7 ತಿಂಗಳ ಹಿಂದಷ್ಟೇ ನಾನು ಬ್ರೇಕಪ್ ಮಾಡಿಕೊಂಡೆ: ಮೃಣಾಲ್ ಠಾಕೂರ್

Public TV
1 Min Read
mrunal thakur

‘ಸೀತಾ ರಾಮಂ’ (Seetha Ramam) ನಟಿ ಮೃಣಾಲ್ ಠಾಕೂರ್ (Mrunal Thakur) ಬ್ಯೂಟಿ ಮತ್ತು ಅಮೋಘ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಇದರ ನಡುವೆ ಬ್ರೇಕಪ್ ಕಥೆಯೊಂದನ್ನು ನಟಿ ರಿವೀಲ್ ಮಾಡಿದ್ದಾರೆ. ಬಾಯ್‌ಫ್ರೆಂಡ್ ನನಗೆ ಕೈ ಕೊಟ್ಟು ಹೋದ, 7 ತಿಂಗಳ ಹಿಂದಷ್ಟೇ ಬ್ರೇಕಪ್ (Breakup) ಮಾಡಿಕೊಂಡೆ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.

mrunal thakur

ಇತ್ತೀಚೆಗೆ ಮೃಣಾಲ್ ನೀಡಿದ ಸಂದರ್ಶನದಲ್ಲಿ ಲವ್ ಲೈಫ್ ಮತ್ತು ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ಎಲ್ಲರಂತೆ ನನಗೂ ಬ್ರೇಕಪ್ ಆಗಿದೆ. 7 ತಿಂಗಳ ಹಿಂದಷ್ಟೇ ಬ್ರೇಕಪ್ ಮಾಡಿಕೊಂಡೆ. ನಮಗೆ ಸರಿ ಹೊಂದುವ ವ್ಯಕ್ತಿ ನಮ್ಮ ಜೀವನದಲ್ಲಿ ಬರುವವರೆಗೂ ಬಂದು ಹೋಗುವವರು ಇರುತ್ತಾರೆ.  ನಟಿ ಎಂಬ ಕಾರಣಕ್ಕೆ ಒಪ್ಪಲಿಲ್ಲ. ಅದ್ಯಾಕೆ ಹೀಗೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ಆದರೆ ಈ ಸಂಬಂಧ ಅಂತ್ಯವಾಗಿರೋದು ಖುಷಿಯಿದೆ ಎಂದಿದ್ದಾರೆ. ಇದನ್ನೂ ಓದಿ:ರೆಬೆಲ್ ಸ್ಟಾರ್ ಸೊಸೆ ಅವಿವಗೆ ಸೀಮಂತ ಸಂಭ್ರಮ

mrunal thakur

ನಟನೆಯ ವಿಚಾರದಲ್ಲಿ ನಮ್ಮದು ಶಿಸ್ತುಬದ್ಧ ಕುಟುಂಬ, ತುಂಬಾ ಕಟ್ಟುನಿಟ್ಟು ಇದೆಲ್ಲಾ ಸರಿ ಹೋಗಲ್ಲ ಎಂದು ಆತ ಹೇಳಿದ. ಇದೆಲ್ಲಾ ಕೇಳಿದ ಮೇಲೆ ಬಹಳ ನೋವಾಯ್ತು. ಇಬ್ಬರ ಪರಸ್ಪರ ಒಪ್ಪಿಗೆಯ ಮೇರೆಗೆ ಬ್ರೇಕಪ್ ಮಾಡಿಕೊಂಡೆವು. ಇದೆಲ್ಲಾ 7 ತಿಂಗಳ ಹಿಂದೆ ನಡೆದಿರೋದು ಎಂದಿದ್ದಾರೆ ಮೃಣಾಲ್. ಬ್ರೇಕಪ್ ಆದ ವೇಳೆ, ನಾನು ದುಃಖಿಸಲಿಲ್ಲ. ನಾನು ಬದುಕಿನಲ್ಲಿ ಕೆಲವು ಬ್ರೇಕಪ್‌ಗಳು ಆಗಿವೆ. ನನಗೆ ನೋಡಲು ಸಖತ್ ಲುಕ್‌ ಇರುವ ಹುಡುಗ ಬೇಕಿಲ್ಲ, ಆದರೆ ಒಳ್ಳೆಯ ಗುಣವಿದ್ದರೆ ಸಾಕು ಎಂದು ನಟಿ ಮಾತನಾಡಿದ್ದಾರೆ.

ಅಂದಹಾಗೆ, ಸೀತಾ ರಾಮಂ, ಹಾಯ್ ನಾನ್ನಾ, ಫ್ಯಾಮಿಲಿ ಸ್ಟಾರ್ ಚಿತ್ರಗಳ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡಿರುವ ಮೃಣಾಲ್ ಸದ್ಯ ಸೌತ್ ಮತ್ತು ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

Share This Article