ಹುಡುಗರ ಪಾಲಿನ ಇಷ್ಟದೇವತೆ ಸೀತೆ ಮೃಣಾಲ್ ಠಾಕೂರ್ (Mrunal Thakur) ಇದೀಗ ಕಡಲ ಕಿನಾರೆಯಲ್ಲಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಮತ್ತೆ ಹಾಟ್ ಅವತಾರದಲ್ಲಿ ‘ಸೀತಾರಾಮಂ’ (Seetharamam) ಸುಂದರಿ ಕಾಣಿಸಿಕೊಂಡಿದ್ದಾರೆ.
‘ಸೀತಾರಾಮಂ’ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್‌ಗೆ ಜೋಡಿಯಾಗಿ ನಟಿಸಿದ್ದ ಮೃಣಾಲ್ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಚಿತ್ರದ ಕಥೆ ಸೀತೆಯ ನಟನೆ ಎಲ್ಲವೂ ಫ್ಯಾನ್ಸ್‌ಗೆ ಮೋಡಿ ಮಾಡಿತ್ತು. ಈ ಸಿನಿಮಾದ ಬಳಿಕ ಮೃಣಾಲ್ ಬಂಪರ್ ಆಫರ್ ಸಿಕ್ತು. ಇದೀಗ ಸಾಲು ಸಾಲು ಸಿನಿಮಾಗಳಿಗೆ ಮೃಣಾಲ್ ನಾಯಕಿಯಾಗಿದ್ದಾರೆ.
ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಕಡಲ ಕಿನಾರೆಯಲ್ಲಿ ನಟಿ ವೆಕೇಷನ್ ಎಂಜಾಯ್ ಮಾಡ್ತಿದ್ದಾರೆ. ಲೈಟ್ ಬಣ್ಣದ ಡ್ರೆಸ್ ಧರಿಸಿ ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟಿದ್ದಾರೆ. ಕಳೆದ ಬಾರಿ ಮೃಣಾಲ್ ಬೋಲ್ಡ್ ಆಗಿ ಕಾಣಿಸಿಕೊಂಡು ಪಡ್ಡೆಹುಡುಗರು ಹುಬ್ಬೇರಿಸುವಂತೆ ಮಾಡಿದ್ದರು. ಇದೀಗ ಮತ್ತೆ ಬೋಲ್ಡ್ ಅವತಾರ ತಾಳಿದ್ದಾರೆ. ಇದನ್ನೂ ಓದಿ:ಮೈಸೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೀಪಿಕಾ ದಾಸ್
View this post on Instagram
ಮೃಣಾಲ್ ವೆಕೇಷನ್ ಫೋಟೋ ವೈರಲ್ ಆಗ್ತಿದ್ದಂತೆ ದಯವಿಟ್ಟು ಈ ರೀತಿ ಡ್ರೆಸ್‌ನ ಧರಿಸಬೇಡಿ ಎಂದು ಮನವಿ ಮಾಡಿದ್ದಾರೆ. ಸೀತೆಯಾಗಿ ನೋಡಿರೋ ನೆಟ್ಟಿಗರು ನಟಿಯ ಹಾಟ್ ಅವತಾರಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ.