‘ಸೀತಾರಾಮಂ’ ನಟಿ ಲಿಪ್‌ಲಾಕ್ ಮಾಡಿದ್ದಕ್ಕೆ ಫ್ಯಾನ್ಸ್ ಅಸಮಾಧಾನ

Public TV
1 Min Read
MRUNAL THAKUR

ಸಾಂಪ್ರದಾಯಿಕ ಲುಕ್‌ನಲ್ಲಿ ಸೀತಾ ಮಹಾಲಕ್ಷ್ಮಿ ಆಗಿ ಮನಗೆದ್ದ ಮೃಣಾಲ್ ಠಾಕೂರ್ (Mrunal Thakur) ‘ಹಾಯ್ ನಾನಾ’ (Hai Nana) ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿಗೆ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದ ಟೀಸರ್ ಕೂಡ ರಿಲೀಸ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದೀಗ ಸೀತೆಯಾಗಿ ಮನಗೆದ್ದಿದ್ದ ಮೃಣಾಲ್, ಈ ಚಿತ್ರದಲ್ಲಿನ ನಾನಿ- ಮೃಣಾಲ್ ಲಿಪ್ ಲಾಕ್ ದೃಶ್ಯಗಳನ್ನ ನೋಡಿ ಫ್ಯಾನ್ಸ್ ಅಸಮಾಧಾನ ಹೊರಹಾಕಿದ್ದಾರೆ.

mrunal thakur

ಈ ಸಿನಿಮಾದಲ್ಲಿ ಮೃಣಾಲ್ ಅವರು ತೆಲುಗಿನ ಸ್ಟಾರ್ ನಟ ನಾನಿ ಜೊತೆ ನಟಿಸಿದ್ದಾರೆ. ಟೀಸರ್‌ನಲ್ಲಿ ತಂದೆ-ಮಗಳ ಪ್ರೀತಿಯ ಬಂಧ ಒಂದೆಡೆಯಾದರೆ, ಮೃಣಾಲ್- ನಾನಿ ಲಿಪ್‌ಲಾಕ್ ದೃಶ್ಯಗಳು ಎಲ್ಲರ ಗಮನ ಸೆಳೆದಿದೆ. ನಟಿಯ ಅಭಿಮಾನಿಗಳಿಗೆ ಒಂದು ರೀತಿಯಲ್ಲಿ ಶಾಕ್ ಆಗಿದೆ. ಏಕೆಂದರೆ ಸೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಅವರನ್ನು ನೋಡಿ ಫಿದಾ ಆದ ಅಭಿಮಾನಿಗಳು ನಟಿಯನ್ನು ಬೋಲ್ಡ್ ಪಾತ್ರಗಳಲ್ಲಿ ಒಪ್ಪಿಕೊಳ್ಳಲು ತಯಾರಿಲ್ಲ.

mrunal

ಈ ಲಸ್ಟ್ ಸ್ಟೋರಿ ವೆಬ್ ಸರಣಿಯಲ್ಲೂ ಮೃಣಾಲ್ ಹಸಿಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಆಗಲೂ ಅಭಿಮಾನಿಗಳ ಅಪಸ್ವರ ಎತ್ತಿದ್ದರು. ಅಲ್ಲದೆ, ನಟಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಬಿಕಿನಿ ಫೋಟೋಗಳನ್ನು ಹರಿಬಿಡುತ್ತಾರೆ. ಈ ವೇಳೆಯೂ, ಸಹ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ‘ಹಾಯ್ ನಾನಾ’ ಸಿನಿಮಾದಲ್ಲಿ ಮೃಣಾಲ್ ಲಿಪ್‌ಲಾಕ್ ಮಾಡಿರುವುದನ್ನು ಅಭಿಮಾನಿಗಳು ಸಹಿಸಿಕೊಳ್ಳುತ್ತಿಲ್ಲ. ಇದನ್ನೂ ಓದಿ:ಹನಿಮೂನ್ ಪೀರಿಯಡ್ ಮುಗಿಸಿದ ಬಿಗ್ ಬಾಸ್ ಕಂಟೆಸ್ಟೆಂಟ್ಸ್

‘ಹಾಯ್ ನಾನಾ’ ಸಿನಿಮಾ ಡಿಸೆಂಬರ್ 7ರಂದು ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಹೊಸ ಜೋಡಿಯನ್ನ ಫ್ಯಾನ್ಸ್ ಮೆಚ್ಚಿಕೊಳ್ಳುತ್ತಾರಾ ಕಾಯಬೇಕಿದೆ.

Share This Article