ಕನ್ನಡದ ‘ವಜ್ರಕಾಯ’ (Vajrakaya) ನಟಿ ನಭಾ ನಟೇಶ್ (Nabha Natesh) ಸದಾ ಹೊಸ ಬಗೆಯ ಫೋಟೋಶೂಟ್ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಲೇ ಇರುತ್ತಾರೆ. ಈಗ ಪಿಜ್ಜಾ ತಿನ್ನುತ್ತಾ ಬೋಲ್ಡ್ ಫೋಟೋಶೂಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರಿಂದ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಶೃಂಗೇರಿ ಬೆಡಗಿ ನಭಾ ಸದ್ಯ ತೆಲುಗು ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಇದೀಗ ಅವರು ಹಂಚಿಕೊಂಡಿರುವ ಹೊಸ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಹಲ್‌ಚಲ್ ಎಬ್ಬಿಸಿದೆ. ಇದನ್ನೂ ಓದಿ:ಸಂಜನಾ ಆನಂದ್ ಜೊತೆಗಿನ 2ನೇ ಮದುವೆ ವದಂತಿಗೆ ತೆರೆ ಎಳೆದ ಚಂದನ್ ಶೆಟ್ಟಿ
ವೈಟ್ ಶಾರ್ಟ್ ಡ್ರೆಸ್‌ನಲ್ಲಿ ನಟಿ ಮಿಂಚಿದ್ದಾರೆ. ಪಿಜ್ಜಾ ತಿನ್ನುತ್ತಾ ವಿವಿಧ ಭಂಗಿಯಲ್ಲಿ ನಭಾ ಪೋಸ್ ನೀಡಿದ್ದಾರೆ. ನಟಿಯ ಹಾಟ್ ಅವತಾರ ನೋಡ್ತಿದ್ದಂತೆ ಪಿಜ್ಜಾಗಿಂತ ನಿಮ್ಮ ಸೊಂಟವೇ ಹಾಟ್ ಆಗಿದೆ ಎಂದು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. ಹೀಗೆ ನಟಿಯ ಫೋಟೋಗೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ.
ಇನ್ನೂ ‘ಸ್ವಯಂಭು’ ಎಂಬ ಪ್ಯಾನ್ ಇಂಡಿಯಾ ಚಿತ್ರ ಕೂಡ ನಭಾ ಕೈಯಲ್ಲಿದೆ. ಈ ಸಿನಿಮಾದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್ಗೆ ನಾಯಕಿಯಾಗಿ ನಭಾ ನಟಿಸಿದ್ದಾರೆ.
ಅಂದಹಾಗೆ, ಕನ್ನಡದ ‘ವಜ್ರಕಾಯ’ ಚಿತ್ರದ ಮೂಲಕ ನಭಾ ಪರಿಚಿತರಾದರು. ಶಿವಣ್ಣಗೆ ಹೀರೋಯಿನ್ ಜನಪ್ರಿಯತೆ ಗಳಿಸಿದರು. ಲೀ, ಸಾಹೇಬ ಸಿನಿಮಾದ ಬಳಿಕ ತೆಲುಗಿನಲ್ಲಿ ಬ್ಯುಸಿಯಾದರು.