನ್, ನೇಹಾ ಗೌಡ, ಕವಿತಾ ಗೌಡ, ಅನುಪಮಾ, ಸಿಂಗರ್ ಕಾರ್ತಿಕ್ ಶರ್ಮಾ, ಯಶಸ್ವಿನಿ ಸೇರಿದಂತೆ ಹಲವರು ಸಾಕ್ಷಿಯಾಗಿದ್ದಾರೆ.
Advertisement
ಗೃಹಪ್ರವೇಶದ ಸಮಾರಂಭದಲ್ಲಿ ನಮ್ರತಾ ಗೌಡ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಬಣ್ಣದ ಸೀರೆಯುಟ್ಟು ನಟಿ ಕಂಗೊಳಿಸಿದ್ದಾರೆ. ಕಿಶನ್ ಜೊತೆ ಚೆಂದದ ಹಾಡಿಗೆ ಹೆಜ್ಜೆ ಕೂಡ ಹಾಕಿದ್ದಾರೆ.
ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಮ್ರತಾ, ಟಿವಿ ಸೀರಿಯಲ್‌ನಲ್ಲಿ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಮುಂಬರುವ ಬಿಗ್ ಬಾಸ್ ಸೀಸನ್ 10ಕ್ಕೆ (Bigg Boss Kannada) ನಮ್ರತಾ (Namratha Gowda) ಕಾಲಿಡುತ್ತಾರೆ ಎಂದು ಹೇಳಲಾಗುತ್ತಿದೆ. ದೊಡ್ಮನೆಗೆ ಕಾಲಿಡುವ ಮುನ್ನ ಹೊಸ ಮನೆಗೆ ಕಾಲಿಡುವ ನಿರ್ಧಾರಾ ಮಾಡಿದ್ರಾ? ಎಂಬ ಗುಸು ಗುಸು ಶುರುವಾಗಿದೆ.