‘ಜೊತೆ ಜೊತೆಯಲಿ’ (Jothe Jotheyali) ನಟಿ ಮೇಘಾ ಶೆಟ್ಟಿ (Megha Shetty) ಮತ್ತೆ ಗ್ಲ್ಯಾಮರಸ್ ಆಗಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ನೀಲಿ ಬಣ್ಣದ ಉಡುಗೆಯಲ್ಲಿ ನಟಿ ಕಂಗೊಳಿಸಿದ್ದಾರೆ. ನಟಿಯ ಬೋಲ್ಡ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದನ್ನೂ ಓದಿ:ರಜನಿ ಅಭಿಮಾನಿಗಳಿಗೆ ನಿರಾಸೆ : ಸಂಕ್ರಾಂತಿಗೆ ಬರ್ತಿಲ್ಲ ‘ಲಾಲ್ ಸಲಾಂ’
‘ಕೈವಾ’ ನಟಿ ಮೇಘಾ, ನೀಲಿ ಬಣ್ಣದ ಡ್ರೆಸ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಮೇಘಾ ಸೌಂದರ್ಯವನ್ನು ಹಾಲಿವುಡ್ ನಟಿಯರಿಗೆ ಹೋಲಿಸಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಹೊಸ ರೆಕಾರ್ಡ್ ಬರೆದ ಬಾಲಿವುಡ್ ಕಿಂಗ್ ಖಾನ್
ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅನು ಸಿರಿಮನೆ ಪಾತ್ರದ ಮೂಲಕ ಕನ್ನಡಿಗರಿಗೆ ಪರಿಚಿತರಾದರು. ಅನಿರುದ್ಧಗೆ ಹೀರೋಯಿನ್ ಆಗಿ ಮೇಘಾ ಶೆಟ್ಟಿ ಮಿಂಚಿದ್ದರು. ಈ ಸೀರಿಯಲ್ ಪ್ರಸಾರವಾದ ಕೆಲವೇ ದಿನಗಳಲ್ಲಿ ಅನು ಪಾತ್ರಧಾರಿ ಮೇಘಾ ಕೂಡ ಹಿಟ್ ಆದರು.
ಬಳಿಕ ಗೋಲ್ಡನ್ ಸ್ಟಾರ್ ಗಣೇಶ್‌ಗೆ (Golden Star Ganesh) ಜೋಡಿಯಾಗಿ ‘ತ್ರಿಬಲ್ ರೈಡಿಂಗ್’, ಡಾರ್ಲಿಂಗ್ ಕೃಷ್ಣಗೆ (Darling Krishna) ನಾಯಕಿಯಾಗಿ ‘ದಿಲ್‌ಪಸಂದ್’, ಧನ್ವೀರ್ ಜೊತೆ ‘ಕೈವಾ’ ಸಿನಿಮಾದಲ್ಲಿ ಮೇಘಾ ಶೆಟ್ಟಿ ನಟಿಸಿದ್ದರು.
ಇದೀಗ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್ (Vinay Rajkumar) ಜೊತೆ ‘ಗ್ರಾಮಾಯಣ’ (Gramayana) ಎಂಬ ಸಿನಿಮಾದಲ್ಲಿ ಮೇಘಾ ನಟಿಸುತ್ತಿದ್ದಾರೆ. ಹೊಸ ಬಗೆಯ ಕಥೆಗಳನ್ನು ನಟಿ ಕೇಳುತ್ತಿದ್ದಾರೆ. ಈಗಾಗಲೇ ಮಾಡಿರುವ ಸಿನಿಮಾಗಳಲ್ಲಿ ಮೇಘಾ ನಟನೆಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ.