ಕಾಲಿವುಡ್ (Kollywood) ಅಂಗಳದಲ್ಲಿ ಸದ್ಯ ಸುದ್ದಿಯಾಗಿರುವ ವಿಚಾರ ಅಂದರೆ ನಟಿ ಮೀನಾ- ಧನುಷ್ (Dhanush) ಮದುವೆ ಮ್ಯಾಟರ್. ಈ ಗಾಸಿಪ್ ದೊಡ್ಡ ಮಟ್ಟದಲ್ಲಿ ವೈರಲ್ ಆಗಿರೋ ಬೆನ್ನಲ್ಲೇ ಬಹುಭಾಷಾ ನಟಿ ಮೀನಾ (Meena) ಪ್ರತಿಕ್ರಿಯೆ ನೀಡಿದ್ದಾರೆ. ಧನುಷ್ ಜೊತೆಗಿನ ಮದುವೆ ವಿಚಾರಕ್ಕೆ ನಟಿ ಮೌನ ಮುರಿದಿದ್ದಾರೆ.
ಪುಟ್ನಂಜ, ಚೆಲುವ, ಗ್ರಾಮದೇವತೆ, ಸಿಂಹಾದ್ರಿಯ ಸಿಂಹ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಮೀನಾ ಬಗ್ಗೆ ಮದುವೆ ಸುದ್ದಿಯೊಂದು ಹರಿದಾಡುತ್ತಿದೆ. ಪತಿಯ ಸಾವಿನ ನೋವಿನಿಂದ ಚೇತರಿಸಿಕೊಂಡಿರುವ ನಟಿ ಮೀನಾ ಅವರು 2ನೇ ಮದುವೆಯಾಗುತ್ತಿದ್ದಾರೆ. ಕಾಲಿವುಡ್ ನಟ ಧನುಷ್ ಜೊತೆ ಮೀನಾ ಮದುವೆ ಎಂದು ಇತ್ತೀಚಿಗೆ ಸಂದರ್ಶನವೊಂದರಲ್ಲಿ ಬೈಲ್ವಾನ್ ರಂಗನಾಥನ್ ಬಾಂಬ್ ಸಿಡಿಸಿದ್ದರು. ಇದನ್ನೂ ಓದಿ: ಮಾಜಿ ಪತ್ನಿ, ಸಹೋದರನ ವಿರುದ್ಧ 100 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ನವಾಜುದ್ದೀನ್ ಸಿದ್ದಿಕಿ
ಬೈಲ್ವಾನ್ ರಂಗನಾಥನ್ ಆಡಿರುವ ಮಾತುಗಳು ಇದೀಗ ನಟಿ ಮೀನಾ ಅವರ ಕಿವಿಗೂ ಬಿದ್ದಿದೆ. ಪರಿಣಾಮ, ಎರಡನೇ ಮದುವೆ ಗಾಸಿಪ್ ಬಗ್ಗೆ ನಟಿ ಮೀನಾ ಮೌನ ಮುರಿದಿದ್ದಾರೆ. ಹಬ್ಬಿರುವ ಗಾಸಿಪ್ ಶುದ್ಧ ಸುಳ್ಳು ಎಂದು ಮೀನಾ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಮೀನಾ, ನಾನಿನ್ನೂ ಪತಿಯನ್ನ ಕಳೆದುಕೊಂಡ ನೋವಿನಲ್ಲಿದ್ದೇನೆ. ಇಂತಹ ಸಮಯದಲ್ಲಿ ಎರಡನೇ ಮದುವೆಯ ಗಾಸಿಪ್ ಹಬ್ಬಿರುವುದು ತೀರಾ ಬೇಸರ ತರಿಸಿದೆ. ವಿದ್ಯಾಸಾಗರ್ ನಿಧನದ ನೋವನ್ನ ಅರಗಿಸಿಕೊಳ್ಳುವುದೇ ಕಷ್ಟವಾಗುತ್ತಿದೆ. ಅಂಥದ್ರಲ್ಲಿ ಈ ತರಹದ ಗಾಸಿಪ್ ಹಬ್ಬಿದರೆ ತೀವ್ರ ನೋವುಂಟಾಗುತ್ತದೆ. ನನ್ನ ಗಮನ ಈಗ ಏನಿದ್ದರೂ ಮಗಳ ಭವಿಷ್ಯದ ಮೇಲೆ ಮಾತ್ರ. ಸಿನಿಮಾ ಹಾಗೂ ಪಾತ್ರಗಳ ಆಯ್ಕೆ ವಿಚಾರದಲ್ಲೂ ನಾನು ಚ್ಯೂಸಿ ಆಗಿದ್ದೇನೆ ಎಂದು ಮೀನಾ ಮಾತನಾಡಿದ್ದಾರೆ.