ನಟಿ ಮೃಣಾಲ್ ಠಾಕೂರ್ (Mrunal Thakar) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಫ್ಯಾಮಿಲಿ ಸ್ಟಾರ್’ ನಂತರ ಪ್ರಭಾಸ್ (Prabhas) ಸಿನಿಮಾಗೆ ನಟಿ ಎಂಟ್ರಿ ಕೊಟ್ಟಿದ್ದಾರೆ. ಕಲ್ಕಿ ಸಿನಿಮಾಗಾಗಿ ‘ಸೀತಾರಾಮಂ’ ಬೆಡಗಿ ಜೊತೆಯಾಗಿದ್ದಾರೆ.
ಬಹುನಿರೀಕ್ಷಿತ ‘ಕಲ್ಕಿ 2898 ಎಡಿ’ (Kalki 2898 AD) ಸಿನಿಮಾದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಬಿಗ್ ಬಿ ಸೇರಿದಂತೆ ಹಲವರು ನಟಿಸಿದ್ದಾರೆ. ಇದೀಗ ಹರಿದಾಡುತ್ತಿರುವ ಇಂಟ್ರಸ್ಟಿಂಗ್ ಅಪ್‌ಡೇಟ್ ಏನೆಂದರೆ, ಪ್ರಭಾಸ್ ಸಿನಿಮಾದಲ್ಲಿ ಮೃಣಾಲ್ ವಿಶೇಷ ಪಾತ್ರದಲ್ಲಿ ನಟಿಸಲು ಬುಲಾವ್ ಬಂದಿದೆ.
ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರವೇ ತಾವಾಗಿ ನಟಿಸುವ ಬಿಟೌನ್ ಬೆಡಗಿ ಮೃಣಾಲ್‌ಗೆ ‘ಕಲ್ಕಿ 2898 ಎಡಿ’ ಚಿತ್ರದಲ್ಲಿನ ಸ್ಪೆಷಲ್ ರೋಲ್‌ಗೆ ಇವರೇ ಸೂಕ್ತ ಎಂದು ಬಿಗ್ ಆಫರ್ ಕೊಟ್ಟಿದ್ದಾರಂತೆ. ಪುಟ್ಟ ಪಾತ್ರವಾಗಿದ್ದರೂ ಜನರಿಗೆ ಇಂಪಾಕ್ಟ್ ಆಗುವ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎನ್ನಲಾಗುತ್ತಿದೆ. ಪಾತ್ರ ಹೇಗಿದೆ ಎಂಬುದನ್ನು ರಿಲೀಸ್ ದಿನದವರೆಗೂ ಕಾಯಬೇಕಿದೆ. ಸದ್ಯ ಫ್ಯಾನ್ಸ್ ಈ ಸುದ್ದಿ ಕೇಳಿ ಥ್ರಿಲ್ ಆಗಿದ್ದಾರೆ.
ನಾಗ ಅಶ್ವೀನ್ ನಿರ್ದೇಶನದ ‘ಕಲ್ಕಿ 2898 ಎಡಿ’ ಚಿತ್ರದ ಇದೇ ಜೂನ್ 27ರಂದು ಬಹುಭಾಷೆಗಳಲ್ಲಿ ರಿಲೀಸ್ ಆಗಲಿದೆ. ವಿಶೇಷ ಅಂದರೆ, ಮೊದಲ ಬಾರಿಗೆ ದೀಪಿಕಾ, ಮಾತೃ ಭಾಷೆ ಕನ್ನಡದಲ್ಲಿ ಡಬ್ ಮಾಡಿದ್ದಾರೆ.