ಕನ್ನಡದ ‘ಪುಟ್ನಂಜ’ ನಟಿ ಮೀನಾ (Meena) ಅವರು ಸಿನಿಮಾ ಜೊತೆಗೆ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಆಗಮಿಸಿದ್ದ ವೇಳೆ, ತಮಿಳು ಬೇಡ ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಮೀನಾ ಗರಂ ಆಗಿದ್ದಾರೆ. ಈ ಕುರಿತ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ದುಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಬಹುಭಾಷೆಯ ಕಲಾವಿದರು ಭಾಗಿಯಾಗಿದ್ದರು. ತಂಡದ ಆಹ್ವಾನ ಮೇರೆಗೆ ನಟಿ ಮೀನಾ ಕೂಡ ಈ ಸಮಾರಂಭಕ್ಕೆ ಬಂದಿದ್ದರು. ಈ ವೇಳೆ, ತಮಿಳು ಬೇಡ, ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ನಟಿ ಮೀನಾ ಸಿಟ್ಟಾದ ಘಟನೆ ನಡೆದಿದೆ. ಮಾಧ್ಯಮಗಳ ಮುಂದೆ ನಟಿ ಮೀನಾ ಎಂದಿನಂತೆ ತಮಿಳಿನಲ್ಲಿ ಮಾತಾನಾಡಲು ಆರಂಭಿಸಿದ್ದರು. ಆದರೆ ಕೆಲವರು, ಹಿಂದಿಯಲ್ಲಿ ಮಾತನಾಡಿ ಎಂದಿದ್ದಕ್ಕೆ ಮೀನಾ ಗರಂ ಆದರು. ಹಿಂದಿಯಲ್ಲಿ (Hindi) ಮಾತನಾಡಬೇಕಿದ್ರೆ ನನ್ನನೇಕೆ ಕರೆದ್ರಿ ಅಂತ ಮೀನಾ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ:ಗುಂಡೇಟಿನಿಂದ ಚೇತರಿಸಿಕೊಳ್ಳುತ್ತಿರುವ ಗೋವಿಂದರನ್ನು ನೋಡಲು ಆಸ್ಪತ್ರೆಗೆ ಬಂದ ಶಿಲ್ಪಾ ಶೆಟ್ಟಿ
Advertisement
Advertisement
ಆ ನಂತರ ಇಂಗ್ಲೀಷ್ನಲ್ಲಿ ಮಾತನಾಡಿ, ದಕ್ಷಿಣ ಭಾರತದ ಸಿನಿಮಾಗಳು ಅದ್ಭುತವಾಗಿದೆ. ನಾನು ದಕ್ಷಿಣ ಭಾರತೀಯಳಾಗಿರುವುದ್ದಕ್ಕೆ ಹೆಮ್ಮೆ ಇದೆ ಎಂದರು. ಇಂದು ಸಿನಿಮಾ ರಂಗದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ವ್ಯತ್ಯಾಸವಿಲ್ಲ. ಇಂದು ಎಲ್ಲಾ ಭಾಷೆಯ ಕಲಾವಿದರು ಬೇರೇ ಬೇರೇ ಭಾಷೆಗಳಲ್ಲಿಯೂ ನಟಿಸುತ್ತಿದ್ದಾರೆ ಎಂದು ನಟಿ ಮಾತನಾಡಿದರು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೀನಾ ಮಾತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.