ಬೆಂಗಳೂರು: ಸ್ಯಾಂಡಲ್‍ವುಡ್ ಮತ್ತೊಂದು ಮದುವೆ ಸಂಭ್ರಮಕ್ಕೆ ಸಜ್ಜಾಗುತ್ತಿದ್ದು, ಮೇ 2 ರಂದು ನಟಿ ಮೇಘನಾ ರಾಜ್ ನಟ ಚಿರಂಜೀವಿ ಸರ್ಜಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಸೆಲೆಬ್ರಿಟಿಗಳು ಮದುವೆಯಾಗುತ್ತಿರುವ ಬೆನ್ನಲ್ಲೆ ಹನಿಮೂನ್ ಗೆ ಹೋಗುವುದು ಸಾಮಾನ್ಯ. ಹೀಗಾಗಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಈ ತಾರಾ ಜೋಡಿಗಳು ಹನಿಮೂನ್‍ಗಾಗಿ ಯಾವ ಕಡೆ ಹೋಗುತ್ತಾರೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಹುಟ್ಟದೇ ಇರಲಾರದು. ಆದರೆ ಮೇಘನಾ ಮತ್ತು ಚಿರು ಮದುವೆಯಾದ ತಕ್ಷಣವೇ ಹನಿಮೂನಿಗೆ ಹೋಗುತ್ತಿಲ್ಲ.
Advertisement
Advertisement
ಮದುವೆಯ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್ ಅವರಿಗೆ ಹನಿಮೂನ್ ಗಾಗಿ ಯಾವ ದೇಶಕ್ಕೆ ಹೋಗುತ್ತಿರಿ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ಮೇಘನಾ, ನಾವು ಮದುವೆಯಾದ ಮೇಲೆ ಎಲ್ಲೂ ಹನಿಮೂನ್‍ಗೆ ಹೋಗುತ್ತಿಲ್ಲ. ಚಿರುಗೆ ‘ರಾಜಮಾರ್ತಾಂಡ’ ಚಿತ್ರದ ಶೂಟಿಂಗ್ ಇದ್ದು, ಚಿತ್ರೀಕರಣ ಮುಗಿದು ಒಂದು ತಿಂಗಳ ನಂತರ ಹನಿಮೂನ್‍ಗೆ ಹೋಗುವ ಪ್ಲಾನ್ ನಿರ್ಧಾರವಾಗಲಿದೆ ಎಂದು ಉತ್ತರಿಸಿದ್ದಾರೆ.
Advertisement
ಚಿರು ಹಾಗೂ ಮೇಘನಾ ಮದುವೆ ಅರಮನೆ ಮೈದಾನದ ವೈಟ್ ಪೆಟಲ್ಸ್ ಹಾಲ್‍ನಲ್ಲಿ ನಡೆಯಲಿದ್ದು, ಮದುವೆ ಸಂಭ್ರಮಕ್ಕೆ ಸ್ಯಾಂಡಲ್‍ವುಡ್‍ನ ಗಣ್ಯಾತಿಗಣ್ಯರು ಸಾಕ್ಷಿಯಾಗಲಿದ್ದಾರೆ. ನಾಳೆಯಿಂದ ಚಪ್ಪರ ಶಾಸ್ತ್ರ, ಅರಿಶಿಣ ಶಾಸ್ತ್ರ ಶುರುವಾಗಲಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ನಡೆಯಲಿದ್ದು, ಇದೇ ತಿಂಗಳು 29ಕ್ಕೆ ಕೋರಮಂಗಲದ ಚರ್ಚ್‍ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ.
Advertisement
ಮೇ 2ರ ಬೆಳಗ್ಗೆ 10.30ರಿಂದ 11 ಗಂಟೆಗೆ ಮದುವೆ ಮುಹೂರ್ತವಿದ್ದು, ಸಂಜೆ 7 ಗಂಟೆಗೆ ಆರತಕ್ಷತೆ ನಡೆಯಲಿದೆ. ಮೊದಲು ಎಂದರೆ ನಾಳೆ ಚಪ್ಪರ ಪೂಜೆ ನಡೆಯಲಿದೆ. ನಂತರ ಹಳದಿ ಶಾಸ್ತ್ರ, ಬಳೆ ಶಾಸ್ತ್ರ ನಡೆಯಲಿದೆ. ಹಳದಿ ಶಾಸ್ತ್ರಕ್ಕೆ ಇಂಡೋ ವೆಸ್ಟ್ರನ್ ಲುಕ್, ಮೆಹೆಂದಿಗೆ ನಾರ್ಥ್ ಇಂಡಿಯನ್ ಲುಕ್‍ನಲ್ಲಿ ಮೇಘನಾ ರಾಜ್ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಮದುವೆಯ ಎಲ್ಲ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ಮೇಘನಾ ರಾಜ್
ಸ್ಯಾಂಡಲ್‍ವುಡ್‍ನಲ್ಲಿ ಮೊದಲ ಬಾರಿಗೆ ರೋಮನ್ ಕ್ಯಾಥೋಲಿಕ್ ಸಂಪ್ರದಾಯದಂತೆ ಮದುವೆ ಬೆಂಗಳೂರಿನ ಸೇಂಟ್ ಆಂಟೋನಿಸ್ ಚರ್ಚ್‍ನಲ್ಲಿ ನಡೆಯಲಿದೆ. ಇದಾದ ಬಳಿಕ ಮೆಹಂದಿ ಶಾಸ್ತ್ರ ಮನೆಯಲೇ ನಡೆಯಲಿದೆ. ಇದೆಲ್ಲಾ ಮುಗಿದ ಮೇಲೆ ಮುಹೂರ್ತ ಹಾಗೂ ಆರತಕ್ಷತೆ ನಡೆಯಲಿದೆ.
ಕನ್ನಡ, ತಮಿಳು, ತೆಲುಗು, ಮಲೆಯಾಳಂ ಚಿತ್ರರಂಗದ ಖ್ಯಾತ ಕಲಾವಿದರನ್ನು ಮದುವೆಗೆ ಆಹ್ವಾನಿಸಲಾಗಿದೆ.