ಬಾಲಿವುಡ್ (Bollywood) ಬೆಡಗಿ ಮೃಣಾಲ್ ಠಾಕೂರ್ (Mrunal Thakur) ತೆಲುಗಿನ ಬ್ಯಾಕ್ ಟು ಬ್ಯಾಕ್ ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಸದ್ಯ ಸಂದರ್ಶನವೊಂದರಲ್ಲಿ ಎಗ್ ಫ್ರೀಜ್ (Egg Freezing) ಮಾಡಿ ಮಗು ಮಾಡಿಕೊಳ್ಳುವ ಪ್ಲ್ಯಾನ್‌ನಲ್ಲಿ ಇರೋದಾಗಿ ನಟಿ ಮಾತನಾಡಿದ್ದಾರೆ. ನಟಿಯ ಈ ಹೇಳಿಕೆ ಈಗ ಸೆನ್ಸೇಷನ್ ಕ್ರಿಯೇಟ್ ಮಾಡಿದೆ.
ವೃತ್ತಿ ಜೀವನದಲ್ಲಿ ಬ್ಯುಸಿ ಇರುವುದರಿಂದ ಅನೇಕ ಸೆಲೆಬ್ರಿಟಿಗಳು ಮಗುವನ್ನು ಪಡೆಯಲು ತಡ ಮಾಡುತ್ತಾರೆ. ಆ ಸಂದರ್ಭದಲ್ಲಿ ಎಗ್ ಫ್ರೀಜಿಂಗ್ ತಂತ್ರಜ್ಞಾನದ ಮೊರೆ ಹೋಗುತ್ತಾರೆ. ‘ಸೀತಾರಾಮಂ’ ನಟಿ ಮೃಣಾಲ್ (Mrunal) ಕೂಡ ಇದೇ ರೀತಿಯ ಪ್ಲ್ಯಾನ್ ಮಾಡಿದ್ದಾರೆ. ಸಂದರ್ಶನದಲ್ಲಿ ತಮ್ಮ ಮದುವೆ ನಂತರದ ಯೋಚನೆಯ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸಂಬಂಧಗಳು ಕಷ್ಟ. ನನ್ನ ಕೆಲಸದ ಸ್ವರೂಪ ಅವರಿಗೆ ಅರ್ಥ ಆಗಬೇಕು. ನಾನು ಕೂಡ ನನ್ನ ಎಗ್‌ಗಳನ್ನು ಫ್ರೀಜ್ ಮಾಡುವ ವಿಚಾರದ ಬಗ್ಗೆ ಆಲೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಒಂದೊಮ್ಮೆ ಶೀಘ್ರವೇ ಮದುವೆ ಆದರೂ ಸದ್ಯಕ್ಕಂತೂ ಮಗು ಪಡೆಯೋ ಆಲೋಚನೆ ತಮಗಿಲ್ಲ ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಇದನ್ನೂ ಓದಿ:ಕೊನೆಗೂ ಮದುವೆಯಾಗುವ ಹುಡುಗನ ಫೋಟೋ ರಿವೀಲ್ ಮಾಡಿದ ಮಾನ್ವಿತಾ
ಈ ವೇಳೆ, ಟ್ರೋಲ್‌ಗಳ (Troll) ಬಗ್ಗೆ, ಕುಟುಂಬ ನೀಡಿದ ಬೆಂಬಲದ ಬಗ್ಗೆಯೂ ಮೃಣಾಲ್ ಮಾತನಾಡಿದ್ದಾರೆ. ನಮ್ಮ ಕುಟುಂಬದವರನ್ನು ಬಿಟ್ಟು ಬೇರಾರೂ ಆ ಬಗ್ಗೆ ಕೇರ್ ಮಾಡುವುದಿಲ್ಲ ಎಂದಿದ್ದಾರೆ.
ಸೀತಾರಾಮಂ, ಹಾಯ್ ನಾನಾ, ಫ್ಯಾಮಿಲಿ ಸ್ಟಾರ್ ಸಿನಿಮಾದ ನಂತರ ಬಾಲಿವುಡ್ ಖ್ಯಾತ ನಿರ್ದೇಶಕ ಕಮ್ ನಿರ್ಮಾಪಕ ಸಂಜಯ್ ಲೀಲಾ ಬನ್ಸಾಲಿ (Sanjay Leela Bansali) ಸಿನಿಮಾದಲ್ಲಿ ಹೀರೋಯಿನ್ ಆಗಿ ಆಯ್ಕೆ ಆಗಿದ್ದಾರೆ. ಹೊಸ ಪ್ರಾಜೆಕ್ಟ್‌ಗಾಗಿ ವರ್ಕ್ ಶಾಪ್‌ನಲ್ಲಿ ನಟಿ ಬ್ಯುಸಿಯಾಗಿದ್ದಾರೆ.