ಕನ್ನಡದಲ್ಲಿ ಮೌರ್ಯ, ಅರಸು ಸೇರಿದಂತೆ ಹಲವಾರು ಚಿತ್ರಗಳನ್ನು ಮಾಡಿರುವ ನಟಿ ಮೀರಾ ಜಾಸ್ಮಿನ್ (Meera Jasmine) ಅವರ ತಂದೆ ನಿಧನರಾಗಿದ್ದಾರೆ (Passed away). ಈ ವಿಷಯವನ್ನು ನಟಿಯೇ ಸೋಷಿಯಲ್ ಮೀಡಿಯಾ ಮೂಲಕ ಖಚಿತ ಪಡಿಸಿದ್ದಾರೆ.
ಮೀರಾ ತಂದೆ ಜೋಸೆಫ್ ಫಿಲಿಪ್ (Joseph Philip) ಅವರಿಗೆ 83 ವರ್ಷ ವಯಸ್ಸಾಗಿತ್ತು. ಕೇರಳದ ಎರ್ನಾಕುಲಂ ನಲ್ಲಿ ನಿಧನರಾಗಿದ್ದಾರೆ ಎಂದು ಫೋಟೋ ಸಮೇತ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಯೋ ಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು.
ಮೀರಾ ಜಾಸ್ಮಿನ್ ಸಿನಿಮಾ ರಂಗಕ್ಕೆ ಬರುವುದಕ್ಕೆ ಮತ್ತು ಅವರ ಬೆಳವಣಿಗೆ ಹಿಂದೆ ತಂದೆಯ ಬಲವಾದ ಒತ್ತಾಸೆ ಇತ್ತು ಎನ್ನುವುದನ್ನು ಈ ಮೂಲಕ ಅವರು ಹೇಳಿದ್ದಾರೆ.