‘ಸೀತಾರಾಮಂ’ (Seetharamam) ಬೆಡಗಿ ಮೃಣಾಲ್ ಠಾಕೂರ್ (Mrunal Thakur) ಸದ್ಯ ತೆಲುಗಿನಲ್ಲಿ ಬೇಡಿಕೆಯ ನಟಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ಹಸಿಬಿಸಿ ದೃಶ್ಯಗಳಲ್ಲಿ ನಟಿಸಲ್ಲ ಎಂದಿದ್ದಕ್ಕೆ ಹಲವು ಪ್ರಾಜೆಕ್ಟ್‌ಗಳು ಕೈತಪ್ಪಿ ಹೋಗಿರುವ ಬಗ್ಗೆ ಮಾತನಾಡಿದ್ದಾರೆ.
Advertisement
ಕಿಸ್ಸಿಂಗ್ ಸೀನ್ ಅಥವಾ ಬೆಡ್‌ರೂಮ್ ದೃಶ್ಯಗಳಲ್ಲಿ ನಟಿಸಲು ಪೋಷಕರು ಅನುಮತಿ ನೀಡುವುದಿಲ್ಲ ಎಂದಿದ್ದಾರೆ. ಬೋಲ್ಡ್ ದೃಶ್ಯಗಳಲ್ಲಿ ನಟಿಸುವಾಗ ಭಯ ಆಗುತ್ತಿತ್ತು ಎಂದು ನಟಿ ಮಾತನಾಡಿದ್ದಾರೆ. ಇದನ್ನೂ ಓದಿ:ಸಮಂತಾ ಹುಟ್ಟುಹಬ್ಬಕ್ಕೆ ವಿಜಯ್ ದೇವರಕೊಂಡ ಲವ್ಲಿ ವಿಶ್
Advertisement
Advertisement
ಈ ಕಾರಣಕ್ಕೆ ಮೃಣಾಲ್ ಠಾಕೂರ್ ಅವರು ಅನೇಕ ಆಫರ್‌ಗಳನ್ನು ಮಿಸ್ ಮಾಡಿಕೊಂಡಿದ್ದು ಇದೆ. ಆದರೆ ಎಲ್ಲಿಯವರೆಗೂ ಅವಕಾಶಗಳನ್ನು ಕೈ ಚೆಲ್ಲಲು ಸಾಧ್ಯ. ಈಗ ಅವರು ತಮ್ಮ ಪೋಷಕರಿಗೆ ಈ ವಿಚಾರವನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಅಂಥ ದೃಶ್ಯ ಅಗತ್ಯವಿದೆ ಎಂದಾದರೆ ಅದನ್ನು ಮಾಡುವುದು ಅನಿವಾರ್ಯ ಎಂದು ಮೃಣಾಲ್ ಅರ್ಥ ಮಾಡಿಸಿದ್ದಾರೆ.
Advertisement
ಹೃತಿಕ್ ರೋಷನ್ ನಟನೆಯ ‘ಸೂಪರ್ 30’ (Super 30) ಸಿನಿಮಾದಲ್ಲಿ ಮೃಣಾಲ್ ಠಾಕೂರ್ ಸಿನಿ ಜರ್ನಿ ಶುರುವಾಯ್ತು. ಸೀತಾರಾಮಂ ಚಿತ್ರದಲ್ಲಿ ಸೀತಾ ಪಾತ್ರದ ಮೂಲಕ ಜನಮನ ಗೆದ್ದರು. ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಚಿತ್ರ ಮತ್ತಷ್ಟು ಜನಪ್ರಿಯತೆ ನೀಡಿದೆ.